ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಶುಭಾಶಯ ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ತಮ್ಮ ಅಸಾಧಾರಣ ನಾಯಕತ್ವದ ಮೂಲಕ ದೇಶದಲ್ಲಿ ಉತ್ತಮ ಗುರಿಗಳನ್ನು ಸಾಧಿಸುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಾಶಯಗಳು . ನಿಮ್ಮ ಅಸಾಧಾರಣ ನಾಯಕತ್ವದ ಮೂಲಕ ಕಠಿಣ ಪರಿಶ್ರಮದ ಉತ್ತುಂಗಕ್ಕೆ ಉದಾಹರಣೆಯಾಗುವ ಮೂಲಕ, ನೀವು ದೇಶದಲ್ಲಿ ಶ್ರೇಷ್ಠ ಗುರಿಗಳನ್ನು ಸಾಧಿಸುವ ಸಂಸ್ಕೃತಿಯನ್ನು ಹುಟ್ಟುಹಾಕಿದ್ದೀರಿ” ಎಂದು ರಾಷ್ಟ್ರಪತಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ