ಬೆಂಗಳೂರು: ಅಧಿಕ ಸಂಖ್ಯೆಯಲ್ಲಿ ಅರ್ಜಿಗಳನ್ನು ಸ್ವೀಕರಿಸುವ ಹಿನ್ನೆಲೆಯಲ್ಲಿ, ರಾಜ್ಯದ ಪ್ರಮುಖ ಅನುದಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಎಲ್ಲಾ ಅರ್ಹ ನವೋದ್ಯಮಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕವನ್ನು 15ನೇ ಸೆಪ್ಟೆಂಬರ್ 2025, ಸಂಜೆ 5:00 ಗಂಟೆ ಯಿಂದ 17ನೇ ಸೆಪ್ಟೆಂಬರ್ 2025, ರಾತ್ರಿ 11:59 ಗಂಟೆಯ ವರೆಗೆ ವಿಸ್ತರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತ ನವೋದ್ಯಮಗಳು ವ್ಯಕ್ತಪಡಿಸಿರುವಂತೆ, ತಮ್ಮ ಅರ್ಜಿಗಳನ್ನು ಪೂರ್ಣಗೊಳಿಸಲು ಅಗತ್ಯ ಸಮಯಾವಕಾಶ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಎಲಿವೇಟ್” ಕಾರ್ಯಕ್ರಮವು ವಿಶ್ವಮಟ್ಟದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಕರ್ನಾಟಕ ಸರ್ಕಾರದ ಕಾರ್ಯತಂತ್ರದ ಪ್ರಮುಖ ಅಂಶವಾಗಿದೆ. ಈ ಯೋಜನೆಯು ನಾವೀನ್ಯತಾ ಆವಿಷ್ಕಾರಗಳನ್ನು ಹೊಂದಿರುವ ಆರಂಭಿಕ ಹಂತದ ನವೋದ್ಯಮಳನ್ನು ಗುರುತಿಸಿ, ಅವರಿಗೆ Grant-In-Aid (ಅನುದಾನ), ಉದ್ಯಮ ತಜ್ಞರಿಂದ ಮಾರ್ಗದರ್ಶನ ಮತ್ತು ಮಾರುಕಟ್ಟೆ ಪ್ರವೇಶ ಸೇರಿದಂತೆ ವಾಣಿಜ್ಯೋದ್ಯಮವನ್ನು ವಿಸ್ತರಿಸಲು ಅಗತ್ಯ ಸಂಪನ್ಮೂಲಗಳನ್ನು ಒದಗಿಸುತ್ತದೆ.
ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಹಾಗೂ ರಾಜ್ಯದ ನವೋದ್ಯಮ ಪರಿಸರ ವ್ಯವಸ್ಥೆಯ ಪ್ರಯೋಜನಗಳನ್ನು ಎಲ್ಲಾ ವರ್ಗಗಳಿಗೂ ಲಭ್ಯವಾಗುವಂತೆ ಮಾಡಲು ಮತ್ತಷ್ಟು ಕಾಲಾವಕಾಶ ನೀಡಲಾಗಿದೆ. ಈ ವಿಸ್ತರಣೆಯು ಮಹತ್ವಾಕಾಂಕ್ಷಿ ನವೋದ್ಯಮಗಳಿಗೆ ಅರ್ಜಿ ಸಲ್ಲಿಸಲು ಹಾಗೂ ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯ ಬೆಳವಣಿಗೆಯ ಹಾದಿಯಲ್ಲಿ ಒಂದು ಭಾಗವಾಗಲು ಅವಕಾಶ ಒದಗಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಎಲಿವೇಟ್ 2025 (ಎಲ್ಲಾ ಆಸಕ್ತ ನವೋದ್ಯಮಗಳಿಗೆ), ಎಲಿವೇಟ್ – ಉನ್ನತಿ (ಎಸ್.ಸಿ/ಎಸ್.ಟಿ ಸಮುದಾಯದ ನವೋದ್ಯಮಗಳಿಗೆ) ಮತ್ತು ಎಲಿವೇಟ್ ಅಲ್ಪಸಂಖ್ಯಾತರು 2025 (ಅಲ್ಪಸಂಖ್ಯಾತ ಸಮುದಾಯದ ನವೋದ್ಯಮಗಳಿಗೆ) ಯೋಜನೆಯು ಮೂರು ಪ್ರತ್ಯೇಕ ಕರೆಗಳಿಗೆ ಅವಕಾಶ ನೀಡುತ್ತದೆ. ಇದರ ಮೂಲಕ
ಅರ್ಜಿಗಳನ್ನು ಅಧಿಕೃತ ಪೋರ್ಟಲ್ ಮೂಲಕ ಮಾತ್ರ ಸಲ್ಲಿಸಬೇಕಾಗಿದೆ: https://eitbt.karnataka.gov.in/
ರಾಜ್ಯದಲ್ಲೊಂದು ವಿಚಿತ್ರ ಕೇಸ್: ಕೋಳಿ ಕೂಗೋದ್ರಿಂದ ನಿದ್ರೆ ಬರ್ತಿಲ್ಲವೆಂದು ಪೊಲೀಸರಿಗೆ ದೂರು
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ








