ಬೆಂಗಳೂರು: ರಾಜ್ಯದಲ್ಲಿ ಸೈಬರ್ ವಂಚನೆ ಕಡಿವಾಣಕ್ಕೆ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ದೇಶದಲ್ಲೇ ಮೊದಲು ಎನ್ನುವಂತೆ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ.
16,000ಕ್ಕೂ ಹೆಚ್ಚು ಸೈಬರ್ ಕೇಸ್ ಗಳು ಬಾಕಿ ಇವೆ. ಹೀಗಾಗಿ ಸೈಬರ್ ಅಪರಾಧ ತಡೆಗೆ ಹೈಕೋರ್ಟ್ ಸೂಚಿಸಿತ್ತು. ಹೀಗಾಗಿ ಸೈಬರ್ ವೈಚನೆ ಕಡಿವಾಣಕ್ಕೆ ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ದೇಶದಲ್ಲೇ ಮೊದಲು ಎನ್ನುವಂತೆ ಸೈಬರ್ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಿದೆ.
ಈ ಸೈಬರ್ ಕಮಾಂಡ್ ಸೆಂಟರ್ ನಲ್ಲಿ ನಾಲ್ಕು ವಿಂಗ್ ಗಳನ್ನು ರಚನೆ ಮಾಡಲಾಗಿದೆ. ಮೊದಲೆಯ ವಿಂಗ್ ಸೈಬರ್ ಕ್ರೈಂ ವಿಂಗ್ ಆಗಿದೆ. ಇದು ಸೈಬರ್ ಅಪರಾಧಗಳನ್ನು ಪತ್ತೆ ಮಾಡಿ, ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತದೆ.
ಇನ್ನೂ 2ನೇ ಕಮಾಂಡ್ ಸೆಂಟರ್ ಸೈಬರ್ ಸೆಕ್ಯೂರಿಟಿ ವಿಂಗ್, ಬ್ಯಾಂಕ್ ಖಾತೆ, ಸಾಮಜಿಕ ಜಾಲತಾಣ, ಸಾಫ್ಟ್ ವೇರ್ ಹ್ಯಾಕ್ ಮಾಡುವವರನ್ನ ಪತ್ತೆ ಮಾಡುತ್ತೆ. ಮೂರನೇ ಕಮಾಂಡ್ ಸೆಂಟರ್ ವಿಂಗ್ ಐಡಿಟಿಯು ವಿಂಗ್ ಆಗಿದೆ. ಇದು ಸೈಬರ್ ಅಪರಾಧಗಳ ಸ್ಥಳ ಪತ್ತೆ ಮಾಡುವುದು. ಐಪಿ ಅಡ್ರೆಸ್ ಪತ್ತೆ ಮಾಡುವಂತ ಕೆಲಸ ಮಾಡಲಿದೆ.
ನಾಲ್ಕನೆಯ ಕಮಾಂಡ್ ಸೆಂಟರ್ ವಿಂಗ್ ತರಬೇತಿ, ಸಾಮರ್ಥ್ಯ ವೃದ್ಧಿ ಮತ್ತು ಜನ ಜಾಗೃತಿ ದಳವಾಗಿದೆ. ಇದು ಸೈಬರ್ ಕಮಾಂಟ್ ಸೆಂಟರ್ ಅಧಿಕಾರಿಗಳಿಗೆ ತರಬೇತಿ ನೀಡುವುದು. ಟೆಕ್ನಿಕಲ್ ಜ್ಞಾನ ವೃದ್ಧಿ ಮಾಡುವುದು. ಹೊಸ ತಂತ್ರಜ್ಞಾನಗಳ ತಿಳುವಳಿಕೆ ನೀಡುವುದು ಮತ್ತು ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಸೈಬರ್ ಅಪರಾಧದ ಬಗ್ಗೆ ಅರಿವು ಮೂಡಿಸುವಂತ ಕೆಲಸ ಮಾಡಲಿದೆ.