ಬೆಂಗಳೂರು : ಸಾಹಸನ ಸಿಂಹ ಡಾ.ವಿಷ್ಣುವರ್ಧನ್ ಅವರ 25 ಅಡಿ ಎತ್ತರ ಪ್ರತಿಮೆ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಈ ಕುರಿತು ನಟ ಕಿಚ್ಚ ಸುದೀಪ್ ಸೋಶಿಯಲ್ ಮೀಡಿಯಾದಲ್ಲಿ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ.
ಹೌದು,ನಟ ವಿಷ್ಣುವರ್ಧನ್ ಅವರ 75 ನೇ ಹುಟ್ಟುಹಬ್ಬದ ಅಂಗವಾಗಿ ಈ ಯೋಜನೆಯ ನೀಲಿ ನಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಸುದೀಪ್, ಉದ್ಯಮಿ ಅಶೋಕ್ ಖೇಣಿ, ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಜೊತೆಗೂಡಿ ಈ ಜಾಗ ಖರೀದಿಸಿದ್ದಾರೆ. ಈ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ, ಪುಸ್ತಕ ಬಂಡಾರ, ಫೋಟೋ ಗ್ಯಾಲರಿ ನಿರ್ಮಾಣ ಮಾಡಲಾಗುತ್ತದೆ. ಪ್ರತಿದಿನ ಸಂಜೆ 6 :30 ಕ್ಕೆ ಲೇಸರ್ ಶೋ ಕೂಡ ನಡೆಯಲಿದೆ. ಕ್ಷೇತ್ರದ ನಿರ್ಮಾಣಕ್ಕಾಗಿ 500 ಅಭಿಮಾನಿಗಳಿಂದ ದೇಣಿಗೆ ಸಂಗ್ರಹ ಮಾಡಲಾಗುವುದು. 1 ವರ್ಷದಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದು ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಕರ್ನಾಟಕ ರತ್ನ ಸನ್ಮಾನವೂ ನಮ್ಮೆಲ್ಲರ ಹೃದಯ ತುಂಬಿಸಿದೆ: ಸುದೀಪ್
75 ನೇ ಹುಟ್ಟುಹಬ್ಬದ ಶುಭ ಸಂಧರ್ಭ ದಂದು -ನಿಮ್ಮ ಕಾಲಾತೀತ ಸಾಧನೆ, ಭಾರತೀಯ ಚಿತ್ರ ರಂಗಕ್ಕೆ ಸರಿಸಾಟಿ ಇಲ್ಲದ ಅಪಾರ ಕೊಡುಗೆಗಳಿಗಾಗಿ ತಲೆಬಾಗುತ್ತೇವೆ. ಚಿರ ಸ್ಮರಣೀಯ ಡಾ. ವಿಷ್ಣುವರ್ಧನ್ ಸರ್ ನಿಮಗೆ ಸಂದ ಕರ್ನಾಟಕ ರತ್ನ ಸನ್ಮಾನವೂ ನಮ್ಮೆಲ್ಲರ ಹೃದಯ ತುಂಬಿಸಿದೆ. ನೀವು ನಮ್ಮ ಎಲ್ಲರಿಗೂ ಸದಾ ಸ್ಪೂರ್ತಿ
A dream and an offering from the devotees to their idol.🙏🏼♥️#DrVishnuvardhan75thBirthday pic.twitter.com/GH5K9lRdav
— Kichcha Sudeepa (@KicchaSudeep) September 18, 2025
75 ನೇ ಹುಟ್ಟುಹಬ್ಬದ ಶುಭ ಸಂಧರ್ಭ ದಂದು -ನಿಮ್ಮ ಕಾಲಾತೀತ ಸಾಧನೆ, ಭಾರತೀಯ ಚಿತ್ರ ರಂಗಕ್ಕೆ ಸರಿಸಾಟಿ ಇಲ್ಲದ ಅಪಾರ ಕೊಡುಗೆಗಳಿಗಾಗಿ ತಲೆಬಾಗುತ್ತೇವೆ. ಚಿರ ಸ್ಮರಣೀಯ ಡಾ. ವಿಷ್ಣುವರ್ಧನ್ ಸರ್ ನಿಮಗೆ ಸಂದ ಕರ್ನಾಟಕ ರತ್ನ ಸನ್ಮಾನವೂ ನಮ್ಮೆಲ್ಲರ ಹೃದಯ ತುಂಬಿಸಿದೆ. ನೀವು ನಮ್ಮ ಎಲ್ಲರಿಗೂ ಸದಾ ಸ್ಪೂರ್ತಿ
Happy birthday sir… pic.twitter.com/eUVgAXuaDh— Kichcha Sudeepa (@KicchaSudeep) September 18, 2025