ಬೆಂಗಳೂರು: ಮಂಡ್ಯದಲ್ಲಿ ಅರೆ ನಗ್ನಾವಸ್ಥೆಯಲ್ಲಿ ಬಟ್ಟೆ ಬಿಚ್ಚಿ ರಂಪಾಟವನ್ನು ಬಿಎಂಟಿಸಿ ಚಾಲಕ ಮೆರೆದಿದ್ದಾರೆ ಎನ್ನುವಂತ ವೀಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಂತ ಈ ವೀಡಿಯೋ ಬಗ್ಗೆ ನಿಗಮವು ಆತ ನಮ್ಮ ಚಾಲಕನಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಬಿಎಂಟಿಸಿ ಮಾಹಿತಿ ನೀಡಿದ್ದು, ಈ ದಿನ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಸುದ್ದಿ ವಾಹಿನಿಗಳಲ್ಲಿ ವೈರಲ್ ಆಗಿರುವ “ಫುಲ್ ಟೈಟಾಗಿ ಬಸ್ ಸ್ಟ್ಯಾಂಡ್‌ನಲ್ಲಿ ಬಿಎಂಟಿಸಿ ಚಾಲಕನ ರಂಪಾಟ” ಎಂಬ ಶೀರ್ಷಿಕೆಯ ವೀಡಿಯೋ ತುಣುಕು ಗಮನಿಸಲಾಗಿದೆ. ಸಂಸ್ಥೆಯ ಭದ್ರತಾ ಹಾಗೂ ಜಾಗ್ರತ ವಿಭಾಗವು ತಕ್ಷಣವೇ ವಿಷಯವನ್ನು ಪರಿಶೀಲಿಸಿದ್ದು, ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿಯು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರನಲ್ಲ ಎಂಬುದು ಖಚಿತವಾಗಿದೆ ಎಂದಿದೆ.
ಈ ಘಟನೆ ಮಂಡ್ಯ ಬಸ್ ನಿಲ್ದಾಣದಲ್ಲಿ ನಡೆದಿದೆ. ಹೀಗಾಗಿ ಬಿಎಂಟಿಸಿಗೆ ಸಂಬಂಧಿಸದ ಘಟನೆಗೆ ಸಂಸ್ಥೆಯ ಹೆಸರನ್ನು ಜೋಡಿಸಿ ಪ್ರಚಾರ ಮಾಡಿರುವುದು ಸತ್ಯಕ್ಕೆ ದೂರವಾದದ್ದಾಗಿದೆ ಎಂಬುದಾಗಿ ತಿಳಿಸಿದೆ.
BREAKING: ಅತ್ಯಾಚಾರ ಪ್ರಕರಣದಲ್ಲಿ ಲಲಿತ್ ಮೋದಿ ಸಹೋದರ ಸಮೀರ್ ಮೋದಿ ಅರೆಸ್ಟ್ | Samir Modi Arrest