ಬೆಂಗಳೂರು: ರಾಜ್ಯ ಸರ್ಕಾರದಿಂದ ಗ್ರೇಟರ್ ಪ್ರಾಧಿಕಾರದ ಅಡಿಯಲ್ಲಿನ ನಗರ ಪಾಲಿಕೆಗಳ ವಲಯಗಳಿಗೆ ನಾಮಾಂಕಿತಗೊಳಿಸಿ ಆದೇಶ ಮಾಡಿದೆ. ಈ ಮೂಲಕ ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಯಾವ ವಲಯಗಳು ಯಾವ ಪಾಲಿಗೆ ಸೇರಲಿವೆ ಎಂಬುದಾಗಿ ನಾಮಾಂಕಿತಗೊಳಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ದಿನಾಂಕ : 02-09-2025 ರ ಸರ್ಕಾರದ ಆದೇಶದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನಾಗಿ ಪುನರ್ ರಚಿಸಿ ಪ್ರಾಧಿಕಾರದಡಿ ಐದು ಪ್ರತ್ಯೇಕ ಬೆಂಗಳೂರು ನಗರ ಪಾಲಿಕಗಳನ್ನು ರಚಿಸಲಾಗಿರುತ್ತದೆ. ಈ ರೀತಿ ರಚಿಸಲಾದ 5 ಪ್ರತ್ಯೇಕ ಬೆಂಗಳೂರು ನಗರ ಪಾಲಿಕೆಗಳನ್ನು ಪ್ರತಿ ನಗರ ಪಾಲಿಕೆಗೆ ತಲಾ 2 ವಲಯಳಂತೆ 10 ವಲಯಗಳಾಗಿ ವಿಂಗಡಿಸಲಾಗಿದ್ದು ಸದರಿ ಎಲ್ಲಾ ವಲಯಗಳನ್ನು ವಲಯ-1 ಮತ್ತು ವಲಯ -2 ಎಂದು ಗುರುತಿಸಲಾಗಿರುತ್ತದೆ.
ಸದರಿ 5 ನಗರ ಪಾಲಿಕೆಗಳ ಎಲ್ಲಾ ವಲಯಗಳಿಗೆ ಸಾರ್ವಜನಿಕರ ಹಾಗೂ ನಗರ ಪಾಲಿಕೆಯ ಆಡಳಿತ ದೃಷ್ಟಿಯಿಂದ ಕೆಳಕಂಡಂತೆ ನಾಮಾಂಕಿತವನ್ನು ನೀಡಿ ಆದೇಶಿಸಿದೆ.
1.ಬೆಂಗಳೂರು ಕೇಂದ್ರ
ವಲಯ-1, ಸಿ.ವಿ.ರಾಮನ್ ನಗರ, 1. ಸಿ.ವಿ.ರಾಮನ್ ನಗರ, 2. ಶಾಂತಿನಗರ,
2. ಬೆಂಗಳೂರು ಕೇಂದ್ರ
ವಲಯ-2 – ಗಾಂಧಿನಗರ, 1. ಗಾಂಧಿನಗರ, 2. ಶಿವಾಜಿನಗರ, 3. ಚಾಮರಾಜಪೇಟೆ, 4. ಚಿಕ್ಕಪೇಟೆ
3. ಬೆಂಗಳೂರು ಪೂರ್ವ
ವಲಯ-1, ಮಹದೇವಪುರ, 1. ಮಹದೇವಪುರ (ಭಾಗಶಃ)
4. ಬೆಂಗಳೂರು ಪೂರ್ವ
ವಲಯ-2, ಕೆ.ಆರ್.ಪುರ, 1. ಕೆ.ಆರ್.ಪುರ
5. ಬೆಂಗಳೂರು ದಕ್ಷಿಣ
ವಲಯ-1, ಜಯನಗರ, 1. ಜಯನಗರ, 2. ಪದ್ಮನಾಭನಗರ (ಭಾಗಶಃ), 3. ಯಶವಂತಪುರ (ಭಾಗಶಃ), 4. ರಾಜರಾಜೇಶ್ವರಿನಗರ
(ಭಾಗಶಃ).
6. ಬೆಂಗಳೂರು ದಕ್ಷಿಣ ನಗರ ಪಾಲಿಕ
ವಲಯ-2 | ಬೊಮ್ಮನಹಳ್ಳಿ, 1. ಬೊಮ್ಮನಹಳ್ಳಿ, 2. ಬಿಟಿಎಂ ಲೇಔಟ್, 3. ಮಹದೇವಪುರ (ಭಾಗಶಃ), 4. ಆನೇಕಲ್ (ಭಾಗಶಃ)
7. ಬೆಂಗಳೂರು ಪಶ್ಚಿಮ ನಗರ ಪಾಲಿಕ
ವಲಯ-1, ರಾಜರಾಜೇಶ್ವರಿ, 1. ರಾಜರಾಜೇಶ್ವರಿನಗರ (ಭಾಗಶಃ), 2. ಯಶವಂತಪುರ (ಭಾಗಶಃ), 3. ದಾಸರಹಳ್ಳಿ (ಭಾಗಶಃ), 4. ಮಹಾಲಕ್ಷ್ಮಿ ಲೇಔಟ್
8. ಬೆಂಗಳೂರು ಪಶ್ಚಿಮ ನಗರ ಪಾಲಿಕ
ವಲಯ-2, ಮಲ್ಲೇಶ್ವರಂ, 1. ಮಲ್ಲೇಶ್ವರಂ, 2. ರಾಜಾಜಿನಗರ, 3. ಗೋವಿಂದರಾಜ್ ನಗರ, 4, ವಿಜಯನಗರ, 5. ಬಸವನಗುಡಿ, 6. ಪದ್ಮನಾಭ ನಗರ (ಭಾಗಶಃ)
9. ಬೆಂಗಳೂರು ಉತ್ತರ ನಗರ ಪಾಲಿಕೆ
ವಲಯ-1, ಬ್ಯಾಟರಾಯನಪುರ, 1. ಬ್ಯಾಟರಾಯನಪುರ 2. ಸರ್ವಜ್ಞ ನಗರ, 3. ಪುಲಿಕೇಶಿ ನಗರ
10.ಬೆಂಗಳೂರು ಉತ್ತರ ನಗರ ಪಾಲಿಕ
ವಲಯ-2, ಯಲಹಂಕ, 1. ಯಲಹಂಕ, 2. ದಾಸರಹಳ್ಳಿ (ಭಾಗಶಃ), 3. ಹಬ್ಬಾಳ


BREAKING: ಹಾಸನ ಗಣೇಶ ಮೆರವಣಿಗೆ ದುರಂತ: ಚಿಕಿತ್ಸೆ ಫಲಿಸದೇ ಮತ್ತೊಬ್ಬ ಸಾವು, ಮೃತರ ಸಂಖ್ಯೆ 10ಕ್ಕೆ ಏರಿಕೆ








