ಮಂಡ್ಯ : ರಾಜ್ಯದಲ್ಲಿ ಹಿಂದುತ್ವದ ಪರ ಹೋರಾಟ ಮಾಡಿದ್ರೆ ನನ್ನ ಮೇಲೆ ರೌಡಿ ಕೇಸ್ ಹಾಕ್ತಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಶುಕ್ರವಾರ ವಾಗ್ಧಾಳಿ ನಡೆಸಿದರು.
ಮದ್ದೂರು ತಾಲೂಕಿನ ಗಡಿಭಾಗ ನಿಡಘಟ್ಟದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಿನ ಶಾಂತ ವಾತಾವರಣವನ್ನು ಹಾಳು ಮಾಡುತ್ತಿರುವುದು ಕಾಂಗ್ರೆಸ್ ಸರ್ಕಾರ ನಾವು ಯಾವುದೇ ಪ್ರತಿಭಟನೆಗೆ ಹೋಗುತ್ತಿಲ್ಲ. ಗಣೇಶ ಮೂರ್ತಿ ಮೆರವಣಿಗೆ ವೇಳೆ ನಡೆದ ಗಲಭೆಯಲ್ಲಿ ಪೋಲೀಸರು 500 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ವಕಾಲತ್ತು ವಹಿಸಲು ವಕೀಲರ ಜತೆ ಹೋಗುತ್ತಿದ್ದೇನೆ. ಆದರೆ, ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರ ನಮ್ಮನ್ನು ತಡೆಯುವ ನೀಚ ಕೆಲಸ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಮತ್ತು ಪೋಲೀಸರು ಕಲ್ಲು ಹೊಡೆದವರನ್ನು, ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಕಿಡಿಗೇಡಿಗಳ ಮೇಲೆ ಶೂಟ್ ಮಾಡಬೇಕು. ಇಲ್ಲಿ ಹುಟ್ಟಿ, ಬೆಳೆದು ನಮ್ಮ ಮೇಲೆ ಕಲ್ಲು ಎಸೆಯುತ್ತಾರೆ ಎಷ್ಟು ಸೊಕ್ಕು? ಅವರನ್ನು ಕಾಂಗ್ರೆಸ್ ಸರ್ಕಾರ ಪೋಷಿಸಿ ಬೆಳೆಸುತ್ತಿದೆ ಎಂದು ಆರೋಪಿಸಿದರು.
50 ವರ್ಷಗಳ ಹೋರಾಟ ನನ್ನದು. ನನ್ನ ಭಾಷಣದಿಂದ ಒಂದೇ ಒಂದು ಗಲಾಟೆ ಆಗಿಲ್ಲ. ಕಲ್ಲು ಎಸೆದು, ಪಾಕಿಸ್ತಾನ್ ಜಿಂದಾಬಾದ್ ಎಂದವರು, ಪ್ಯಾಲೆಸ್ತಿನ್ ಧ್ವಜ ಹಾರಿಸಿದವರು ಪ್ರಚೋದನೆ ಮಾಡ್ತಿದ್ದಾರೆ. ನಾವು ನಿಜ ಮಾತಾಡಿದ್ರೆ ಪ್ರಚೋದನೆ ಅಂತೀರಾ? ಪ್ರತಿಭಟನೆ ಮಾಡದಿದ್ರು ನಮ್ಮನ್ನು ತಡೆದು ಸಂವಿಧಾನ ವಿರೋಧಿ ಕೆಲಸ ಎಂದು ಪೊಲೀಸರು ನನ್ನ ವಿರುದ್ಧ ಕೇಸ್ ಹಾಕ್ತಾರೆ ಎಂದು ಕಿಡಿಕಾರಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಂತೆ ನಾವು ನಡೆಯುತ್ತಿದ್ದೇವೆ. ದೇಶ, ಧರ್ಮದ ವಿಚಾರ ಜನರಿಗೆ ತಲುಪದಂತೆ ಮಾಡ್ತಿದ್ದಾರೆ. ಹಿಂದೂ ನಾಯಕರು ಗಲಭೆ, ಗಲಾಟೆ ಮಾಡ್ತಾರೆಂದು ಬಿಂಬಿಸುತ್ತಾರೆ. ಗಲಾಟೆ, ಗಲಭೆ ಮಾಡುವವರು ಮುಸ್ಲಿಂ ಗುಂಡಾಗಳು. ತಡೆಯೋದಿದ್ದರೆ ಮುಸ್ಲಿಂ ಕಿಡಿಗೇಡಿಗಳನ್ನ ತಡೆಯಿರಿ ಎಂದರು.
ನನ್ನ ಮೇಲಿದ್ದ 30 ಪ್ರಕರಣಗಳು ಖುಲಾಸೆಗೊಂಡಿದೆ. ಆದರೂ ನಿರ್ಬಂಧ ಆದೇಶದಲ್ಲಿ ಸುಳ್ಳು ಕೇಸ್ ಹಾಕಿದ್ದಾರೆ. ಗಣೇಶ ಮೂರ್ತಿ ಮೇಲೆ ಕಲ್ಲು ಎಸೆಯುವವರಿಗೆ ಯಾರು ಪ್ರಚೋದನೆ ಕೊಟ್ಟಿದ್ದಾರೆ ಎಂಬುವುದನ್ನು ಕಾಂಗ್ರೆಸ್ ನವರೇ ಹೇಳಲಿ. ನಾವು ಕಲ್ಲು, ಬಾಂಬ್ ಹಿಡಿದರೆ ನೀವ್ಯಾರು ಉಳಿಯಲ್ಲ. ಸರ್ಕಾರ ಮತ್ತು ಪೊಲೀಸರು ನ್ಯಾಯ ಕೊಡ್ತಿಲ್ಲ. ನಮ್ಮ ದೇವರು, ದೇವಾಲಯದ ಮೇಲೆ ಇನ್ಮುಂದೆ ದಾಳಿ ಮಾಡಿದ್ರೆ ಹಿಂದೂ ಸಮಾಜವೇ ಮನೆಗೆ ನುಗ್ಗಿ ಹೊಡೆಯುತ್ತೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಮದ್ದೂರು ತಾಲೂಕಿನ ಗಡಿ ಭಾಗ ನಿಡಘಟ್ಟಕ್ಕೆ ಆಗಮಿಸಿದ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಕಾರನ್ನು ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೆಯಲ್ಲಿ ಪೊಲೀಸರು ಶುಕ್ರವಾರ ತಡೆದರು.
ಇದರಿಂದ ಆಕ್ರೋಶಗೊಂಡ ಪ್ರಮೋದ್ ಮುತಾಲಿಕ್ ಹಾಗೂ ಬೆಂಬಲಿಗರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರಿಗೂ ಹಾಗೂ ಮುತಾಲಿಕ್ ಅವರ ನಡುವೆ ಮಾತಿನ ಚಕಮಕಿ ನಡೆದು ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ನಂತರ ಪರಿಸ್ಥಿತಿ ತಿಳಿಗೊಂಡಿತು. ಬಳಿಕ ಪೋಲೀಸರು ನಿರ್ಬಂಧಕಾಜ್ಞೆ ಆದೇಶ ಪ್ರತಿಗೆ ಮುತಾಲಿಕ್ ಅವರಿಂದ ಸಹಿ ಹಾಕಿಸಿಕೊಂಡು ವಾಪಸ್ಸು ಬೆಂಗಳೂರಿಗೆ ಕಳುಹಿಸಿದರು.
ಪ್ರಮೋದ್ ಮುತಾಲಿಕ್ ಅವರು ಮದ್ದೂರು ಪಟ್ಟಣಕ್ಕೆ ಆಗಮಿಸಿದರೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕದಡುವ ಸಾಧ್ಯತೆ ಇರುತ್ತದೆ ಎಂಬ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ಜಿಲ್ಲೆಗೆ ಪ್ರವೇಶಿಸದಂತೆ ಜಿಲ್ಲಾಧಿಕಾರಿ ಡಾ. ಕುಮಾರ ಪ್ರತಿಬಂಧಕಾಜ್ಞೆ ಆದೇಶ ಹೊರಡಿಸಿದ್ದರು.
ಇದೇ ವೇಳೆ ಮುಖಂಡರಾದ ಕೆ.ಜಿ.ಗುರುಮಲ್ಲೇಶ್, ವೀರಭದ್ರಸ್ವಾಮಿ, ಜಗನ್ನಾಥ್, ಅಭಿ, ಸುರೇಶ್, ಸ್ವಾಮಿ, ಮಲ್ಲಿಕಾರ್ಜುನ, ದಿನೇಶ್, ಗಿರೀಶ್, ಚೈತನ್ಯ ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಶಿವಮೊಗ್ಗ: ನಾಳೆ ಸಾಗರದ ‘ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನ’ದ ಸರ್ವ ಸದಸ್ಯರ ಸಭೆ
ರಾಜ್ಯದ ರೈತರ ಜಮೀನುಗಳಿಗೆ ಕಾಲುದಾರಿ, ಬಂಡಿದಾರಿ ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ