ಶಿವಮೊಗ್ಗ: ಸಾಗರದ ನವಚೇತನ ವೇದಿಕೆಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಇಂದಿನ ಶಿಕ್ಷಣ ವ್ಯವಸ್ಥೆ ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಪ್ರಬಂಧ ಸ್ಪರ್ದೆಯಲ್ಲಿ ವಿಜೇತರಾದಂತ ವಿತೇತರ ಹೆಸರನ್ನು ನವಚೇತನ ವೇದಿಕೆ ಅಧ್ಯಕ್ಷ ಪ್ರಶಾಂತ್ ಘೋಷಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವಚೇತನ ವೇದಿಕೆಯಿಂದ 2025-26ನೇ ಸಾಲಿನ ಶಿಕ್ಷಕ ದಿನಾಚರಣೆಯ ಅಂಗವಾಗಿ ಇಂದಿನ ಶಿಕ್ಷಣ ವ್ಯವಸ್ಥೆಯ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕೈ ಬರಹದಲ್ಲೇ ಕನ್ನಡದಲ್ಲೇ ಪ್ರಬಂಧ ಬರೆದು ಕಳುಹಿಸಲು ಕೋರಲಾಗಿತ್ತು. ಅದರಂತೆ ಸುಮಾರು 300 ಜನರು ಪ್ರಬಂಧ ಬರೆದು ಕಳುಹಿಸಿದ್ದರು ಎಂದರು.
ಸಾಗರ ತಾಲ್ಲೂಕಿನವರು ಅಲ್ಲದೇ ಹಾಸನ, ಮೈಸೂರು, ಉಡುಪಿ, ಬೇಳಗಾವಿ, ಸಿಂದಗಿ, ಉತ್ತರ ಕರ್ನಾಟಕ ಭಾಗದವರು ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಹೊರ ರಾಜ್ಯದವರು ಪ್ರಬಂಧಗಳನ್ನು ಕಳುಹಿಸಿದ್ದರು. ಇವುಗಳನ್ನು ಸಾಗರದ ಇಂದಿರಾ ಗಾಂಧಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಅಶೋಕ್ ರೇವಣಕರ್ ಮೌಲ್ಯ ಮಾಪನ ನಡೆಸಿದರು ಎಂದರು.
ಹೀಗಿದೆ ನವಚೇತನ ವೇದಿಕೆಯ ಪ್ರಬಂಧ ಸ್ಪರ್ಧೆಯಲ್ಲಿ ಭಾಗಿಯಾಗಿ ವಿಚೇತರಾದವರ ಪಟ್ಟಿ
- ಪ್ರಥಮ ಸ್ಥಾನವನ್ನು ನವದೆಹಲಿಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವಂತ ಕನ್ನಡಿಗ ಸತೀಶ್.ಎ.ಟಿ ಪಡೆದಿದ್ದಾರೆ.
- ದ್ವಿತೀಯ ಸ್ಥಾನವನ್ನು ಸಾಗರದ ರಾಮಕೃಷ್ಣ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಸ್ಪಂದನಾ.ಡಿ ಪಡೆದಿದ್ದಾರೆ.
- ತೃತೀಯ ಸ್ಥಾನವನ್ನು ಅದರಂತೆಯ ಶಿಕ್ಷಕಿ ದಿವ್ಯಾ ಎ.ಆರ್ ಪಡೆದಿದ್ದಾರೆ.
ಪ್ರಬಂಧದ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಸಂಘದಿಂದ ನಗದು ಸಹಿತ ಪ್ರಶಸ್ತಿ ಪುರಸ್ಕಾರ ನೀಡಲಾಗುತ್ತದೆ ಎಂದರು.
ವಿಕ್ರಂ ಭಟ್ ಮಾತನಾಡಿ ನವಚೇತನ ವೇದಿಕೆಯು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಕೈಬರಹದಲ್ಲಿ ಪ್ರಬಂಧ ಬರೆಯುವ ಕಾಲ ಕಡಿಮೆಯಾಗುತ್ತಿರುವ ಈ ಹೊತ್ತಿನಲ್ಲೇ ನಮ್ಮ ವೇದಿಕೆಯಿಂದ ಇಂತದ್ದೊಂದು ಸ್ಪರ್ಧೆ ನಡೆಸಲಾಯಿತು ಎಂದರು.