ಶಿವಮೊಗ್ಗ: ನಮ್ಮ ಸರ್ಕಾರ ರೈತರ ಪರವಾಗಿದೆ. ರೈತರ ಪರ ಒಲವಿರುವಂತ ಸರ್ಕಾರ ನಮ್ಮದಾಗಿದೆ. ಈ ರೈತರಿಗೆ ಸಾಲ ಸೌಲಭ್ಯ ಒದಗಿಸಲು ನಬಾರ್ಡ್ ನಿಂದ ಹಣ ಬಿಡುಗಡೆ ಮಾಡಬೇಕು ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಒತ್ತಾಯಿಸಿದರು.
ಇಂದು ತಾಳಗುಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಡಿಸಿಸಿ ಬ್ಯಾಂಕ್ ಗಳಲ್ಲಿ ರಾಜಕೀಯ ಹಸ್ತಕ್ಷೇಪವಿರಬಾರದು. ಅವುಗಳು ರಾಜಕೀಯ ಹೊರತಾಗಿ ಇರಬೇಕು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಗಳು ರೈತರ ಏಳಿಗೆಗಾಗಿ ಕಟ್ಟಿರೋವಂತದ್ದು ಎಂಬುದಾಗಿ ಅಭಿಪ್ರಾಯ ಪಟ್ಟರು.
ರೈತರ ಮೇಲೆ ನಂಬಿಕೆಯಿಂದ ಡಿಸಿಸಿ ಬ್ಯಾಂಕ್ ನಿಂದ ಸಾಲಸೌಲಭ್ಯ ನೀಡಲಾಗುತ್ತಿದೆ. ಅಷ್ಟೇ ರೈತರು ನಂಬಿಕೆಯನ್ನು ಉಳಿಸಿಕೊಂಡು ಮರುಪಾವತಿ ಕೂಡ ಮಾಡುತ್ತಿದ್ದಾರೆ. ರೈತರು ಕಟ್ಟುವಂತ ಮರುಪಾವತಿ ಸಾಲಗಳಿಂದಲೇ ಡಿಸಿಸಿ ಬ್ಯಾಂಕ್ ಗಳು ಇಷ್ಟು ದೊಡ್ಡ ಮಟ್ಟಕ್ಕೆ ರಾಜ್ಯದಲ್ಲಿ ಬೆಳೆಯಲು ಸಾಧ್ಯವಾಗಿದೆ. ರೈತರು ಸಾಲ ಮರುಪಾವತಿಸಿ ಎಂದರು.
ಕೇಂದ್ರ ಸರ್ಕಾರದಿಂದ 200 ಕೋಟಿ ನಬಾರ್ಡ್ ಹಣ ಬಿಡುಗಡೆ ಆಗಬೇಕಿತ್ತು. ಆದರೇ ಅದು ಆಗದೇ ರೈತರಿಗೆ ಸಾಲಸೌಲಭ್ಯ ದೊರೆಯದೇ ಕಷ್ಟವಾಗಿದೆ ಎಂಬುದಾಗಿ ಹೇಳಿದರು.
ಸಂಘದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿದರ ಬಗ್ಗೆ ಪ್ರಸ್ತಾಪಿ ಮಾತನಾಡಿದಂತ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಜಿಲ್ಲಾ ಉಸ್ತುವಾರಿ ಸಚಿವ, ಈ ಕ್ಷೇತ್ರದ ಶಾಸಕರಾಗಿರುವಂತ ಮಧು ಬಂಗಾರಪ್ಪ ಜೊತೆಗೆ ಚರ್ಚಿಸುತ್ತೇನೆ. ಅವರಿಂದ ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡಕ್ಕೆ ಬೇಕಿರುವಂತ ಅನುದಾನ ಕೊಡಿಸೋದಕ್ಕೆ ಪ್ರಯತ್ನಿಸುತ್ತೇನೆ. ನಾನು ಕೂಡ ಡಿಸಿಸಿ ಬ್ಯಾಂಕ್ ನಿಂದ ಎಷ್ಟು ನೆರವು ಸಿಗಲಿದೆಯೋ ಅದನ್ನು ದೊರಕಿಸಿಕೊಡುವಂತ ಕೆಲಸ ಮಾಡಲಿದ್ದೇನೆ ಎಂದರು.
ಈ ಕ್ಷೇತ್ರದ ಜನರನ್ನು ನಾನೆಂದು ಮರೆಯುವುದಿಲ್ಲ. 2004ರಲ್ಲಿ ನನಗೆ ಶಾಸಕನಾಗುವಂತ ಅವಕಾಶ ಮಾಡಿಕೊಟ್ಟಿದ್ದು ಈ ಜನರು. ತಾಳಗುಪ್ಪ ವ್ಯಾಪ್ತಿಯ ಜನರ ಸೇವೆಗೆ ನಾನು ಸದಾಸಿದ್ಧ ಎಂದು ಹೇಳಿದರು.
ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಕಗ್ಗೆ ಮರತ್ತೂರು ಮಾತನಾಡಿ, ನಮ್ಮ ಸಂಘವು ಈ ವರ್ಷ 7,27,381 ಲಾಭಾಂಶವನ್ನು ಪಡೆದಿರುತ್ತದೆ. ಇದಕ್ಕೆಲ್ಲ ಸಂಘದ ಸದಸ್ಯರು ಸಾಲವನ್ನು ಸಕಾಲಕ್ಕೆ ಮರುಪಾವತಿಸಿದ್ದೇ ಕಾರಣವಾಗಿದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಟ್ಟು 1 ಕೋಟಿ 9 ಲಕ್ಷದ 47,600 ಷೇರು ಹಣ ಬಂದಿದೆ. 5 ಕೋಟಿ 9 ಲಕ್ಷ ಠೇವಣಿಯನ್ನು ಇಡಲಾಗಿದೆ. 9 ಕೋಟಿ 50 ಲಕ್ಷವನ್ನು ಈ ವರ್ಷ ಸಾಲವಾಗಿ ರೈತರಿಗೆ ನೀಡಲಾಗಿದೆ. ನಮ್ಮಲ್ಲಿ ಒಟ್ಟು 1,639 ಷೇರುದಾರರು ಇದ್ದಾರೆ ಎಂಬುದಾಗಿ ತಿಳಿಸಿದರು.
ಈ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಪ್ರಹ್ಲಾದ್ ಪ್ರಾರ್ಥಿಸಿದರೇ, ಶ್ರೀಕಾಂತ್ ಗುಡ್ಡೇಮನೆ ಸ್ವಾಗತಿಸಿದರು, ಮಾಜಿ ಉಪಾಧ್ಯಕ್ಷ ಸುರೇಶ್.ಕೆ.ಹೆಚ್ ವಂದಿಸಿದರು. ಪ್ರಹ್ಲಾದ್ ಪ್ರಾರ್ಥಿಸಿದರು. ಈ ಸಭೆಯಲ್ಲಿ ಉಪಾಧ್ಯಕ್ಷ ಅಣ್ಣಪ್ಪ.ಸಿ, ನಿರ್ದೇಶಕರಾದಂತ ಸುರೇಶ್ ಕೆ ಹೆಚ್, ಕೆ ಆರ್ ಮುರಳೀಧರ, ರಾಮಪ್ಪ ಬಿ.ಸಿ, ಅಶೋಕ್.ಆರ್, ಜಗದೀಶ್ ಸುಬ್ರಾಯ ನಾಯ್ಕ್, ಬಿ.ಲಕ್ಷ್ಮಣ್, ಸ್ವಪ್ನ.ಎಸ್, ಶಶಿಕಲಾ, ಕ್ಷೇತ್ರಾಧಿಕಾರಿ ಸಂತೋಷ್ ಕುಮಾರ್, ಸೇರಿದಂತೆ ಇತರರು ಹಾಜರಿದ್ದರು.
ತಾಳಗುಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಂದ್ರ.ಹೆಚ್.ಆರ್, ಸಿಬ್ಬಂದಿಗಳಾದಂತ ಮಾರಾಟ ಗುಮಾಸ್ತ ತಿರುಪತಿ ಡಿ.ಜಿ, ಅಟೆಂಡರ್ ಗಣಪತಿ ಎಂ.ಡಿ, ಸಹಾಯಕರಾದ ಮಂಜಪ್ಪ, ಸವಿತಾ, ಮೇಘರಾಜ, ಜ್ಯೋತಿ, ಪಿಗ್ಮಿ ಸಂಗ್ರಹಕಾರ ಸುರೇಶ್.ಹೆಚ್, ಸಿದ್ದಲಿಂಗೇಶ್.ಎಸ್, ಆರ್ ಡಿ ಸಂಗ್ರಹಕಾರರಾದ ಯಶೋಧಾ.ವಿ, ನರಸಿಂಹಮೂರ್ತಿ, ಶೋಭಾ, ನವೀನ್ ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಚುನಾವಣಾ ಅಕ್ರಮದ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆಯೇ ಹೊರತು ದಾಖಲೆ ನೀಡ್ತಿಲ್ಲ: ಆರ್.ಅಶೋಕ್
ಕರ್ನಾಟಕಕ್ಕೆ ಯೂರಿಯಾ ತ್ವರಿತವಾಗಿ ಪೂರೈಸಿ: ಕೇಂದ್ರ ಸಚಿವ ಶಿವರಾಜ್ ಸಿಂಗ್ ಗೆ ರಣದೀಪ್ ಸುರ್ಜೇವಾಲ ಪತ್ರ