ಬೆಂಗಳೂರು : ಸರ್ಕಾರದಿಂದ ನೇರವಾಗಿ /ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ ‘ಎ’ ಗುಂಪಿನ ಅರ್ಹ ಅಧಿಕಾರಿಗಳು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವಲ್ಲಿ ಹೆಚ್ಚುವರಿ 15 ದಿನಗಳ ಕಾಲಾವಧಿಯನ್ನು ವಿಸ್ತರಿಸುವ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಪತ್ರದಲ್ಲಿ ಎಲ್ಲಾ ಅರ್ಹ ‘ಎ’ ಗುಂಪಿನ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ದಿನಾಂಕ: 15.09.2025ರೊಳಗಡೆ ನೋಂದಾಯಿಸಿಕೊಳ್ಳದ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ತಿಳಿಸಲಾಗಿತ್ತು.
ಆದರೆ, ‘ಎ’ ಗುಂಪಿನ ಅಧಿಕಾರಿಗಳು ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವಲ್ಲಿ ಇನ್ನೂ ಹೆಚ್ಚಿನ ಕಾಲಾವಕಾಶ ಕೋರಿದ್ದರಿಂದ, ‘ಎ’ ಗುಂಪಿನ ಅಧಿಕಾರಿಗಳಿಗೆ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳಲು ದಿನಾಂಕ:30.09.2025ರ ವರೆಗೆ ಕಾಲಾವಕಾಶವನ್ನು ವಿಸ್ತರಿಸಲಾಗಿದೆ.