ಶಿವಮೊಗ್ಗ: ಕಮಿಷನ್ ದರದಲ್ಲಿ ಆದ ಹಿನ್ನೆಡೆ, ಪೌತಿ ಸದಸ್ಯರು ಹಾಗೂ ಸುಸ್ತಿಯಾಗಿ ದೀರ್ಘ ಕಾಲ ಸಂದ ಸಾಲದ ಮೇಲಿನ ಬಡ್ಡಿ ರಿಯಾಯ್ತಿ ಮೊದಲಾದ ಸವಾಲುಗಳ ಹೊರತಾಗಿಯೂ ಸಂಸ್ಥೆ ಹಿಂದಿನ ಸಾಲಿನಲ್ಲಿ 64.47 ಲಕ್ಷ ರೂ. ಲಾಭವನ್ನು ಸಂಪಾದಿಸಿದೆ ಎಂದು ಸಾಗರದ ತೋಟಗರ್ಸ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ.ಸಿ. ದೇವಪ್ಪ ಹೇಳಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಭದ್ರಕಾಳಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 2024-25ನೇ ಸಾಲಿನ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಳೆದ ಚುನಾವಣೆಯಲ್ಲಿ ಈ ಹಿಂದೆ ಸಹಕಾರಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು ವಿಶ್ರಮಿಸಿ ಹೊಸಬರಿಗೆ ಅವಕಾಶ ಕಲ್ಪಿಸುವ ಪ್ರಕ್ರಿಯೆ ನಡೆದಿದೆ. ಹೀಗೆ ನಿರ್ಗಮಿಸಿದವರು ಸಂಸ್ಥೆಯ ಕಟ್ಟಡ ನಿಧಿಗೆ ತಮ್ಮದೇ ಆದ ದೇಣಿಗೆಯನ್ನೂ ನೀಡಿದರು ಎಂಬುದನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. ಇದೇ ಕಾರಣದಿಂದ ಈ ಬಾರಿ 8 ಜನ ಹೊಸ ನಿರ್ದೇಶಕರ ಜೊತೆ ಆಡಳಿತ ಮಂಡಳಿ ಕೆಲಸ ಮಾಡುತ್ತಿದೆ ಎಂದರು.
ಸಂಸ್ಥೆ ಬರುವ ವರ್ಷ ಸುವರ್ಣ ಮಹೋತ್ಸವವನ್ನು ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ತಯಾರಿಗಳು ಆರಂಭವಾಗಿವೆ. ಲಾಭದಲ್ಲಿ ಈ ಕಾರ್ಯಕ್ರಮಕ್ಕೆ ದೊಡ್ಡ ಮೊತ್ತವನ್ನು ತೆಗೆದಿರಿಸಲಾಗಿದೆ. ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಸ್ಮರಣ ಸಂಚಿಕೆಯ ಯೋಜನೆ ಹಾಗೂ ಎಲ್ಲ ಷೇರುದಾರ ಸದಸ್ಯರಿಗೆ ಒಪ್ಪುವಂತಹ ನೆನಪಿನ ಕಾಣಿಕೆ ಕೊಡುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಚಿಂತಿಸಿದೆ. ಸರ್ವ ಸದಸ್ಯರ ಸಭೆಯ ದಿನವೇ ಈ ಸಮಾರಂಭವನ್ನು ಯೋಜಿಸಲು ಸಾಧ್ಯವೇ ಎಂಬ ಬಗ್ಗೆಯೂ ಚಿಂತನೆ ನಡೆದಿದೆ ಎಂದರು.
ಸAಸ್ಥೆಯ ಉಪಾಧ್ಯಕ್ಷ ಎಂ.ಜಿ.ಪ್ರಕಾಶ್, ನಿರ್ದೇಶಕರಾದ ಎಂ.ಜಿ.ಶ್ರೀಕAಠ, ಡಿ.ಪಿ. ಕೃಷ್ಣಮೂರ್ತಿ, ಎಂ.ಸುಬ್ರಾಯ ಮಾವಿನಸರ, ನಿರ್ಮಲಾ, ಅನುಪಮ, ಬಿ.ಆರ್.ಅಶೋಕ, ಕೆ.ಎಲ್.ಗಣೇಶ್ ಕಾಕಾಲ್, ಟಿ.ಎನ್.ಭಾಸ್ಕರ, ಕೆ.ಎನ್.ಮಂಜುನಾಥ ಕೌಲ್ಮನೆ, ಎಸ್.ವಿರೇಶ್, ಜಿ.ಎನ್.ಸುಧೀರ್ ಇನ್ನಿತರರು ಇದ್ದರು. ಕೆ.ಎಂ. ಸಾವಿತ್ರಿ ಪ್ರಾರ್ಥಿಸಿದರು. ಬಿ.ಆರ್.ಮನೋಹರ ಸ್ವಾಗತಿಸಿದರು. ಎಚ್.ಎಸ್. ಗಣಪತಿರಾವ್ ವಂದಿಸಿದರು. ಆದರ್ಶ ನಿರ್ವಹಿಸಿದರು.
ಮಂಡ್ಯದಲ್ಲಿ ದಸರಾ ಉದ್ಘಾಟಕರ ಆಯ್ಕೆಗೆ ತೀವ್ರ ವಿರೋಧ: ಚಾಮುಂಡಿ ಬೆಟ್ಟ ತಲೋ ಹೊರಟ ಹಿಂದೂ ಕಾರ್ಯಕರ್ತರ ಅರೆಸ್ಟ್
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ