ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳ ಸೀಟು ಹಂಚಿಕೆಗೆ ಇಚ್ಛೆ/ಆಯ್ಕೆಗಳನ್ನು ಮರುಕ್ರಮಗೊಳಿಸಲು ಸೆ.19ರಂದು ಬೆಳಿಗ್ಗೆ 7 ಗಂಟೆವರೆಗೆ ಸಮಯ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಕೆಸೆಟ್: ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ
ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-25 (ಕೆಸೆಟ್)ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೆ.24ರವರೆಗೆ ದಿನಾಂಕ ವಿಸ್ತರಿಸಲಾಗಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.
ಸೆ.25ರೊಳಗೆ ಶುಲ್ಕ ಪಾವತಿಸಬೇಕು. ಇದು ಕೊನೆ ವಿಸ್ತರಣೆಯಾಗಿದ್ದು ಪುನಃ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿಂಡೆನ್‌ಬರ್ಗ್‌ನ ವಂಚನೆ ಆರೋಪಗಳಲ್ಲಿ ‘ಅದಾನಿ ಗ್ರೂಪ್’ಗೆ ಸೆಬಿ ಕ್ಲೀನ್ ಚಿಟ್
‘ಸಾಗರ ಜಿಲ್ಲೆ ಹೋರಾಟ’ಕ್ಕೆ ಬೀದಿಗಿಳಿದ ಜನತೆ: ಮೊಳಗಿದ ‘ಸಾಗರ ಜಿಲ್ಲೆ ನಮ್ಮ ಹಕ್ಕು’ ಘೋಷಣೆ