ಮಂಡ್ಯ: ಸಾರ್ವಜನಿಕರೆದುರು ಮಾನವೀಯತೆಯನ್ನು ನ್ಯಾಯಾಧೀಶರೊಬ್ಬರು ಮೆರಿದ್ದಾರೆ. ಕೋರ್ಟ್ ಮೆಟ್ಟಿಲೇರಿ ಬರಲಾಗದೇ ಇದ್ದಂತ ವೃದ್ಧನ ಬಳಿಗೆ ತೆರಳಿ, ವಿಚಾರಣೆ ನಡೆಸಿ, ತೀರ್ಪು ನೀಡಿ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರರಾದಂತ ಘಟನೆ ಮಂಡ್ಯದ ಮದ್ದೂರಲ್ಲಿ ನಡೆದಿದೆ.
ಮಂಡ್ಯ ಜಿಲ್ಲೆಯ ಮದ್ದೂರಿನ JMFC ನ್ಯಾಯಾಲಯದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ನಡೆಯಲಾಗದ ಸ್ಥಿತಿಯಲ್ಲಿದ್ದ ವೃದ್ದನ ಬಳಿಗೆ ಬಂದು ನ್ಯಾಯಾಧೀಶೆ ವಿಚಾರಣೆ ಮಾಡಿದ್ದಾರೆ. ಲೋಕ ಅದಾಲತ್ ಕಾರ್ಯಕ್ರಮದಲ್ಲಿ ಅಪಘಾತ ವಿಮಾ ಸಂಬಂಧ ವಿಚಾರಣೆಗೆ ಬಂದಿದ್ದ ವೃದ್ದ ಮಾದೇಗೌಡ. ಅಪಘಾತವಾಗಿ ಕಾಲು ಸ್ವಾಧೀನವಿಲ್ಲದೆ ನಡೆಯಲು ಸಾಧ್ಯವಾಗದೆ ವೃದ್ಧರು ಕುಳಿತಿದ್ದರು.
ಕೋರ್ಟ್ ಮೇಲಂತಸ್ಥಿನ ಕಟ್ಟಡದಲ್ಲಿ ನಡೆಯುತ್ತಿದ್ದ ಕೋರ್ಟ್ ಕಲಾಪ ನಡೆಯುತ್ತಿತ್ತು. ವೃದ್ಧರ ವಿಚಾರಣೆ ಬಂದಾಗ ಅವರು ಬಾರದ ಕಾರಣ ತಿಳಿದಂತ ನ್ಯಾಯಾಧೀಶೆ ಹರಿಣಿ ಅವರು, ಕೋರ್ಟ್ ನ ವಿಚಾರಣೆ ವೇಳೆ ಸಂತ್ರಸ್ಥನ ಮಾಹಿತಿ ತಿಳಿದು ಕೆಳಗೆ ಇಳಿದು ಬಂದು ವಿಚಾರಿಸಿದರು.
ಅವರ ಅಹವಾಲು ಕೇಳಿದಂತ ನ್ಯಾಯಾಧೀಶೆ ಹರಣಿ ಅವರು ತಕ್ಷಣವೇ ಸ್ಥಳದಲ್ಲಿ ವಿಮಾ ಕಂಪನಿಯಿಂದ ಸಂತ್ರಸ್ಥ ವ್ಯಕ್ತಿಗೆ ಪರಿಹಾರದಲ್ಲಿ 2.5 ಲಕ್ಷ ಹಣ ನೀಡಲು ಆದೇಶಿದರು. ಇಂತಹ ಜಡ್ಜ್ ಅವರ ಮಾನವೀಯತೆ ಕಂಡು ಸ್ಥಳದಲ್ಲಿದ್ದ ಜನರ ಮೆಚ್ಚುಗೆ ವ್ಯಕ್ತ ಪಡಿಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ