ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಅವರು ತಮ್ಮದೇ ಆದ ನೋಟದಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮುನ್ನೋಟ ಹೊಂದಿದ್ದಾರೆ. ಸೈದ್ಧಾಂತಿಕವಾಗಿ ಅವರನ್ನು ವಿರೋಧ ಮಾಡಲು ಆಗದೆ ಇರುವವರು ಈ ರೀತಿಯಾಗಿ ಹಿಂಭಾಗಿಲ ಮೂಲಕ ತೇಜೋವಧೆ ಮಾಡಲು ಪ್ರಯತ್ನ ಮಾಡಲಾಗುತ್ತಿದೆ ಎಂಬುದಾಗಿ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ವಾಗ್ಧಾಳಿ ನಡೆಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಕರ್ನಾಟಕದಲ್ಲಿ ತಿಂದು ಉಂಡು ಮಜಾ ಮಾಡಿ ಕರ್ನಾಟಕದ ವಿರುದ್ಧ ಮಾತನಾಡುವುದನ್ನು ಯಾರು ಕೂಡ ಸಹಿಸಲು ಸಾಧ್ಯವಿಲ್ಲ. ಕೆಲವೊಂದಷ್ಟು ಜನ ನಾವೇ ದೊಡ್ಡ ಉದ್ಯಮಿಗಳು ಎಂದುಕೊಂಡು ಕರ್ನಾಟಕ ಸರ್ಕಾರವನ್ನು ಟೀಕಿಸುವ ಕೆಲಸ ಮಾಡುತ್ತಿದ್ದಾರೆ ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಬೇಕು ಕೈಗಾರಿಕೆ ಬೆಳೆಯಬೇಕು ಎಂದು ಕರ್ನಾಟಕ ಸರ್ಕಾರ ಬಹಳ ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬರುತ್ತಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಮ್ಮದೇ ಆದ ನೋಟದಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮುನ್ನೋಟ ಹೊಂದಿದ್ದಾರೆ. ಸೈದ್ಧಾಂತಿಕವಾಗಿ ಅವರನ್ನು ವಿರೋಧ ಮಾಡಲು ಆಗದೆ ಇರುವವರು ಈ ರೀತಿಯಾಗಿ ಹಿಂಭಾಗಿಲ ಮೂಲಕ ತೇಜೋವಧೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಗುಡುಗಿದ್ದಾರೆ.
ಸ್ವಯಂ ಘೋಷಿತ ಕೈಗಾರಿಕೋದ್ಯಮಿಗಳು ಸರ್ಕಾರಕ್ಕೆ ಸಲಹೆಯನ್ನು ನೀಡಿ. ಆದರೆ ಇನ್ಯಾವುದೋ ಪಕ್ಷದ ಜೊತೆಗೆ ಕೈಜೋಡಿಸಿಕೊಂಡು ಬೆಂಗಳೂರಿನ ಬಗ್ಗೆ ಕೇವಲ ಟೀಕೆ ಮಾಡದಿರಿ. ನಮ್ಮ ನೆಲ ಜಲ ಭಾಷೆಯ ಬಗ್ಗೆ ಟೀಕೆ ಮಾಡುವುದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಹಾಸ್ಯ ನಟ ಎನ್ಎಸ್ ರಾವ್ ಅವರು ಕಿಲಕಿಲ ಎಂದು ಹಾಸ್ಯ ಮಾಡುತ್ತಿದ್ದರು. ಮೋಹನ್ ದಾಸ್ ಪೈ ಅವರು ಯಾವುದೇ ಸರ್ಕಾರ ಇರಲಿ ಯಾವುದೇ ಪಕ್ಷವಿರಲಿ ಸುಮ್ಮನೆ ಟೀಕೆ ಮಾಡಬೇಕು ಎಂದು ಮಾಡುತ್ತಿದ್ದಾರೆ. ದಯವಿಟ್ಟು ನೀವು ಹಾಸ್ಯ ನಟರ ಪಂಕ್ತಿಗೆ ಸೇರಿಕೊಳ್ಳಬೇಡಿ. ನೀವು ಸಲಹೆ ನೀಡಿದರೆ ಸಲಹೆಯನ್ನು ಸ್ವೀಕರಿಸಲಾಗುತ್ತದೆ ಇದೇ ರೀತಿ ಟೀಕೆ ಮಾಡುತ್ತಿದ್ದರೆ ಜಲಸಾಮಾನ್ಯರು ಸಹ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.
BSY, ವಿಜಯೇಂದ್ರ ಮತ್ತಿತರರ ವಿರುದ್ಧದ ಭ್ರಷ್ಟಾಚಾರ ಆರೋಪ: ಲೋಕಾಯುಕ್ತದಿಂದ ಕೋರ್ಟ್ ಗೆ ಬಿ-ರಿಪೋರ್ಟ್ ಸಲ್ಲಿಕೆ