ಬೆಂಗಳೂರು: ಸೆಪ್ಟೆಂಬರ್.15ರಂದು ರಾಜ್ಯಾಧ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸುವಂತೆ ಸರ್ಕಾರ ಆದೇಶಿಸಿದೆ.
ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ಪ್ರಜಾಪ್ರಭುತ್ವದ ತತ್ವಗಳನ್ನು ಉತ್ತೇಜಿಸಲು ಮತ್ತು ಜಾಗತಿಕವಾಗಿ ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪುಜಾಪ್ರಭುತ್ವದ ಆಡಳಿತ, ಮಾನವ ಹಕ್ಕುಗಳು ಮತ್ತು ಕಾನೂನಿನ ನಿಯಮದ ಮೌಲ್ಯಗಳನ್ನು ಬಲಪಡಿಸಲು 2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಆಚರಿಸಲಾಗುತ್ತಿದೆ.
ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB), ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್), ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್), ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ), ಕರ್ನಾಟಕ ರಾಜ್ಯ ರೇಷ್ಮೆ ನಿಗಮ ನಿಯಮಿತ(ಕೆಎಸ್‌ಐಸಿ)ಗಳ ಸಹಭಾಗಿತ್ವದಲ್ಲಿ “ನನ್ನ ಮತ ನನ್ನ ಹಕ್ಕು” (My Vote My Right) ಎಂಬ ಧೇಯ ವಾಕ್ಯದೊಂದಿಗೆ ರಾಜ್ಯ/ಜಿಲ್ಲಾ ಮಟ್ಟದಲ್ಲಿ ದಿನಾಂಕ:15-09-2025ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಆಚರಿಸಲು ಉದ್ದೇಶಿಸಲಾಗಿದೆ.
ಮೇಲ್ಕಂಡ ಅಂಶಗಳ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಪುಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದಲ್ಲಿ ಕೈಗೊಳ್ಳಬೇಕಾಗಿರುವ ವಿವಿಧ ಚಟುವಟಿಕೆಗಳ ಕುರಿತು ಸೂಕ್ತ ನಿರ್ದೇಶನ ನೀಡಲು ನಿರ್ಧರಿಸಿ, ಈ ಕೆಳಕಂಡಂತೆ ಆದೇಶ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಂತೆ, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಗ್ರೇಟ ಬೆಂಗಳೂರು ಪ್ರಾಧಿಕಾರ, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB), ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್), ಮೈಸೂರು ಸೇಲ್ಸ್ ಇಂಟ ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್), ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ), ಕರ್ನಾಟಕ ರಾಜ್ಯ ರೇಷ್ಮೆ ನಿಗಮ ನಿಯಮಿತ(ಕೆಎಸ್‌ಐಸಿ)ಗಳ ಸಹಭಾಗಿತ್ವದಲ್ಲಿ “ನನ್ನ ಮತ ನನ್ನ ಹಕ್ಕು” (My Vote My Right) ಎಂಬ ಧೈಯ ವಾಕ್ಯದೊಂದಿಗೆ ರಾಜ್ಯ/ಜಿಲ್ಲೆ/ತಾಲ್ಲೂಕು ಮಟ್ಟದಲ್ಲಿ ಈ ಕೆಳಕಂಡ ವಿವಿಧ ಕಾರ್ಯಚಟುವಟಿಕೆಗಳನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ದಿನಾಂಕ:15.09.2025ರಿಂದ ಚಾಲನೆ ನೀಡುವುದರೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲು ಆದೇಶಿಸಿದೆ.
ಜಿಲ್ಲಾ ಹಂತದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ದಿನಾಂಕ:15.09.2025ರಂದು ಆಯೋಜಿಸಿ, ಸಂವಿಧಾನದ ಪೀಠಿಕೆಯನ್ನು ವಾಚನ ಮಾಡುವುದರ ಮುಖಾಂತರ ಪಜಾಪಭುತ್ವ ವ್ಯವಸ್ಥೆಯಲ್ಲಿ ಎಲ್ಲಾ ಸಮುದಾಯದವರು ಮತ ಚಲಾಯಿಸುವ ಹಕ್ಕು ಹೊಂದಿರುವುದರ ಕುರಿತು ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳುವುದು.
ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ಇಲಾಖೆಯ ನೆರವಿನೊಂದಿಗೆ ದಿನಾಂಕ: 15.09.2025 ರಂದು ಸೈಕಲ್ ಜಾಥಾ ಏರ್ಪಡಿಸುವುದು.
ಬೆಂಗಳೂರು ನಗರದಿಂದ ವಿಧಾನಸೌಧಕ್ಕೆ ಆಗಮಿಸುವ ಸೈಕಲ್ ಜಾಥಾಗ ಅಸಂಘಟಿತ ಕಾರ್ಮಿಕರನ್ನೂ ಒಳಗೊಂಡಂತೆ ಸೈಕಲ್ ಜಾಥವನ್ನು ಆಯೋಜಿಸುವುದು.
ಪೊಲೀಸ್ ಇಲಾಖೆಯು ಇದಕ್ಕೆ ಅಗತ್ಯವಾದ ಸೂಕ್ತ ಭದ್ರತೆಯನ್ನು ಒದಗಿಸುವುದು.
ಯುವ ಸಬಲೀಕರಣ ಇಲಾಖೆಯ ವತಿಯಿಂದ ಪೊಲೀಸ್ ಸಹಯೋಗದೊಂದಿಗೆ ಪ್ರತೀ ಜಿಲ್ಲೆಯಿಂದ 10 ಬೈಕ್ ಸವಾರರು ಅಂತರಾಷ್ಟ್ರೀಯ ಪಜಾಪಭುತ್ವ ದಿನಾಚರಣೆಯ ಧ್ವಜದೊಂದಿಗೆ ರಸ್ತೆ ಮುಖಾಂತರವಾಗಿ ಬೆಂಗಳೂರು ಕೇಂದ್ರ ಸ್ಥಾನವನ್ನು ತಲುಪಿ, ಅಂತರಾಷ್ಟ್ರೀಯ ಪಜಾಪುಭುತ್ವ ದಿನಾಚರಣೆಯ ದಿನವಾದ ದಿನಾಂಕ: 15-09-2025 ರ ಬೆಳಿಗ್ಗೆ 10.00 ಗಂಟೆಗೆ ವಿಧಾನಸೌಧದ ಪೂರ್ವ ದ್ವಾರವನ್ನು ಪ್ರವೇಶಿಸುವುದು.
ದಿನಾಂಕ:15.09.2025 ರಂದು ಆಯೋಜಿಸಲಾಗುವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ದಿನದಂದು ಈ ಕೆಳಕಂಡ ಸ್ಪರ್ಧೆಗಳಿಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳಿಂದ ಚಾಲನೆ ನೀಡುವುದು;
(1) ಚಿತ್ರಕಲೆ (Painting Competition):-
ರಾಜ್ಯದ ಎಲ್ಲಾ ಶಾಲೆಗಳ 6ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 9ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಎರಡು ವಿಭಾಗದಲ್ಲಿ “ನನ್ನ ಮತ ನನ್ನ ಹಕ್ಕು (MY VOTE MY RIGHT) ಎಂಬ ಶೀರ್ಷಿಕೆಯ ಕುರಿತು ಚಿತ್ರಕಲೆ (Painting) ಸ್ಪರ್ಧೆಗೆ ದಿನಾಂಕ:15-09-2025 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇತೃತ್ವದಲ್ಲಿ ಚಾಲನೆ ನೀಡಿ, ಅಕ್ಟೋಬರ್ 31, 2025ರೊಳಗೆ ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ಮುಕ್ತಾಯಗೊಳಿಸುವುದು.
ಬಹುಮಾನ:-
ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆಡಳಿತದಿಂದ ನೇಮಿಸಲ್ಪಟ್ಟ ತೀರ್ಪುಗಾರರಿಂದ (ಜೂರಿ) ಚಿತ್ರಕಲೆ (Painting) ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ನಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.15,000/-, ರೂ. 10,000/-, ರೂ.5,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ತಾಲ್ಲೂಕು ಮಟ್ಟದಿಂದ ಆಯ್ಕೆಗೊಂಡ ಮೂವರು ವಿಜೇತರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿ, ಜಿಲ್ಲಾ ಮಟ್ಟದಲ್ಲಿ ಪಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.25,000/- ರೂ.15,000/-, ರೂ.10,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ಜಿಲ್ಲಾ ಮಟ್ಟದಿಂದ ಆಯ್ಕೆಯಾಗುವ ಪ್ರತಿ ಮೂರು ಚಿತ್ರಕಲಾ ಪತಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡುವುದು. ಅವುಗಳ ಪೈಕಿ ಮೊದಲ ಅತ್ಯುತ್ತಮ ಮೂರು ಸ್ಪರ್ಧಾರ್ಥಿಗಳ ಚಿತ್ರಕಲೆಗಳನ್ನು ರಾಜ್ಯ ಮಟ್ಟದ ಜೂರಿ ಆಯ್ಕೆ ಸಮಿತಿ ಮೂಲಕ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನಗಳಿಗೆ ಆಯ್ಕೆ ಮಾಡಿ, ಕ್ರಮವಾಗಿ ರೂ.1,00,000/-, ರೂ.50,000/-, ರೂ.25,000/-ಗಳ ನಗದು ಬಹುಮಾನವನ್ನು ನವೆಂಬರ್ 26, 2025 ರ ಸಂವಿಧಾನ ದಿನಾಚರಣೆಯಂದು ವಿತರಿಲಾಗುವುದು.
(2) ಛಾಯಾಗ್ರಹಣ (Photography Competition):-
ರಾಜ್ಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ “ನನ್ನ ಮತ ನನ್ನ ಹಕ್ಕು (MY VOTE MY RIGHT) ಎಂಬ ಶೀರ್ಷಿಕೆಯ ಕುರಿತು ಛಾಯಾಗ್ರಹಣ (Photography Competition) ಸ್ಪರ್ಧೆಗೆ ದಿನಾಂಕ:15-09-2025 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚಾಲನೆ ನೀಡಿ, ಮತದಾನದ ಹಕ್ಕಿನ ಕುರಿತಾದ ಛಾಯಾಗ್ರಹಣ (Photography)ದ ಚಿತ್ರಗಳನ್ನು ಅಕ್ಟೋಬರ್ 31, 2025ರೊಳಗೆ ಇಲಾಖೆಯಿಂದ ಸೃಜಿಸಲಾದ https://www.democracydaykarnataka.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು.
ಬಹುಮಾನ:-
ಇಲಾಖೆ ಅಭಿವೃದ್ಧಿಪಡಿಸಿದ https://www.democracydaykarnataka.in ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಛಾಯಾಗ್ರಹಣದ ಚಿತ್ರಗಳನ್ನು ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಆಡಳಿತದಿಂದ ನೇಮಿಸಲ್ಪಟ್ಟ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.15,000/-, ರೂ. 10,000/- ರೂ.5,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ಇಲಾಖೆ ಅಭಿವೃದ್ಧಿಪಡಿಸಿದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಛಾಯಾಗ್ರಹಣದ ಚಿತ್ರಗಳಲ್ಲಿ ತಾಲ್ಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.25,000/- ರೂ.15,000/-, ರೂ.10,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ಜಿಲ್ಲಾ ಮಟ್ಟದಲ್ಲಿ ವಿಜೇತರಾದ ಮೂರು ಸ್ಪರ್ಧಾರ್ಥಿಗಳ ಛಾಯಾಗ್ರಹಣದ ಚಿತ್ರಗಳನ್ನು ಇಲಾಖೆಯಿಂದ ಅಭಿವೃದ್ಧಿಪಡಿಸಿದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು. ಈ ಛಾಯಾಗ್ರಹಣದ ಚಿತ್ರಗಳಲ್ಲಿ ಮೊದಲ ಅತ್ಯುತ್ತಮ ಮೂರು ಸ್ಪರ್ಧಾರ್ಥಿಗಳ ಚಿತ್ರಕಲೆಗಳನ್ನು ರಾಜ್ಯ ಮಟ್ಟದ ಜೂರಿ ಆಯ್ಕೆ ಸಮಿತಿ ಮೂಲಕ ಪಥಮ ಸ್ನಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನಗಳಿಗೆ ಆಯ್ಕೆ ಮಾಡಿ, ಕ್ರಮವಾಗಿ ರೂ.1,00,000/-, ರೂ.50,000/-, ರೂ.25,000/-ಗಳ ನಗದು ಬಹುಮಾನವನ್ನು ನವೆಂಬರ್ 26, 2025 ರ ಸಂವಿಧಾನ ದಿನಾಚರಣೆಯಂದು ವಿತರಿಲಾಗುವುದು.
(3) ಭಾಷಣ ಸ್ಪರ್ಧೆ (Speech competition) :-
ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೈಸ್)ದಡಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ (1) “ನನ್ನ ಮತ ನನ್ನ ಹಕ್ಕು (MY VOTE MY RIGHT), (2) ಸಂವಿಧಾನದ ಪೀಠಿಕೆಯ ಮಹತ್ವ (Importance of Preamble of the Constitution) ಮತ್ತು (3) ಮಹಾತ್ಮ ಗಾಂಧೀಜಿ ರವರ ದೃಷ್ಟಿಕೋನದಲ್ಲಿ ‘ಗಾಂಧಿ ಭಾರತ’ ಈ ಮೂರು ವಿಷಯಗಳ ಮೇಲಿನ ಭಾಷಣ ಸ್ಪರ್ಧೆ (Speech competition)ಗೆ ದಿನಾಂಕ:15-09-2025 ರಂದು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಚಾಲನೆ ನೀಡಿ, ಅಕ್ಟೋಬರ್ 31, 2025ರೊಳಗೆ ತಾಲ್ಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಿ ಮುಕ್ತಾಯಗೊಳಿಸುವುದು.
ಬಹುಮಾನ:-
ತಾಲ್ಲೂಕು ಮಟ್ಟದಲ್ಲಿ ಏರ್ಪಡಿಸಲಾಗುವ W (Speech competition) ಸ್ಪರ್ಧೆಯಲ್ಲಿ ತಾಲ್ಲೂಕು ಆಡಳಿತದಿಂದ ನೇಮಿಸಲ್ಪಟ್ಟ ತೀರ್ಪುಗಾರರಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.15,000/-, ರೂ. 10,000/-, ರೂ.5,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಮೂವರು ಸ್ಪರ್ಧಾರ್ಥಿಗಳಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಿ, ಜಿಲ್ಲಾ ಮಟ್ಟದ ಜೂರಿ ಸಮಿತಿಯಿಂದ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಗಳಿಸುವ ಸ್ಪರ್ಧಾರ್ಥಿಗಳಿಗೆ ಕ್ರಮವಾಗಿ ರೂ.25,000/-, ರೂ.15,000/-, ರೂ.10,000/-ಗಳ ನಗದು ಬಹುಮಾನವನ್ನು ನವೆಂಬರ್ 14, 2025 ರ ಮಕ್ಕಳ ದಿನಾಚರಣೆಯಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ವಿತರಿಸುವುದು.
ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಸ್ಪರ್ಧಾರ್ಥಿಗಳ ಪೈಕಿ ರಾಜ್ಯ ಮಟ್ಟದ ಜೂರಿ ಸಮಿತಿಯು ಆಯ್ಕೆ ಮಾಡುವ ಮೊದಲ ಮೂರು ಅತ್ಯುತ್ತಮ ಭಾಷಣ ಸ್ಪರ್ಧಾಳುಗಳನ್ನು ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಹಾಗೂ ತೃತೀಯ ಸ್ಥಾನಗಳಿಗೆ ಆಯ್ಕೆ ಮಾಡಿ, ಕ್ರಮವಾಗಿ ರೂ.1,00,000/-, ರೂ.50,000/-, ರೂ.25,000/-ಗಳ ನಗದು ಬಹುಮಾನವನ್ನು ನವೆಂಬರ್ 26, 2025 ರ ಸಂವಿಧಾನ ದಿನಾಚರಣೆಯಂದು ವಿತರಿಲಾಗುವುದು.
ರಾಜ್ಯದ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಚಿವ ಈಶ್ವರ್ ಖಂಡ್ರೆ ಗುಡ್ ನ್ಯೂಸ್
ಶಿವಮೊಗ್ಗ: ಹೊಸನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ‘ನಾಗೋಡಿ ವಿಶ್ವನಾಥ್’ ನೇಮಕ