ಮೈಸೂರು: ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ. ಹೀಗಾಗಿ ಹಲವರು ಮತಾಂತರ ಆಗ್ತಿದ್ದಾರೆ. ಆದರೇ ನಾನೆಂದೂ ಮುಸ್ಲೀಂ ಆಗಿ ಮತಾಂತರ ಆಗಲ್ಲ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಇಂದು ಮೈಸೂರಲ್ಲಿ ಸುದ್ದಿಗಾರರೊಂದಿಗೆ ಜಾತಿ ಗಣತಿಯಲ್ಲಿ ಹೊಸ ಜಾತಿಗಳ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಾನು ಮುಸ್ಲೀಂ ಆಗಿ ಮತಾಂತರ ಆದ್ರೆ ನನ್ನ ಜಾತಿಯೂ ಆ ಧರ್ಮದ ಜೊತೆ ಸೇರುತ್ತೆ ಅಲ್ವ? ನಾನೇನೂ ಮುಸ್ಲಿಂ ಆಗಿ ಮತಾಂತರ ಆಗಲ್ಲ. ಸುಮ್ಮನೆ ಉದಾಹರಣೆಗೆ ಇದನ್ನು ಹೇಳಿದೆ ಅಷ್ಟೇ ಎಂದರು.
ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ. ಹೀಗಾಗಿ ಹಲವರು ಮತಾಂತರ ಆಗ್ತಿದ್ದಾರೆ. ಮತಾಂತರ ಆದವರ ಜಾತಿಯೂ ಮುಖ್ಯ ಎಂದರು.
ಶಿವಮೊಗ್ಗ: ನಾಳೆ ಸಾಗರದ ಎಂಎಲ್ ಹಳ್ಳಿಯ ರಾಮಕೃಷ್ಣ ಶಾಲೆಯಲ್ಲಿ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮ, ಸಂತೋಷ್ ಹೆಗಡೆ ಭಾಗಿ
ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಷರತ್ತು ಸಡಿಲ: ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಕರ್ ಭರವಸೆ