ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್’ನ ಪುರುಷರ ಜಾವೆಲಿನ್ ಫೈನಲ್’ಗೆ ಅರ್ಹತೆ ಪಡೆದಿದ್ದಾರೆ. ಬುಧವಾರ ನಡೆದ ಅರ್ಹತಾ ಸುತ್ತಿನಲ್ಲಿ ನೀರಜ್ ಚೋಪ್ರಾ ತಮ್ಮ ಮೊದಲ ಎಸೆತದಲ್ಲೇ ಈ ಸಾಧನೆ ಮಾಡಿದರು.
ಅರ್ಹತಾ ಸುತ್ತಿನ ಅರ್ಹತೆ 84.50 ಮೀಟರ್ ಆಗಿತ್ತು, ಆದರೆ ನೀರಜ್ ಚೋಪ್ರಾ 84.85 ಮೀಟರ್ ದೂರಕ್ಕೆ ಜಾವೆಲಿನ್ ಎಸೆದರು. ಗುರುವಾರ ಫೈನಲ್ ಪಂದ್ಯ ನಡೆಯಲಿದ್ದು, ನೀರಜ್ ಚೋಪ್ರಾ ಮತ್ತು ಪಾಕಿಸ್ತಾನದ ಅರ್ಷದ್ ನದೀಮ್ ಪರಸ್ಪರ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಅಂದ್ಹಾಗೆ, ಬುಡಾಪೆಸ್ಟ್’ನಲ್ಲಿ ನಡೆದ 2023ರ ಆವೃತ್ತಿಯಲ್ಲಿ ಗೆದ್ದ ವಿಶ್ವ ಚಾಂಪಿಯನ್‌ಶಿಪ್ ಚಿನ್ನವನ್ನ ಉಳಿಸಿಕೊಳ್ಳುವ ಇತಿಹಾಸದಲ್ಲಿ 3ನೇ ಪುರುಷ ಜಾವೆಲಿನ್ ಎಸೆತಗಾರನಾಗುವ ಗುರಿಯನ್ನ ಚೋಪ್ರಾ ಹೊಂದಿದ್ದಾರೆ. ಈಗ ಚೋಪ್ರಾ ಅವರ ತರಬೇತುದಾರರಾಗಿರುವ ಜೆಕ್ ದಂತಕಥೆ ಜಾನ್ ಝೆಲೆಜ್ನಿ (1993, 1995) ಮತ್ತು ಗ್ರೆನಡಾದ ಆಂಡರ್ಸನ್ ಪೀಟರ್ಸ್ (2019, 2022) ಈ ಸಾಧನೆ ಮಾಡಿದ ಇತರ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ.
ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ
ಭಾರತದಲ್ಲಿ ತಯಾರಿಸಿದ ವಸ್ತುಗಳನ್ನು ಮಾತ್ರ ಖರೀದಿಸಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ
ಜೈಲಲ್ಲಿ ನಟ ದರ್ಶನ್ ಗೆ ಕನಿಷ್ಠ ಸೌಲಭ್ಯ ಒದಗಿಸುವಂತೆ ಅರ್ಜಿ : ಸಂಜೆ 4 ಗಂಟೆಗೆ ವಿಚಾರಣೆ ಮುಂದೂಡಿದ ಕೋರ್ಟ್