ಮಡಿಕೇರಿ: ರಾಜ್ಯದಲ್ಲಿ ವೈದ್ಯರು ಅಪರೂಪದ ಆಪರೇಷನ್ ಮಾಡಿದ್ದಾರೆ. ವ್ಯಕ್ತಿಯೊಬ್ಬರ ಕಣ್ಣಿನಲ್ಲಿದ್ದಂತ 10 ಸೆಂಟಿ ಮೀಟರ್ ಜೀವಂತ ಹುಳುವನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದಿದ್ದಾರೆ.
ಮಡಿಕೇರಿಯಲ್ಲಿ ವೈದ್ಯರಿಂದ ಅಪರೂಪದ ಆಪರೇಷನ್ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕ ಕಣ್ಣಿನಲ್ಲಿದ್ದ ಹುಳುವನ್ನು ವೈದ್ಯರು ಹೊರ ತೆಗೆದಿದ್ದಾರೆ. ಸುಮಾರು 10 ಸೆಂಟಿ ಮೀಟರ್ ಗೂ ಉದ್ದ ಜೀವಂತ ಹುಳು ಇತ್ತು ಎಂಬುದಾಗಿ ತಿಳಿದು ಬಂದಿದೆ.
ಕಣ್ಣಿನಲ್ಲಿ ತುರಿಕೆ ಎಂದು ವ್ಯಕ್ತಿ ಚಿಕಿತ್ಸೆಗೆ ಆಗಮಿಸಿದ್ದರು. ಪರೀಕ್ಷೆ ವೇಳೆ ಕಣ್ಣಿನ ಬಿಳಿ ಭಾಗದ ಪೊರೆಯಲ್ಲಿ ಹುಳು ಪತ್ತೆಯಾಗಿದೆ. ಡಾ.ಚಿಣ್ಣಪ್ಪ, ಡಾ.ಗುರುಪ್ರಸಾದ್ ರಿಂದ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಸ್ತ್ರ ಚಿಕಿತ್ಸೆ ಮೂಲಕ ಹುಳು ಹೊರತೆಗೆದಿದ್ದಾರೆ.
ಮಾನವನ ಕಣ್ಣು, ಮಿದುಳಿನಲ್ಲಿ ಈ ಹುಳ ಆಶ್ರಯ ಪಡೆಯುತ್ತೆ. ಪತ್ತೆ ಹಚ್ಚುವುದು ತಡವಾದ್ರೆ ಶಾಶ್ವತ ದೃಷ್ಟಿ ದೋಷ ಸಾಧ್ಯತೆ ಇದೆಯಂತೆ. ಬಿಳಿದಾರದ ರೀತಿಯ ಹುಳು ಲೋವಾ ಎಂದು ಗುರುತಿಸಲಾಗಿದೆ. ಆಫ್ರಿಕಾ ಭಾಗದಲ್ಲಿ ಹೆಚ್ಚಾಗಿ ಈ ಲೋವಾ ಹುಳು ಕಂಡು ಬರುತ್ತದೆ. ಇದು ಡೀರ್ ಫ್ಲೈ ಎಂಬ ನೊಣದ ಮೂಲಕ ಹರಡುವಂತ ಹುಳುವೆಂದು ವೈದ್ಯರು ತಿಳಿಸಿದ್ದಾರೆ.
ಮಾನವನ ದೇಹ ಪ್ರವೇಶಿಸುವಂತ ಲೋವಾ ಹೆಸರಿನ ಹುಳು, ಆ ಬಳಿಕ ಮಾನವನ ಕಣ್ಣು, ಮಿದುಳಿನಲ್ಲಿ ಆಶ್ರಯ ಪಡೆಯುತ್ತಂತೆ. ಈ ಹುಳುವನ್ನು ಪತ್ತೆ ಹಚ್ಚುವುದು ತಡವಾದ್ರೆ ಶಾಶ್ವತ ದೃಷ್ಟಿ ದೋಷ ಸಾಧ್ಯತೆ ಎಂದೇ ಹೇಳಲಾಗುತ್ತದೆ.
ಹಿಂದುತ್ವದ ಪರ ಹೋರಾಟ ಮಾಡಿದ್ರೆ ನನ್ನ ಮೇಲೆ ಕೇಸ್ ಹಾಕ್ತಾರೆ: ಪ್ರಮೋದ್ ಮುತಾಲಿಕ್ ವಾಗ್ಧಾಳಿ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ