ಕಲಬುರ್ಗಿ: ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ, ಸಿಎಂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಮಾತನಾಡಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಬೆಳೆ ವಿಮೆ ಪರಿಹಾರದ ಬಗ್ಗೆಯೂ ಮಾಹಿತಿ ನೀಡಲಾಗಿದೆ, ಮುಂದಿನ ಒಂದು ವಾರದೊಳಗೆ ಪರಿಹಾರ ರೈತರಿಗೆ ಜಮಾ ಆಗಲಿದೆ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇಂದು ಜಿಲ್ಲಾ ಪಂಚಾಯತ ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎರಡನೆಯ ಸುತ್ತಿನ ಮಳೆ ನಿಲ್ಲದ ಕಾರಣ ಸರ್ವೆ ಮಾಡುವುದು ಕಷ್ಟವಾಗುತ್ತಿದೆ. ಮೊದಲ ಹಂತದಲ್ಲೇ 1.05 ಲಕ್ಷ ಹೆಕ್ಟೇರ್ ಹಾನಿಯಾಗಿದೆ. ಎರಡನೆಯ ಸುತ್ತಿನ ಸರ್ವೆ ಕೂಡ ಮಾಡಲಾಗುವುದು. ಈ ಬಗ್ಗೆ ನಾಳೆ ಸಚಿವ ಸಂಪುಟ ಸಭೆ ನಂತರ ಸಿಎಂ ಗಮನಕ್ಕೆ ತರಲಾಗುವುದು ಎಂದರು.
ಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ಬೇಡಿಕೆ ಬಳಹ ದಿನದಿಂದ ಇತ್ತು. ಕುರುಬ ಸಮಾಜದ ಸಭೆ ಕೂಡಾ ನಡೆಸಲಾಗುತ್ತಿದೆ. ಕುರುಬ ಹಾಗೂ ಕೋಲಿ ಕಬ್ಬಲಿಗ ಸಮಾಜವನ್ನು ಎಸ್ ಟಿ ಸೇರಿಸುವ ವಿಚಾರದಲ್ಲಿ ಎಂಥ್ರಾಪಲಾಜಿ ವರದಿ ಸಲ್ಲಿಸಿದ ಸಮಿತಿಯ ಮುಂದೆ ಚರ್ಚೆ ನಡೆಲಾಗಿದೆ. ಸಾಂಸ್ಕೃತಿಕ ಹಾಗೂ ಐತಿಹಾಸಿಕ ದಾಖಲೆಗಳನ್ನು ಕೇಂದ್ರಕ್ಕೆ ಸಲ್ಲಿಸುವ ವಿಚಾರವಿದೆ. ಇದೇ 20 ರಂದು ವರದಿ ಸಲ್ಲಿಸಲಾಗುವುದು.
ಯಾವುದೇ ಸಂಘಟನೆ ಪರ ಅಥವಾ ವಿರೋಧ ಮಾಡಿದ ತಕ್ಷಣ ಪಟ್ಟಿಗೆ ಸೇರಿಸುವುದು ಆಗುವುದಿಲ್ಲ. ಸಂವಿಧಾನದ ಪ್ರಕಾರ ಎಲ್ಲ ನಡೆಯುತ್ತಿದೆ.
ಕೋಲಿ ಸಮಾಜವನ್ನು ಎಸ್ ಟಿ ಪಟ್ಟಿಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಭರವಸೆ ನೀಡಿದ್ದರು ಇದೂವರೆಗೆ ಯಾವುದೇ ಕ್ರಮವಾಗಿಲ್ಲ. ನಾನೇ ಸಮಾಜಕಲ್ಯಾಣ ಸಚಿವನಾಗಿದ್ದಾಗಲೂ ಕೂಡಾ ಕೆಲ ಕ್ಲಾರಿಫಿಕೇಷನ್ ಕೊಟ್ಟು ಬಂದಿದ್ದೆ.
ಮಳೆ ಹಾನಿ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಅವರು ಮಳೆ ಹಾನಿಗೊಳಗಾದ ಪ್ರದೇಶದಲ್ಲಿ ಭೇಟಿ ವಿಚಾರ, ನಾಳೆ ಸಂಜೆ ಸಿಎಂ ಅವರ ಸಮಯಾವಕಾಶ ನೋಡಿಕೊಂಡು ನಿರ್ಧರಿಸಲಾಗುವುದು.
ಸಾಲಮನ್ನಾ ವಿಚಾರ, ಜಂಟಿ ಸರ್ವೆ ನಂತರ ಬೆಳೆಹಾನಿ ಗೊತ್ತಾದಾಗ ಮುಂದಿನ ಕ್ರಮ ಕೈಗೊಳ್ಳಲಾಗುವುದು. 3.08 ಲಕ್ಷ ರೈತರು ಬೆಳೆ ವಿಮೆಗೆ ನೋಂದಣಿ ಆಗಿದ್ದರು ಅವರಲ್ಲಿ 1.36 ಲಕ್ಷ ಜನ (45%) ಜನ ಹಾನಿಗೊಳಗಾಗಿದ್ದಾರೆ. ಮೊದಲಿಗೆ ಅವರಿಗೆ ಪರಿಹಾರ ಒದಗಿಸಬೇಕಿದೆ. ಆನ್ ಲೈನ್ ನೋಂದಣಿ ವಿಚಾರದಲ್ಲಿ ಉದ್ಭವಿಸಿದ್ದ ಕೆಲ ತಾಂತ್ರಿಕ ತೊಂದರೆಗಳನ್ನು ಪರಿಹರಿಸಲಾಗಿದೆ. ಸರ್ವೆ ಸಮಯದಲ್ಲಿ ರೈತರು ಬೆಳೆಹಾನಿಯ ಸಂಪೂರ್ಣ ವಿವರನ್ನು ಒದಗಿಸಿದರೆ ಸರ್ವೆ ಗೆ ಅನುಕೂಲವಾಗುತ್ತದೆ.
ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರತಿ ನಾಲ್ಕು ದಿನಕ್ಕೊಮ್ಮೆ ಸಭೆ ನಡೆಸಿದ ಪರಿಣಾಮ ರೂ 600 ಕೋಟಿ ಪರಿಹಾರ ಸಿಕ್ಕಿದೆ. ಖಚಿತ ಮಾಹಿತಿ ದೊರಕಿದ ಮೇಲೆ ಪರಿಹಾರ ವಿತರಣೆಗೆ ಸಹಕಾರಿಯಾಗಲಿದೆ. ಎನ್ ಡಿ ಆರ್ ಎಫ್ ನಿಯಮಾವಳಿಗಳ ಬಿಗಿಯಾಗಿದ್ದರಿಂದ ನಮಗೆ ಬೆಳೆ ವಿಮೆ ಮಾಡಿಸುವುದು ಒಂದೇ ಪರಿಹಾರವಾಗಿದೆ.
ಜಿಲ್ಲೆಯಲ್ಲಿ ಮಳೆಯಿಂದಾಗಿ ರಸ್ತೆಗಳು ಹಾನಿಯಾಗಿರುವುದರಿಂದ ಗ್ರಾಮೀಣ ರಸ್ತೆಗಳ ರಿಪೇರಿಗೆಅನುದಾನ ಬಿಡುಗಡೆ ಮಾಡಲಾಗಿತ್ತು. ಆದರೂ ಕೂಡಾ ಸಿಎಂಅವರ ವಿಶೇಷ ಅನುದಾನವನ್ನು ಕೂಡಾ ತೆಗೆದಿರಿಸಲಾಗಿದೆ. ಜಿಲ್ಲೆಯಲ್ಲಿ ರೂ 40 ಕೋಟಿ ಪಿಡಿ ಖಾತೆಯಲ್ಲಿದೆ. ಅದನ್ನೂ ಕೂಡಾ ಬಳಸಿಕೊಳ್ಳಬಹುದು. ಮಳೆಗಾಲ ಮುಗಿದ ನಂತರ ಜಿಲ್ಲೆಯ ರಸ್ತೆಗಳ ರಿಪೇರಿ ಮಾಡಲಾಗುವುದು.
ಮಳೆಗಾಲದ ನಂತರ ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳ ರಿಪೇರಿಗೆ ಸಂಬಂಧಿಸಿದಂತೆ ರಸ್ತೆ ಆಡಿಟ್ ಮಾಡಲಾಗುವುದು. ರಸ್ತೆ ಗುಂಡಿ ಮುಚ್ಚುವ ಕುರಿತು ಬೆಂಗಳೂರು ಮೂಲಕ ಸಂಸ್ಥೆಯೊಂದಿಗೆ ಮಾತುಕತೆ ನಡೆದಿದ್ದು ಟೆಂಡರ್ ಕರೆಯುವ ಯೋಚನೆಯಿದೆ. ನವೆಂಬರ್ ವೇಳೆಗೆ ರಸ್ತೆ ರಿಪೇರಿ ಕೈಗೆತ್ತಿಕೊಳ್ಳಲಾಗುವುದು. ರಸ್ತೆಗಳ ಗುಣಮಟ್ಟ ಕಂಡುಹಿಡಿಯಲು ರಸ್ತೆ ಆಡಿಟ್ ಮಾಡುವ ಉದ್ದೇಶ ಹೊಂದಲಾಗಿದೆ.
ನಗರ ಪ್ಲಾನಿಂಗ್ ಕುರಿತು ಏಜೆನ್ಸಿ ಯನ್ನು ಕೂಡಾ ಗುರುತಿಸಲಾಗಿದ್ದು ಸೆಪ್ಟೆಂಬರ್ 20 ರ ನಂತರ ಕಲಬುರಗಿ ಎಂ ಪಿ ಅವರು ಈ ಕುರಿತು ತಾವು ತಯಾರಿಸಿದ ನೀಲಿ ನಕ್ಷೆ ಹಾಗೂ ಪ್ಲಾನಿಂಗ್ ಕುರಿತು ವಿವರಿಸಲಿದ್ದಾರೆ.
ಹೆಸರು ಹಾಗೂ ಉದ್ದು ಖರೀದಿ ಕೇಂದ್ರ ಸ್ಥಾಪನೆ ಬೇಡಿಕೆ ಹಿನ್ನೆಲೆ, 21/07/2025 ರಂದು ಬಿತ್ತನೆ ಕಾರ್ಯಮುಗಿದ ನಂತರ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಆದರೆ ಅವರಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮುಂದಿನ ವಾರ ಮತ್ತೊಮ್ಮೆ ಈ ಬಗ್ಗೆ ಮನವರಿಕೆ ಮಾಡಲಾಗುವುದು. ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು.
ಧರ್ಮಸ್ಥಳ, ಮದ್ದೂರು, ಚಾಮುಂಡೇಶ್ವರಿ ಚಲೋ, ಬಿಜೆಪಿಯವರಿಗೆ ಬೇಕಾಗಿರುವುದಾದರೂ ಏನು ? ಕಾಮನ್ ಸೆನ್ಸ್ ಇದೆಯಾ ? ಸೌಜನ್ಯ ಅವರ ಮನೆಗೆ ಹೋದಾಗ ರಾಶಿ ರಾಶಿ ಬುರುಡೆ ಸಿಕ್ಕ ಬಗ್ಗೆ ಗೊತ್ತಾಗಿದೆ. ಆ ಬಗ್ಗೆ ಏನು ಹೇಳುತ್ತಾರೆ.
ಧರ್ಮಸ್ಥಳ, ಮದ್ದೂರು ಚಲೋ ಆಯ್ತು. ತಲೆ ಕಡಿರಿ ಅಂತ ಪ್ರಚೋದನೆ ಹೇಳಿಕೆ ನೀಡುವುದು ಬಿಜೆಪಿ ನಾಯಕರ ಚಾಳಿಯಾಗಿದೆ. ಸಿಟಿ ರವಿ ಸೇರಿದಂತೆ ಯಾವ ಬಿಜೆಪಿನಾಯಕರು ತಮ್ಮ ಮಕ್ಕಳಕೈಗೆ ಮಚ್ಚು ಲಾಂಗು ಕೊಟ್ಟಿದಾರ? ಬಿಜೆಪಿಗರು ರಾಜ್ಯವನ್ನು ಯುಪಿ, ಬಿಹಾರ ಮಾಡಹೊರಟಿದ್ದಾರ?
ಬಾಡಿಗೆ ಬಾಷಣಕಾರರು ಸೇರಿದಂತೆ ಪ್ರತಾಪ್ ಸಿಂಹ, ರವಿ ತಮ್ಮ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿ ಧರ್ಮ ರಕ್ಷಣೆಗೆ ಕಳಿಸಿದ್ದಾರ?
ನಿನ್ನೆ ಭಾರತ ಪಾಕಿಸ್ತಾನ ಕ್ರಿಕೆಟ್ ನಡೆತಲ್ಲ ಬಿಜೆಪಿಗರಿಗೆ ನಾಚಿಕೆಯಾಗಬೇಕು..ಭಾರತ ಆಡದಿದ್ದರೆ ಅಂಕ ಹೋಗುತ್ತವೆ ಎನ್ನುವುದು ಬಿಜೆಪಿಗೆ ಸಮಜಾಯಿಷಿ ನೀಡುತ್ತಾರೆ. ಹೋದರೆ ಹೋಗಲಿ ಬಿಡಿ ಅಂಕ ಮುಖ್ಯನಾ? ಸರ್ಕಾರ ಬಿಸಿಸಿಐ ಗೆ ನಿರ್ದೇಶನ ಯಾಕೆ ನೀಡಿಲ್ಲ. ಪ್ರಧಾನಿ ಯಾಕೆ ಗೃಹ ಸಚಿವರಿಗೆ ಹೇಳಿಲ್ಲಾ? ಹುತಾತ್ಮರ ಮನೆಯವರು ಪಂದ್ಯ ಆಡುವುದುಬೇಡ ಅಂದಿದ್ದಾರೆ, ಆದರೂ ಪಂದ್ಯ ಯಾಕೆ ನಡೆಸಿದರು.?
ಪಿಡಿಓ ನೇಮಕಾತಿ ವಿಚಾರ, ಕೆಪಿಎಸ್ ಸಿ ನೇಮಕಾತಿ ವಿಚಾರದಲ್ಲಿ ನೆಪ ಹೇಳುತ್ತಿದೆ. ಕೆಪಿಎಸ್ ಸಿ ಹುದ್ದೆಗಳ ನೇಮಕಾತಿ ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ, ಚುನಾವಣೆ ನಡೆಸಲೇಬೇಕು. ಮೊದಲು ಮೀಸಲಾತಿ ಗೊಂದಲವಿತ್ತು ಅದನ್ನು ಸರಿಪಡಿಸಲಾಯಿತು. ಹಿಂದಿನ ಸರ್ಕಾರದಲ್ಲಿ ಕೆಲ ಪಂಚಾಯತ್ ಗಳು ನಗರ ವ್ಯಾಪ್ತಿಗೆ ಸೇರಿ ಕ್ಷೇತ್ರ ಮರುವಿಂಗಡನೆಗೆ ತಡವಾಯ್ತು.
ಬ್ಯಾಲೆಟ್ ಮೂಲಕ ಚುನಾವಣೆ ನಡೆಸಿದರೆ ತಡವಾಗುತ್ತದೆ ಎನ್ನುವ ವಿಚಾರ, ಆದರೆ ಆಗಲಿ ಬಿಡಿ ಅಮೇರಿಕಾ ಫ್ರಾನ್ಸ್ ಗಳಲ್ಲಿ ತಿಂಗಳುಗಟ್ಟಲೇ ಎಣಿಕೆ ನಡೆಯುತ್ತದಲ್ಲ?.
ಮತದಾರರ ಸ್ವಚ್ಛ ಪಟ್ಟಿ ನೀಡಲು ಚುನಾವಣೆ ಆಯೋಗ ವಿಫಲವಾಗಿದೆ. ಆಯೋಗ ಬಿಜೆಪಿ ಕೈಗೊಂಬೆಯಾಗಿದೆ. ನಾವು ನೀಡಿದ ದೂರಿನ ಬಗ್ಗೆ ವಿಚಾರಣೆನೆ ನಡೆಸುತ್ತಿಲ್ಲ..
ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಲು ನಿಖಿಲ್ ಕುಮಾರಸ್ವಾಮಿ ಬರುತ್ತಿರುವ ವಿಚಾರ ಒಳ್ಳೆಯದು. ಅವರ ತಂದೆಯೆ ಕೇಂದ್ರ ಸಚಿವರಾಗಿದ್ದರಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡಲಿ.
ರಾಜ್ಯ ಕೇಂದ್ರಕ್ಕೆ ಹೆಚ್ಚಿನ ತೆರಿಗೆ ನೀಡುತ್ತಿದೆ. ನಾವು ನೀಡುವ ತೆರಿಗೆಯಲ್ಲಿಯೇ ನಮ್ಮ ರಾಜ್ಯಕ್ಕೆ ನೀಡುತ್ತಿಲ್ಲ. ಕಳೆದ ಬಾರಿ 4.50 ಲಕ್ಷ ಕೋಟಿ ತೆರಿಗೆ ನೀಡಿದ್ದೇವೆ, ಕೇಂದ್ರ ನಮಗೆ ಎಷ್ಟು ವಾಪಸ್ ನೀಡಿದ್ದಾರೆ.
ಬಿಜೆಪಿ ಸದಸ್ಯರ ನೋಂದಣಿ ನೋಡಿದ್ದೀರಿ ? ಟಾಟಾ ಸ್ಕೈ ನೀಡುತ್ತೇವೆ ಫ್ರೀಮಿಸ್ ಕಾಲ್ ಕೊಡಿ ಅಂತೆಲ್ಲ ಜನರಿಗೆ ಹೇಳಿ, ಜನರಿಂದ ಮಿಸ್ ಕಾಲ್ ಪಡೆದುಕೊಂಡು ಸದಸ್ಯತ್ವ ಮಾಡಿಕೊಂಡಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆದಿಲ್ಲ. ಆಕಾಂಕ್ಷಿಗಳು ಇದ್ದಾರೆ. ನಮ್ಮಲ್ಲಿ ಕೆಲವರು ಸಿಎಂ, ಎಐಸಿಸಿ ಅಧ್ಯಕ್ಷರಿಗೆ ಇನ್ನೂ ಕೆಲವರು ಡಿಸಿಎಂ ಅವರಗೆ ಮಾತನಾಡಿರುತ್ತಾರೆ. ಅವರು ಏನು ಮಾತನಾಡಿರುತ್ತಾರೆ ನನಗೆ ಗೊತ್ತಿಲ್ಲ. ಸಚಿವ ಸಂಪುಟ ಪುನರ್ ರಚನೆ ಅವರ ವಿವೇಚನೆಗೆ ಬಿಟ್ಟಿದ್ದು.
ವಿದ್ಯಾರ್ಥಿ, ಯುವ ಜನರಲ್ಲಿ ನಾಯಕತ್ವ ಗುಣ ಬೆಳೆಸಲು ‘ನನ್ನ ಮತ ನನ್ನ ಹಕ್ಕು’ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
BIG NEWS : ದಸರಾ ಉದ್ಘಾಟನೆ, ಮುಲ್ಲಾಗಳ ಪ್ರಕಾರ ನಡೆಯುತ್ತಿದೆ : ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ