ನವದೆಹಲಿ : ದುಬೈನಲ್ಲಿ ಭಾನುವಾರ ನಡೆದ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ನಡೆದ ಹ್ಯಾಂಡ್‌ಶೇಕ್ ವಿವಾದಕ್ಕೆ ಸಂಬಂಧಿಸಿದಂತೆ 2025ರ ಏಷ್ಯಾ ಕಪ್’ನಿಂದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನ ‘ತಕ್ಷಣ ತೆಗೆದುಹಾಕಬೇಕು’ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಯನ್ನು ಸಂಪರ್ಕಿಸಿದೆ.
“ಐಸಿಸಿ ನೀತಿ ಸಂಹಿತೆ ಮತ್ತು ಕ್ರಿಕೆಟ್’ನ ಸ್ಫೂರ್ತಿಗೆ ಸಂಬಂಧಿಸಿದ ಎಂಸಿಸಿ ಕಾನೂನುಗಳ ಮ್ಯಾಚ್ ರೆಫರಿಯಿಂದ ಉಲ್ಲಂಘನೆಯಾಗಿರುವ ಬಗ್ಗೆ ಪಿಸಿಬಿ ಐಸಿಸಿಗೆ ದೂರು ನೀಡಿದೆ” ಎಂದು ಪಿಸಿಬಿ ಮತ್ತು ಏಷ್ಯಾ ಕಪ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ಏಷ್ಯಾ ಕಪ್’ನಿಂದ ಮ್ಯಾಚ್ ರೆಫರಿಯನ್ನ ತಕ್ಷಣ ತೆಗೆದುಹಾಕುವಂತೆ ಪಿಸಿಬಿ ಒತ್ತಾಯಿಸಿದೆ” ಎಂದು ಅವರು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ‘ಫಸ್ಟ್ ನೈಟ್’ ವಿಡಿಯೋ ಹರಿಬಿಟ್ಟ ನವ ದಂಪತಿಗಳು, ನೆಟ್ಟಿಗರಿಂದ ತರಾಟೆ, ವಿಡಿಯೋ ವೈರಲ್