ಮಂಡ್ಯ: ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಮೈಶುಗರ್ ಸ್ಕೂಲ್ ಗೆ 25 ಕೋಟಿ ಕೊಟ್ಟೆ ಕೊಡ್ತಾರೆ ಎಂಬುದಾಗಿ ಶಾಸಕ ಗಾಣಿಗ ರವಿಕುಮಾರ್ ತಿಳಿಸಿದ್ದಾರೆ.
ಇಂದು ಮಂಡ್ಯದಲ್ಲಿ ಮೈಶುಗರ್ ಸ್ಕೂಲ್ ಗೆ ಹೆಚ್ಡಿಕೆಯಿಂದ ಅನುದಾನ ವಿಚಾರವಾಗಿ ಮಾತನಾಡಿದಂತ ಅವರು, ಮೈಶುಗರ್ ವಿಚಾರವಾಗಿ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಕೊಡದಿರುವ ಬಗ್ಗೆ ಚರ್ಚೆ ಮಾಡಿ ಸಂಘರ್ಷ ಮಾಡುವುದು ಇಷ್ಟ ಇಲ್ಲ. ಆಟೋ ಸ್ಟ್ಯಾಂಡ್ ಗುದ್ದಿಲಿ ಪೂಜೆ 10 ಲಕ್ಷದು ಮಾತ್ರ ನೋಡಿದ್ದೇನೆ. ಕುಮಾರಸ್ವಾಮಿ ಕೊಟ್ಟರೆ ಅವರ ಮನೆ ಬಾಗಿಲಿಗೆ ಹೋಗಿ ಫಂಡ್ ಇಸ್ಕೊಂಡು ಬರ್ತಿನಿ. ನಾನೇ ನಿಂತು ಅಭಿವೃದ್ಧಿ ಮಾಡ್ತೇನೆ ಎಂದರು.
25 ಕೋಟಿ ಅಂತ ಟಿವಿ ಮುಂದೆ ಚರ್ಚೆ ಆಗಿದೆ ಸ್ಕೂಲ್ ಶಿಕ್ಷಕರಿಗೆ ಸಂಬಳ ಕೊಡಕ್ಕಾಗ್ತಿಲ್ಲ ಪಾಪಾ. ರಾಜಕೀಯ ಸಂಘರ್ಷದಿಂದ ಅಭಿವೃದ್ಧಿ ಕುಂಟಿತ. ಎಂಡಿ, ಅಧ್ಯಕ್ಷರಿಗೆ ಫಂಡ್ 25 ಕೋಟಿ ಇಸ್ಕೊಂಡು ಬರಲು ಸೂಚನೆ ಕೊಟ್ಟಿದ್ದೇನೆ. 25 ಕೋಟಿ ಕೊಟ್ಟೆ ಕೊಡ್ತಾರೆ ಕುಮಾರಸ್ವಾಮಿ ಕೊಟ್ಟ ಮಾತಿನಂತೆ ನಡೆದುಕೊಳ್ಳೋರು. ಇನ್ನು ಎರಡೂ ತಿಂಗಳು ಕಳೆಯಲಿ. ಕೇಂದ್ರ ಸರ್ಕಾರ ಪ್ರೋಸೆಸ್ ಲೇಟ್ ಆಗುತ್ತದೆ. ಕುಮಾರಸ್ವಾಮಿ ಅವರನ್ನ ಸಂಪರ್ಕ ಮಾಡಿಲ್ಲ. ಅವಶ್ಯಕತೆ ಇದ್ರೆ ಅವರ ಮನೆಗೆ ಹೊಗ್ತೇನೆ ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ
BIG NEWS : ದಸರಾ ಉದ್ಘಾಟನೆ, ಮುಲ್ಲಾಗಳ ಪ್ರಕಾರ ನಡೆಯುತ್ತಿದೆ : ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ
ಮಾನವೀಯತೆ ಮೆರೆದ ಜಡ್ಜ್: ವೃದ್ಧನ ಬಳಿ ತೆರಳಿ ತೀರ್ಪು, ಸ್ಥಳದಲ್ಲೇ ಪರಿಹಾರಕ್ಕೆ ಆದೇಶ