ಬಳ್ಳಾರಿ : ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ ಮೀನಹಳ್ಳಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಕೈಗೊಂಡಿರುವುದರಿAದ 110/11ಕೆ.ವಿ ಮೀನಹಳ್ಳಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಎಲ್ಲಾ 11ಕೆ.ವಿ ಮಾರ್ಗಗಳಲ್ಲಿ ಸೆ.14 ರಂದು ಬೆಳಿಗ್ಗೆ 09 ರಿಂದ ಸಂಜೆ 05 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು
ಎಫ್-2 ಚಾಗನೂರು ಐಪಿ ಫೀಡರ್ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು, ಚಾಗನೂರು ಚಾಗನೂರು ಕೃಷಿ ಪ್ರದೇಶಗಳು. ಎಫ್-1 ಮೀನಹಳ್ಳಿ/ ಕೆ.ವೀರಾಪುರ ಎನ್.ಜೆ.ವೈ ಮಾರ್ಗದ ಮೀನಹಳ್ಳಿ, ಶಿಡಿಗಿನಮೋಳ, ಕೆ.ವೀರಾಪುರ, ಕಾರೆಕಲ್ಲು ಗ್ರಾಮ.
ಎಫ್-4 ಎ.ಟಿ.ಪಿ.ಎಸ್ ಚೆಳ್ಳಗುರ್ಕಿ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಾಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಗ್ರಾಮ. ಎಫ್-5 ಹಗರಿ ಐಪಿ ಫೀಡರ್ ಮಾರ್ಗದ ಹಗರಿ, ಪಿ.ಡಿ.ಹಳ್ಳಿ, ಕಗ್ಗಲ್, ಲಿಂಗದೇವನಹಳ್ಳಿ, ಯಳ್ಪಿ, ಜೋಳದರಾಶಿ, ಚೆಳ್ಳಗುರ್ಕಿ ಕೃಷಿ ಪ್ರದೇಶಗಳು.
ಎಫ್-6 ಫೀಡರ್ ಮಾರ್ಗದ ಎ-ಒನ್ ಕೋಲ್ಡ್ ಸ್ಟೋರೆಜ್, ಮೆ.ಜಾನಕಿ ಕಾರ್ಪೋ ಪ್ರೈ.ಲಿ, ಮೆ.ಬಸಾಯಿ ಸ್ಟೀಲ್ ಪ್ರೈ.ಲಿ, ಮೆ.ಕ್ಲೀನ್ ಮ್ಯಾಕ್ಸ್ ಸೊಲಾರ್, ಕ್ಲೀನ್ ಸೋಲಾರ್, ಮೆ.ಮೌರ್ಯ ಸೀಲಾಮ್ ಸೋಲಾರ್ ಐ.ಪಿ.ಪಿ ಸೇರಿ ಮುಂತಾದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯ 110/11ಕೆ.ವಿ ಹಲಕುಂದಿ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿದಂದ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11ಕೆ.ವಿ ಮಾರ್ಗಗಳಲ್ಲಿ ಸೆ.14 ರಂದು ಬೆಳಿಗ್ಗೆ 09 ರಿಂದ ಸಂಜೆ 05 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಸಹಾಯಕ ಇಂಜಿನಿಯರ್ ತಿಳಿಸಿದ್ದಾರೆ.
ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು:
ಎಫ್-1 ಫೀಡರ್‌ನ ಗ್ಯಾಲಕ್ಷಿ ಕೆಮಿಕಲ್ ಮಾರ್ಗದ 2, 3ನೇ ಹಂತ ಮುಂಡರಿಗಿ ಕೈಗಾರಿಕಾ ಪ್ರದೇಶ, ಎಫ್-10 ಮಿಂಚೇರಿ ಐಪಿ ಮಾರ್ಗದ ಮುಂಡರಿಗಿ, ಹಲಕುಂದಿ, ಮಿಂಚೇರಿ, ಎಸ್.ಜೆ ಕೋಟೆ ಕೃಷಿ ಪ್ರದೇಶಗಳು.
ಎಫ್-11 ಯಶಸ್ವಿನಿ ಸ್ಪಾಂಜ್ ಕೈಗಾರಿಕೆ ಪ್ರದೇಶ ಮಾರ್ಗದ ಹಲಕುಂದಿ ಗ್ರಾಮ, ಮುಂಡರಿಗಿ ಕೈಗಾರಿಕಾ ಪ್ರದೇಶ. ಎಫ್-2 ಸುಧಾಕರ ಪೈಪ್ ಮಾರ್ಗ, ಎಫ್-4 ಗುರುನಾಥ ರೈಸ್ ಮಿಲ್ ಮಾರ್ಗ, ಎಫ್-5 ಅಪೇರಲ್ ಪಾರ್ಕ್ ಮಾರ್ಗ ಮತ್ತು ಎಫ್-6 ಸ್ನೇಹ ಗ್ಲಾಸ್ ಮಾರ್ಗಗಳ 2, 3 ಮತ್ತು 4ನೇ ಹಂತ ಮುಂಡರಿಗಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2 ವರ್ಷ 3 ತಿಂಗಳಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ 1 ಲಕ್ಷ ಕೋಟಿ ವೆಚ್ಚ: ಸಿಎಂ ಸಿದ್ಧರಾಮಯ್ಯ
ಸಾಗರ ತಾಲ್ಲೂಕಲ್ಲಿ ರೈತರ ಮೇಲೆ ‘ಅರಣ್ಯಾಧಿಕಾರಿ’ಗಳ ಕಿರುಕುಳ ಹೆಚ್ಚುತ್ತಿದೆ: ಮಾಜಿ ಸಚಿವ ಹರತಾಳು ಹಾಲಪ್ಪ ಕಿಡಿ