ಬೆಂಗಳೂರು : ದರ್ಶನ್ಗೆ ಹೆಚ್ಚುವರಿ ದಿಂಬು, ಹಾಸಿಗೆ ನೀಡದಿರುವ ಆರೋಪ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಇದೀಗ ದರ್ಶನ್ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಯಿತು. ಕೋರ್ಟ್ ಆದೇಶವಿದ್ದರೂ ದರ್ಶನ್ಗೆ ಸೌಲಭ್ಯ ನೀಡಿಲ್ಲ ಎಂದು ಬೆಂಗಳೂರಿನ 57ನೇ CCH ಕೋರ್ಟ್ ನಲ್ಲಿ ದರ್ಶನ್ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಅರ್ಜಿಯ ಆದೇಶವನ್ನು ಸೆ.19ಕ್ಕೆ ಆದೇಶ ಕಾಯ್ದಿರಿಸಿ ಕೋರ್ಟ್ ಆದೇಶಿಸಿತು.
ಸೆಪ್ಟೆಂಬರ್ 15ರಂದು ಕೋರ್ಟ್ಗೆ ದರ್ಶನ್ ಪರ ವಕೀಲ ಸುನಿಲ್ ಅರ್ಜಿ ಸಲ್ಲಿಸಿದ್ದರು. ಈ ವೇಳೆ ದರ್ಶನ್ ಪರ ವಕೀಲ ಸುನೀಲ್ ವಾದ ಆರಂಭಿಸಿದರು. ಕೋರ್ಟ್ ಆದೇಶವಿದ್ದರೂ ದರ್ಶನಿಗೆ ಕನಿಷ್ಠ ಸೌಲಭ್ಯ ನೀಡಿಲ್ಲ. ಬೆಳಿಗ್ಗೆ ಮತ್ತು ಸಂಜೆ ಅರ್ಧ ಗಂಟೆ ವಾಕಿಂಗ್ ಗೆ ಅವಕಾಶ ನೀಡಲಾಗಿದೆ. ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಅಧಿಕಾರಿಗಳು ಇದನ್ನು ತುಂಬಾ ಕ್ಯಾಶುಯಲ್ ಆಗಿ ತೆಗೆದುಕೊಂಡಿದ್ದಾರೆ ಎಂದು ವಾದ ಮಂಡಿಸಿದರು.
ವರದಿಯಲ್ಲಿ ಏನು ಬೇಕಾದರೂ ಬರೆದುಕೊಂಡು ಬರಬಹುದು ನಾವು ಜೈಲು ವಿಭಾಗದ ವಿರುದ್ಧ ಆರೋಪ ಮಾಡುತ್ತಿದ್ದೇವೆ. ಕೇವಲ 14 ದಿನ ಮಾತ್ರ ಕ್ವಾರಂಟೈನ್ ಮಾಡಬೇಕಿದೆ ಆದರೆ ಇವರು ತಿಂಗಳು ಕಳೆದರೂ ಅಲ್ಲಿಗೆ ಇದ್ದಾರೆ. ನ್ಯಾಯಾಲಯ ಆದೇಶ ಮಾಡಿದ ಬಳಿಕವು ಏನು ಕೊಟ್ಟಿಲ್ಲ ಜೈಲಿನಲ್ಲಿದ್ದು ಇವತ್ತಿಗೆ 32ನೇ ದಿನವಾಗಿದೆ. ಇನ್ನೂ ಸಹ ಕ್ವಾರಂಟೈನ್ ಜೈಲಿನಲ್ಲಿಯೇ ಇಟ್ಟಿದ್ದಾರೆ ಬೆಡ್ ಶೀಟ್ ರಗ್ಗು ಬಕೆಟ್ ಇದನ್ನು ಮೊದಲೇ ನೀಡಿದ್ದಾರೆ. ಎಂದು ದರ್ಶನ್ ಪರ ವಕೀಲ ಸುನಿಲ್ ವಾದ ಮಂಡಿಸಿದರು.
ಮೊದಲು ಕೇಳಿದರೆ ಕೋರ್ಟ್ ಆರ್ಡರ್ ತಗೊಂಡು ಬನ್ನಿ ಅಂತಾರೆ. ನಂತರ ಅದನ್ನು ಹೇಗೆ ಇಂಪ್ಲಿಮೆಂಟ್ ಮಾಡಬೇಕು ಅಂತಾರೆ. ಪಕ್ಕದ ಸೇಲ್ ನಲ್ಲಿ ಪಾಕಿಸ್ತಾನದವರು ಇದ್ದಾರೆ ಅವರಿಗೆ ಚೆಸ್ ಕೇರಂ ಮತ್ತು ಟಿವಿ ಕೊಟ್ಟಿದ್ದಾರೆ. ನಮ್ಮ ಹತ್ತಿರ ಫೋಟೋ ಇದೆ ಪ್ರೊಡ್ಯೂಸ್ ಮಾಡ್ತೀವಿ ಸಮಯ ಬಂದಾಗ ಅದನ್ನು ಪ್ರೊಡ್ಯೂಸ್ ಮಾಡುತ್ತೇವೆ ಎಂದು ದರ್ಶನ್ ಪರ ವಕೀಲ ಸುನಿಲ್ ವಾದಿಸಿದರು.
ಇನ್ನು ಸರ್ಕಾರದ ಪರವಾಗಿ ವಕೀಲ ಸಂಜಯ್ ವಾದ ಮಂಡಿಸಿ, ನಾವು ಟೆಲಿಫೋನ್ ನೀಡಿದ್ದೇವೆ. ಜೈಲಿನಲ್ಲಿ ವಾಕಿಂಗ್ ಮಾಡಲು ಅವಕಾಶ ಕೊಡಲಾಗಿದೆ. ಕಂಬಳಿ, ಬೇಡಶೀಟ್, ಮಗ್ ಎಲ್ಲವನ್ನು ನೀಡಿದ್ದೇವೆ ಅದನ್ನು ನಾವು ಕೋರ್ಟಿಗೆ ವರದಿ ಸಹ ಸಲ್ಲಿಸಿದ್ದೇವೆ. ಅವರು ಹೇಳಿದಂತೆ ನಾವು ಏನು ಬೇಕಾದರೂ ಬರೆದುಕೊಂಡು ಬಂದು ಕೋರ್ಟಿಗೆ ಕೊಡಲು ಸಾಧ್ಯಾನ? ಎಂದು ಪ್ರಶ್ನಿಸಿದರು.
ಈ ವೇಳೆ ದರ್ಶನ್ ಪರ ವಕೀಲ ಎಸ್ಓಪಿಯಲ್ಲಿ ಇರುವುದನ್ನೇ ಕಾಪಿ ಮಾಡಿದ್ದಾರೆ. ಕ್ವಾರಂಟೈನ್ ಕಾನ್ಸೆಪ್ಟ್ ಬಂದಿದ್ದೆ ಕೋವಿಡ್ ಬಂದ ನಂತರ ಅಧಿಕಾರಿಗಳು ಆದೇಶವನ್ನು ಬಿಸಾಕಿದ್ದಾರೆ. ಪತ್ನಿ ಕುಟುಂಬ ವಕೀಲರ ಬೇಟೆಗೆ ಅವಕಾಶ ನೀಡಿದ್ದೆ ಎಂದು ಹೇಳುತ್ತಾರೆ ಅದು ಕಾನೂನು ಅವರು ಕೊಡಲೇಬೇಕು ಅದರಲ್ಲಿ ವಿಶೇಷ ಏನಿಲ್ಲ ಎಂದು ವಾದಿಸಿದರು. ಬಳಿಕ ದರ್ಶನ್ ಅರ್ಜೆಯ ವಿಚಾರಣೆಯನ್ನು ಜಡ್ಜ್ ನಾಳೆ ಮುಂದೂಡಿ ಆದೇಶ ಹೊರಡಿಸಿದ್ದರು.