ಬೆಂಗಳೂರು: ಮಾವನ ಜೊತೆಗೆ ಅಕ್ರಮ ಸಂಬಂಧ ಹೊಂದುವಂತೆ ಸೊಸೆಗೆ ಕಿರುಕುಳ ನೀಡಲಾಗಿದೆ. ಈ ಸಂಬಂಧ ಸೊಸೆ ನೀಡಿದಂತ ದೂರಿನ ಹಿನ್ನಲೆಯಲ್ಲಿ ಅತ್ತೆ-ಮಾವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಬೆಂಗಳೂರಿ ಬಿಟಿಎಂ ಲೇಔಟ್ ನಿವಾಸಿ ಯಾಸೀನ್ ಪಾಷಾ ಮತ್ತು ಪತ್ನಿ ಶಾಸೀಯಾರಿಂದ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 351(2), 352,2(5) ರಡಿ ಪ್ರಕರಣ ದಾಖಲಾಗಿದೆ.
ಯಾಸೀನ್ ಪಾಷಾ ಹಾಗೂ ಶಾಸೀಯಾ ಜೊತೆಗೆ ಕಳೆದ ಮೇ ತಿಂಗಳಿನಲ್ಲಿ ನಿಶ್ಚಿತಾರ್ಥವಾಗಿತ್ತು. ಆದರೇ ನಂತ್ರ ದಿನಗಳಲ್ಲಿ ಮದುವೆ ಮಾಡಲು ಹುಡುಗನ ಪೋಷಕರು ನಿರಾಕಸಿದ್ದರು. ಯಾಸಿನ್ ನಿಶ್ಚಿತಾರ್ಥದ ಬಳಿಕ ಪೋಷಕರ ವಿರೋಧದ ನಡುವೆ ಮೈಸೂರಲ್ಲಿ ಮದುವೆಯಾಗಿ, ಮನೆಗೆ ಬಂದಿದ್ದರು. ಇದರಿಂದ ಕೋಪಗೊಂಡಿದ್ದಂತ ಅತ್ತೆ ಹುಮೇದಾ ಹಾಗೂ ಮಲತಂದೆ ಅಕ್ಬರ್ ಸೊಸೆಗೆ ಕಿರುಕುಳ ನೀಡುತ್ತಿದ್ದರು.
ಇದಷ್ಟೇ ಅಲ್ಲದೇ ಮಾವನ ಜೊತೆಗೆ ಅನೈತಿಕ ಸಂಬಂಧ ಹೊಂದುವಂತೆಯೂ ಕಿರುಕುಳ ನೀಡುತ್ತಿದ್ದರು. ಇದಕ್ಕೆ ಒಪ್ಪದಿದ್ದಾಗ ಸೊಸೆ ಶಾಸೀಯಾನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆಯೂ ಬೆದರಿಕೆ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ.
BREAKING: ಬಹುಭಾಷಾ ನಟಿ ಊರ್ವಶಿ ರೌಟೇಲಾಗೆ ಸಂಕಷ್ಟ: ಅಕ್ರಮ ಬೆಟ್ಟಿಂಗ್ ಕೇಸಲ್ಲಿ ಇಡಿ ಸಮನ್ಸ್ | Urvashi Rautela
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ