ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿದ್ದಾಗಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚಿನ್ನಯ್ಯನ ಮತ್ತೊಂದು ವೀಡಿಯೋ ಬಿಡುಗಡೆಯಾಗಿದೆ. ರಿಲೀಸ್ ಆಗಿರುವಂತ ವೀಡಿಯೋದಲ್ಲಿ ಆರೋಪಿ ಚಿನ್ನಯ್ಯ ಅವರು ಮಹೇಶ್ ತಿಮರೋಡಿ ಭೇಟಿಯಾದಂತ ವೀಡಿಯೋ ಇದಾಗಿದೆ.
ಎರಡು ವರ್ಷದ ಹಿಂದೆ ಆರೋಪಿ ಚಿನ್ನಯ್ಯ ಮಹೇಶ್ ಶೆಟ್ಟಿ ತಿಮರೋಡಿಯನ್ನು ಭೇಟಿಯಾಗಿದ್ದು ಎನ್ನಲಾದಂತ ವೀಡಿಯೋ ಇದಾಗಿದೆ. ಆರೋಪಿ ಚಿನ್ನಯ್ಯ ಪತ್ನಿ ಜೊತೆಗೆ ತೆರಳಿ ತಿಮರೋಡಿ ಭೇಟಿಯಾಗಿದ್ದರು. ಧರ್ಮಸ್ಥಳಕ್ಕೆ ಬಂದಿದ್ದಾಗ ವಿಠ್ಠಲಗೌಡನಿಗೆ ಚಿನ್ನಯ್ಯ ಸಿಕ್ಕಿದ್ದರಂತೆ. ಈ ವೇಳೆ ತಿಮರೋಡಿ ಮನೆಗೆ ಚಿನ್ನಯ್ಯನನ್ನು ವಿಠ್ಠಲಗೌಡ ಕರೆದೊಯ್ದಿದ್ದರಂತೆ.
2023ರ ಆಗಸ್ಟ್ ನಲ್ಲಿ ತಿಮರೋಡಿಯನ್ನು ಆರೋಪಿ ಚಿನ್ನಯ್ಯ ಭೇಟಿಯಾಗಿದ್ದರಂತೆ. ತಿಮರೋಡಿ ಭೇಟಿಯ ವೇಳೆಯಲ್ಲಿ ಶವಗಳ ಹೂತಿದ್ದ ಬಗ್ಗೆ ಚಿನ್ನಯ್ಯ ಹೇಳಿದ್ದರಂತೆ. ಗುಂಡಿ ತೆಗೆದು ಶವ ಹೂಳುತ್ತಿದ್ದೆ ಎಂಬುದಾಗಿ ತಿಮರೋಡಿಗೆ ಚಿನ್ನಯ್ಯ ಹೇಳಿದ್ದನಂತೆ. ಈ ಮತ್ತೊಂದು ವೀಡಿಯೋ ಈಗ ಬಿಡುಗಡೆ ಮಾಡಲಾಗಿದೆ.
ನವೆಂಬರ್.4ರಿಂದ ಬೆಂಗಳೂರಿನಲ್ಲಿ ಮೊಟ್ಟ ಮೊದಲ ಕೌಶಲ್ಯ ಶೃಂಗಸಭೆ: ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ
ರಾಜ್ಯದ ಜನತೆಗೆ ಗುಡ್ ನ್ಯೂಸ್: 10 ತಾಲ್ಲೂಕಲ್ಲಿ ಯೋಗ, ಪ್ರಕೃತಿ ಚಿಕಿತ್ಸಾ ಕೇಂದ್ರ ತೆರೆಯಲು ಸರ್ಕಾರ ಆದೇಶ