ಬೆಂಗಳೂರು: ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಇದ್ದಿದ್ದರೇ ಭಾರತ-ಪಾಕಿಸ್ತಾನ ಪಂದ್ಯಾವಳಿಯನ್ನು ರದ್ದು ಮಾಡುತ್ತಿದ್ದೆವು ಎಂಬುದಾಗಿ ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ.
ನಗರದಲ್ಲಿ ಸದ್ದಿಗಾರೊಂದಿಗೆ ಮಾತನಾಡಿದಂತ ಅವರು, ಭಾರತ-ಪಾಕ್ ಮ್ಯಾಚ್ ರದ್ದು ಮಾಡಬೇಕು. ಯಾವ ಮುಖ ಇಟ್ಕೊಂಡು ಇವರು ಮ್ಯಾಚ್ ನಡೆಸುತ್ತಿದ್ದಾರೆ. ಪಹಲ್ಗಾಮ್ ಘಟನೆಯ ನೋವು ನಮಗೆ ಇನ್ನೂ ಇದೆ ಎಂಬುದಾಗಿ ಕಿಡಿಕಾರಿದರು.
ಅಮಿತಾ ಶಾ ಪುತ್ರ ಜೈ ಶಾಗೆ ಬ್ಯುಸಿನೆಸ್ ಮುಖ್ಯ. ಇಲ್ಲಿ ಅಶೋಕ್, ವಿಜಯೇಂದ್ರ, ಯತ್ನಾಳ್ ಅವರೇ ನಿಮಗೆ ಧಮ್ಮು, ತಾಕತ್ತು ಇದ್ರೆ ಕೇಂದ್ರ ಸರ್ಕಾರಕ್ಕೆ ಹೇಳಿ ಭಾರತ-ಪಾಕಿಸ್ತಾನ ಮ್ಯಾಚ್ ನಿಲ್ಲಿಸಿ. ನಾವು ಇನ್ನೂ ಪಹಲ್ಗಾಮ್ ದಾಳಿಯನ್ನು ಮರೆತಿಲ್ಲ. ನಮಗೆ ನೋವಿದೆ. ಅದಕ್ಕೆ ನಾನು ಇವತ್ತಿನ ಪಂದ್ಯಾವಳಿಯನ್ನು ನೋಡೋದಿಲ್ಲ ಎಂಬುದಾಗಿ ತಿಳಿಸಿದರು.
ನಿಮ್ಮ ಆಧಾರ್ ಕಾರ್ಡ್ ಅನ್ನು WhatsAppನಲ್ಲಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ