ಬೆಂಗಳೂರು : ಬೆಂಗಳೂರಿನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದ್ದು, ಕಾಮುಕನೊಬ್ಬ ಯುವತಿಯ ಖಾಸಗಿ ಅಂಗ ಮುಟ್ಟಿ ಪರಾರಿಯಾಗಿರುವ ಘಟನೆ ನಡೆದಿದೆ.
ಸೆಪ್ಟೆಂಬರ್ 7 ರಂದು ರಾತ್ರಿ 11.50ರಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಂಜುನಾಥ್ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಕ್ಕೂರು ಮುಖ್ಯ ರಸ್ತೆಯಲ್ಲಿ ಶ್ವಾನವೊಂದು ಅಪಘಾತಕ್ಕೆ ಒಳಗಾಗಿತ್ತು. ಕಾರು ನಿಲ್ಲಿಸಿ ಶ್ವಾನದ ರಕ್ಷಣೆಗೆ ಮುಂದಾಗಿದ್ದ ಯುವತಿಗೆ ಬೈಕ್ ನಲ್ಲಿ ಬಂದ ಆರೋಪಿ ಬ್ಯಾಡ್ ಟಚ್ ಮಾಡಿ ಪರಾರಿಯಾಗಿದ್ದ.
ನಾಯಿ ರಕ್ಷಿಸಿದ್ದರಿಂದ ಯುವತಿ ಕೈಗೆ ರಕ್ತ ಆಗಿತ್ತು. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಬಳಿ ಯುವತಿ ಕೈ ತೊಳೆದುಕೊಳ್ಳುತ್ತಿದ್ದರು. ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬಂದು ಯುವತಿಯ ಖಾಸಗಿ ಅಂಗ ಮುಟ್ಟಿ ಆರೋಪಿ ಪರಾರಿಯಾಗಿದ್ದ. ಘಟನೆ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.