ಮಂಡ್ಯ: ಜಿಲ್ಲೆಯಲ್ಲಿ ದಸರಾ ಉದ್ಘಾಟಕರಾಗಿ ಬಾನು ಮುಷ್ತಾಕ್ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋ ನಡೆಸಲು ಹಿಂದೂ ಕಾರ್ಯಕರ್ತರು ಮುಂದಾಗಿದ್ದರು. ಇಂತಹ ಹಿಂದೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಮೈಸೂರು ದಸರಾ ದಸರಾ ಉದ್ಘಾಟರ ಬದಲಾವಣೆಗೆ ಹಿಂದೂ ಕಾರ್ಯಕರ್ತರ ಪಟ್ಟು ಹಿಡಿದ್ದಾರೆ. ಬಜರಂಗ ಸೇನೆಯಿಂದ ಚಾಮುಂಡಿ ಬೆಟ್ಟ ಚಲೋ ಕೈಗೊಳ್ಳಲಾಗಿತ್ತು. ಮಂಡ್ಯದಲ್ಲಿ ಬಜರಂಗಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ನೇತೃತ್ವದಲ್ಲಿ ಚಾಮುಂಡಿ ಬೆಟ್ಟ ಚಲೋ ನಡೆಸಲು ಮುಂದಾಗಿತ್ತು.
ಲೇಖಕಿ ಬಾನು ಮುಷ್ತಾಕ ಆಯ್ಕೆಗೆ ವಿರೋಧ ವ್ಯಕ್ತವಾಗಿತ್ತು. ಮಂಡ್ಯದ ಶಕ್ತಿ ದೇವತೆ ಕಾಳೀಕಾಂಭ ದೇವಾಲಯದಿಂದ ತೆರಳಲು ಸಿದ್ದತೆ ನಡೆಸಲಾಗಿತ್ತು. ಚಾಮುಂಡಿ ಬೆಟ್ಟ ಚಲೋಗೆ ತೆರಳುತ್ತಿರುವ ಸುಮಾರು 50 ಕಾರುಗಳಲ್ಲಿ 300 ಜನರು ಹೊರಟಿದ್ದರು.
ಭುವನೇಶ್ವರಿ ತಾಯಿಯನ್ನ ಮುಸ್ಲಿಂ ವಿರೋಧಿ ರೀತಿ ಮಾತನಾಡಿದ್ದಾರೆ. ಕನ್ನಡದ ಧ್ವಜದ ಬಗ್ಗೆ ಮಾತನಾಡಿರುವ ಮಾತು ಮತಾಂಧ ಮಾನಸಿಕತೆ ತೋರುತ್ತದೆ. ಅಂತಹ ವ್ಯಕ್ತಿ ಚಾಮುಂಡೇಶ್ವರಿಯ ಆರಾಧನೆ ಮಾಡಲು ಹೇಗೆ ಸಾಧ್ಯ. ರಾಜ್ಯ ಸರ್ಕಾರದ ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಮಾಡ್ತಿದೆ. ಬಾನು ಮುಷ್ತಾಕ್ ಅವರು ಮತಾಂಧ ಸಂದೇಶ ಕೊಟ್ಟ ವ್ಯಕ್ತಿ. ರಾಜ್ಯ ಸರ್ಕಾರ ನಮ್ಮನ್ನು ಹತ್ತಿಕ್ಕಲು ಮುಂದಾಗಿದೆ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಸರಿಯಲ್ಲ ಎಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಚಾಮುಂಡಿ ಬೆಟ್ಟ ಚಲೋ ಹಿನ್ನಲೆ ಬಾರಿ ಪೊಲೀಸ್ ಬಂದ್ ಬಸ್ತ್ ಕೈಗೊಳ್ಳಲಾಗಿತ್ತು.
ಇದೀಗ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿಂದ ಹಿಂದೂ ಕಾರ್ಯಕರ್ತರುನ್ನು ಚಾಮುಂಡಿ ಬೆಟ್ಟ ಚಲೋಗೆ ತೆರಳುವ ವೇಳೆ ಅರೆಸ್ಟ್ ಮಾಡಿದ್ದಾರೆ. ಮಂಡ್ಯದ ಕಾಳಿಕಾಂಭ ದೇವಸ್ಥಾನದ ಬಳಿಯೇ ಬಂಧಿಸಲಾಗಿದೆ. ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಈ ವೇಳೆ ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಜರಂಗ ಸೇನೆ ರಾಜ್ಯಾಧ್ಯಕ್ಷ ಬಿ.ಮಂಜುನಾಥ್ ಬಂಧನ ಮಾಡಲಾಗಿದೆ. ಬಂಧಿಸಿ ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ದಿದ್ದಾರೆ. ಈ ವೇಳೆ ಹಿಂದೂ ಕಾರ್ಯಕರ್ತರು ಪೊಲೀಸರ ನಡೆಯ ವಿರುದ್ಧ ಆಕ್ರೋಶವನ್ನು ಹೊರಹಾಕಿದರು.
ವರದಿ: ಗಿರೀಶ್ ರಾಜ್, ಮಂಡ್ಯ
ಬಳ್ಳಾರಿಯಲ್ಲಿ ಕಳುವಾಗಿದ್ದ ಮಗು 12 ಗಂಟೆಗಳೊಳಗೆ ತಾಯಿ ಮಡಿಲಿಗೆ, ನಾಲ್ವರು ಅರೆಸ್ಟ್
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ದ ಚುನಾವಣೆಗೆ ಕೆಪಿಸಿಸಿ ಭರ್ಜರಿ ಸಿದ್ಧತೆ: ಪೂರ್ವತಯಾರಿ ಸಮಿತಿ ರಚಿಸಿ ಡಿಕೆಶಿ ಆದೇಶ