ಉತ್ತರಕನ್ನಡ : ಭಟ್ಕಳದ ಅರಣ್ಯ ಪ್ರದೇಶದಲ್ಲಿ ರಾಶಿ ರಾಶಿ ಮೂಳೆ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಚೌಥಣಿ ಕಾಲೋನಿಯ ಮಹಮ್ಮದ್ ರಾಯನ್ ಅಲಿಯಾಸ್ ರಿಜ್ವಾನ್ ಮತ್ತು ಭಟ್ಕಳದ ಮಗದುಮ್ ಕಾಲೋನಿಯ ಮೊಹಮ್ಮದ್ ಸಂವನ್ ಎನ್ನುವ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ.
ಇಬ್ಬರು ಆರೋಪಿಗಳು ಗೋವುಗಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದರು ಮಾಂಸ ಬೇರ್ಪಡಿಸಿ ಮಗದುಮ್ ಕಾಲೋನಿಯ ಬಳಿಗಳನ್ನು ಸುರಿಯುತ್ತಿದ್ದರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿ ಮಗದುಮ್ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದರು. ರಾಶಿ ರಾಶಿ ಮೂಳೆಗಳನ್ನು ಕಂಡು ಅರಣ್ಯ ಸಿಬ್ಬಂದಿ ದೂರು ನೀಡಿದ್ದಾರೆ. ರಾಶಿ ರಾಶಿ ಮೂಳೆ ಪತ್ತೆಯ ಬಗ್ಗೆ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಸಿಪಿಐ ದಿವಾಕರ್ ನೇತೃತ್ವದಲ್ಲಿ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.