ಕೃಷಿ ಇಲಾಖೆಯಿಂದ 2025-26ನೇ ಸಾಲಿನ ಪಿಎಂ – ಆರ್.ಕೆ.ವಿ.ವೈ – ಪಿಡಿಎಂಸಿ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕವನ್ನು ಸರ್ಕಾರದ ಸಹಾಯಧನದಡಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹಾತ್ವಕಾಂಶಿ ಯೋಜನೆಯಲ್ಲೊಂದಾದ ಪಿಎಂ – ಆರ್.ಕೆ.ವಿ.ವೈ – ಪಿಡಿಎಂಸಿ ಯೋಜನೆಯ ಸೂಕ್ಷ್ಮ ನೀರಾವರಿ ಯೋಜನೆಯಡಿ ತುಂತುರು ನೀರಾವರಿ ಘಟಕವನ್ನು (ಸ್ಪ್ರಿಂಕ್ಲರ್ಸ್) ಶೇ. 90 ರಷ್ಟು ಸರ್ಕಾರ ಸಹಾಯಧನದಡಿ ವಿತರಿಸಲಾಗುತ್ತಿದೆ. ರೈತರು ಹೊಂದಿರುವ ಹಿಡುವಳಿಗನುಗುಣವಾಗಿ ಗರಿಷ್ಟ 5 ಹೆಕ್ಟರ್ ವರೆಗೆ ಸರ್ಕಾರದಿಂದ ಸಹಾಯಧನ ಪಡೆಯಲು ಅವಕಾಶವಿರುತ್ತದೆ. ಈ ಯೋಜನೆಯಡಿಯಲ್ಲಿ ಎಲ್ಲಾ ವರ್ಗದ ರೈತರಿಗೆ ಮೊದಲು 2 ಹೆಕ್ಟರ್ ಪ್ರದೇಶದವರಗೆ ಶೇ. 90 ರಷ್ಟು ಮತ್ತು 2 ಹೆಕ್ಟರ್ ತದನಂತರದ ಪ್ರದೇಶಕ್ಕೆ ನಂತರ ಶೇ 45 ರಷ್ಟು ಸಹಾಯಧನ ಪಡೆಯಬಹುದಾಗಿದೆ.
2 ಹೆಕ್ಟರ್ಗೆ ಸಂಭಂದಿಸಿದಂತೆ ಈಗಾಗಲೇ 1 ಹೆಕ್ಟರ್ಗೆ ಸಹಾಯಧನ ಪಡೆದಿದ್ದಲ್ಲಿ ಅಂತಹ ರೈತರಿಗೆ ಬಾಕಿ 1 ಹೆಕ್ಟರ್ಗೆ 90% ಸಹಾಯಧನ ಪಡೆಯಬಹುದಾಗಿರುತ್ತದೆ. ಈಗಾಗಲೇ 2025-26ನೇ ಸಾಲಿನ ಕ್ರೀಯಾ ಯೋಜನೆಯನ್ನು ಕೇಂದ್ರ ಕಛೇರಿಯಿಂದ ಅನುಮೋದನೆಗೊಂಡಿದ್ದು, ಜೇಷ್ಟತಾ ಆಧಾರದ ಮೇಲೆ ಸರ್ಕಾರದಿಂದ ಸಹಾಯಧನದಡಿ ಸ್ಪ್ರಿಂಕ್ಲರ್ ಪಡೆಯುವ ಇಚ್ಚಿತ ರೈತರು ಅಗತ್ಯ ದಾಖಲಾತಿಗಳೊಂದಿಗೆ ತಕ್ಷಣವೇ ಸಂಬಂಧಿಸಿದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಿ ಸರ್ಕಾರದ ಸೌಲಭ್ಯವನ್ನು ಪಡೆಯಲು
ಆಸಕ್ತ ರೈತರು ಪಹಣಿ, ಆಧಾರ ಕಾರ್ಡ ಪ್ರತಿ, ರೈತರ ಎಫ್.ಐ.ಡಿ ಸಂಖ್ಯೆ, ನೀರಾವರಿ ಧೃಡೀಕರಣ ಪ್ರಮಾಣ ಪತ್ರ (ಕಡ್ಡಾಯ), ಛಾಪ ಕಾಗದ ಮೇಲೆ ಮುಚ್ಚಳಿಕೆ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಪಾಸ್ ಪೋರ್ಟ ಸೈಜ್ ಇತ್ತಿಚ್ಚಿನ ಎರಡು ಭಾವಚಿತ್ರ, ಪರಿಶಿಷ್ಟ ಜಾತಿ & ಪರಿಷ್ಟ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರದ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಎಲ್ಲಾ ವರ್ಗದ ರೈತರಿಗೆ ಮಾರ್ಗಸೂಚಿ ಪ್ರಕಾರ ಒಮ್ಮೆ ಸೂಕ್ಷ್ಮ ನೀರಾವರಿ ಘಟಕವನ್ನು ಸಹಾಯಧನದಡಿ ಪಡೆದ ನಂತರ ಈ ರೈತರಿಗೆ 7 ವರ್ಷಗಳವರೆಗೆ ಸಹಾಯಧನ ಪಡೆಯಲು ಅವಕಾಶವಿರುವುದಿಲ್ಲ ಎಂದು ಕೊಪ್ಪಳ ಉಪ ಕೃಷಿ ನಿರ್ದೆಶಕರು-1 ಪ್ರಕಟಣೆಯಲ್ಲಿ ತಿಳಿಸಿದ್ದಾರೆ.