ಬೆಂಗಳೂರು: ಕರ್ನಾಟಕದಲ್ಲಿ ಪರಿಟೋನೀಯಲ್ ಡಯಾಲಿಸಿಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಮನೆಯಲ್ಲೇ ಚಿಕಿಸ್ತೆ ದೊರೆಯುವಂತೆ ಆಗಲಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ನಡವಳಿಯನ್ನು ಹೊರಡಿಸಿದ್ದು, ಅಭಿಯಾನ ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ ಇವರಿಂದ ಸ್ವೀಕೃತವಾದ ಏಕಕಡತ ಸಂಖ್ಯೆ: HFWS-DLSOFILE/20/2025(1780906)ರಲ್ಲಿ ಕರ್ನಾಟಕದಲ್ಲಿ ಮೂತ್ರಪಿಂಡದ ಕಾಯಿಲೆ ಹಾಗೂ ಎಂಡ್-ಸೈಜ್ ರಿನಲ್ ಕಾಯಿಲೆ (ESRD) ಗಳು ಹೆಚ್ಚಾಗುತ್ತಿದ್ದು, ಇದರಿಂದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಸವಾಲಾಗಿ ಎದುರಾಗುತ್ತಿದೆ. ಮೂತ್ರಪಿಂಡ ಕಾಯಿಲೆಗೆ ಮುಖ್ಯವಾದ Renal Replacement Therapy (RRT) ಆಗಿರುವ ಹೀಮೊಡಯಾಲಿಸಿಸ್ ಸೌಲಭ್ಯಗಾಗಿ ವಿಶೇಷ ಮೂಲಸೌಕರ್ಯ ಮತ್ತು ಕಡ್ಡಾಯವಾಗಿ ಆಸ್ಪತ್ರೆಗೆ ಭೇಟಿ ಮಾಡಬೇಕಾಗಿರುತ್ತದೆ.
ಗಂಟೋನೀಯಲ್ ಡಯಾಲಿಸಿಸ್ (FD) ಒಂದು ಸುಲಭವಾಗಿ ಮಾಡಬಹುದಾದ ಮತ್ತು ರೋಗಿಗಳಿಗೆ ಅನುಕೂಲಕರವಾದ ಪರ್ಯಾಯ ಚಿಕಿತ್ಸೆ ವಿಭಾಗವಾಗಿರುತ್ತದೆ. ಸದರಿ ವೆರಿಟೋನೀಯಲ್ ಡಯಾಲಿಸಿಸ್ (PD) ಅನ್ನು ಮನೆಯಲ್ಲಿಯ ಚಿಕಿತ್ಸೆ ನಡೆಸಲು ಸಾಧ್ಯವಾಗುವುದರಿಂದ ಆಸ್ಪತ್ರೆಗೆ ಭೇಟಿನೀಡುವ ಅವಶ್ಯಕತೆ ಕಡಿಮೆಯಾಗುತ್ತದೆ.
ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದಡಿಯಲ್ಲಿ (PMNDP) ಕರ್ನಾಟಕದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಹಿಮಡಯಾಲಿಸಿಸ್ ಸೇವೆಯನ್ನು ಯಶಸ್ವಿಯಾಗಿ ಪ್ರಾರಂಭಿಸಲಾಗಿದೆ. ಪ್ರಸ್ತುತ ನಫಾಲಜಿಸ್ಟ್ ತಜ್ಞ ವೈದ್ಯರಿರುವ ಜಿಲ್ಲಾ ಆಸ್ಪತ್ರೆಗಳಲ್ಲಿ ಪಂಟೋಯಲ್ ಡಯಾಲಿಸಿಸ್ (PO) ಸೇವೆಯನ್ನು ಕೂಡ ಸೇರಿಸುವ ಮೂಲಕ ರೋಗಿಗಳಿಗೆ ಹೆಚ್ಚು ಆಯ್ಕೆಗಳನ್ನು ಒದಗಿಸಬಹುದು ಮತ್ತು ಸುಲಭವಾದ ಆರೋಗ್ಯ ಸೇವೆಗೆ ಪ್ರೋತ್ಸಾಹ ನೀಡಬಹುದಾಗಿರುತ್ತದೆ.
ಪ್ರಾರಂಭದಲ್ಲಿ 350 ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇವೆ ನೀಡಲಾಗುವುದು. ಪತಿ ಜಿಲ್ಲೆಗೆ ಅಂದಾಜು 10 ರೋಗಿಗಳನ್ನು ನಿರ್ದಿಷ್ಟಗೊಳಿಸಲಾಗುತ್ತದೆ. ರೋಗಿಗಳ ಆಯ್ಕೆಯನ್ನು ನೆಫಾಲಜಿಸ್ಟ್ ರ ಮೂಲಕ ಮಾಡಲಾಗುವುದು, ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ, ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇಷನ್ ಸೇರಿದಂತೆ ಪ್ರತಿರೋಗಿಗೆ ರೂ. 13,000-00 ಗಳು ವೆಚ್ಚವಾಗಲಿದ ಎಂಬುದಾಗಿ ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮದ (PMNDP) ಮಾರ್ಗಸೂಚಿ ಪ್ರಕಾರ ಅಂದಾಜಿಸಲಾಗಿದೆ, ಈ ವಚ್ಚವನ್ನು SAST ವತಿಯಿಂದ ABAK ಯೋಜನೆಯಡಿಯಲ್ಲಿ ನೀಡಲಾಗುವುದು.
ಪ್ರತಿರೋಗಿಗೆ ತಿಂಗಳಿಗೆ 90 ರಿಂದ 120 ಪೆರಿಟೋನಿಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳು ಅವಶ್ಯಕತೆ ಇದ್ದು, ಸದರಿ ಪರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲಾಗುವುದು. ಇದಕ್ಕೆ ಬೇಕಾಗಿರುವ ಅನುದಾನವನ್ನು PMNDP ಲೆಕ್ಕಶೀರ್ಷಿಕೆಯಾದ 2210-03-110-0-08 (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಅಡಿಯಲ್ಲಿ ಒದಗಿಸಲಾಗುವುದು.
PMNDP ಮಾರ್ಗಸೂಚಿ ಪುಕಾರ PHH card holders ಗೆ ಅನುದಾನ ಲಭ್ಯವಿದ್ದು, Non-PHH card holder’s ರವರಿಗೆ ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲಾಗುವುದು. 2025-26ನೇ ಸಾಲಿನ ಲೆಕ್ಕಶೀರ್ಷಿಕೆಯಾದ 2210-03-110-0- 08 (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಒಟ್ಟು ರೂ.2133.72 ಲಕ್ಷಗಳು ಅನುಮೋದನೆಗೊಂಡಿರುತ್ತದೆ.
ಉಪಲೆಕ್ಕಶೀರ್ಷಿಕೆ: 2210-03-110-0-08-059: ರೂ. 1967.00 ಲಕ್ಷಗಳು
ಉಪಲೆಕ್ಕಶೀರ್ಷಿಕೆ: 2210-03-110-0-08-422 (SCP) ರೂ.113.34 ಲಕ್ಷಗಳು
ಉಪಲೆಕ್ಕಶೀರ್ಷಿಕೆ: 2210-03-110-0-08-423 (TSP): ರೂ. 53.38 ಲಕ್ಷಗಳು
2025-26ನೇ ಸಾಲಿನ ಕ್ರಿಯಯೋಜನೆಯಲ್ಲಿ ಕಲಬುರ್ಗಿ ವಿಭಾಗದ ತಾಲ್ಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳ ಖರೀದಿಗಾಗಿ ಹಾಗೂ ಹೊಸದಾಗಿ ಡಯಾಲಿಸಿಸ್ ಘಟಕವನ್ನು ಅನುಷ್ಠಾನಗೊಳಿಸಲು RO plant, 40KV DG set, 3 phase electricity, Flower’s cats ಹಾಗೂ ಇನ್ನಿತರ ಪರಿಕರಗಳು ಖರೀದಿಗಾಗಿ ಅಂದಾಜು ಒಟ್ಟು ರೂ. 611.00 ಲಕ್ಷಗಳ ಪಸ್ತಾವನೆ ಸಲ್ಲಿಸಿದ್ದು, ಅನುಮೋದನೆಗೊಂಡಿರುತ್ತದೆ.
ಆದರೆ ಸದರಿ ಕಲಬುರ್ಗಿ ವಿಭಾಗದ ತಾಲ್ಲೂಕು ಆಸ್ಪತ್ರೆಗಳಿಗೆ ಹೊಸ ಡಯಾಲಿಸಿಸ್ ಯಂತ್ರಗಳು ಹಾಗೂ ಇನ್ನಿತರ ಉಪಕರಣಗಳನ್ನು ಖರೀದಿಸಲು PPP ಮಾದರಿಯಲ್ಲಿ KKRDB ಹಾಗೂ ಅನುಷ್ಠಾನಗೊಳಿಸುತ್ತಿರುವುದರಿಂದ ರೂ.611.00 ಲಕ್ಷಗಳು ಉಳಿತಾಯವಾಗುತ್ತದೆ.
ಪ್ರತಿ ತಿಂಗಳ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳು ಅವಶ್ಯಕತೆ ಇದ್ದು, ಸದರಿ ಪರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲಾಗುತ್ತದೆ.
350 ಡಯಾಲಿಸಿಸ್ ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳಿಗೆ ಪ್ರತಿ ತಿಂಗಳಿಗೆ ರೂ. 26,400-00 ಗಳಂತೆ 06 ತಿಂಗಳಿಗೆ ಒಟ್ಟು ರೂ. 5,54,40,000-00 ಗಳ (350x26400x6=5,54,40,000-00) ಅನುದಾನದ ಅವಶ್ಯಕತೆ ಇರುತ್ತದೆ. (PMNDP ಮಾರ್ಗಸೂಚಿ ದರವನ್ನು ಪ್ರತಿರೋಗಿಗೆ ತಿಂಗಳಿಗೆ ರೂ. 26,400 ಆಧರಿಸಿ).
ಮುಂದುವರೆದು ರಾಜ್ಯ ಬಜೆಟ್‌ನಲ್ಲಿ ಲೆಕ್ಕಶೀರ್ಷಿಕೆಯಾದ 2210-03-110-0-08 ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಉಳಿತಾಯವಾಗುವ ಅನುದಾನ ರೂ. 611.00 ಲಕ್ಷಗಳನ್ನು ರಾಜ್ಯದಲ್ಲಿ ಪರಿಟೋನೀಯಲ್ ಡಯಾಲಿಸಿಸ್ (PD) ಸೇವೆಗಳನ್ನು ಅನುಷ್ಠಾನಗೊಳಿಸಲು ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಕರ್ನಾಟಕದಲ್ಲಿ 350 ಡಯಾಲಿಸಿಸ್ ರೋಗಿಗಳಿಗೆ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇವೆಗಳನ್ನು ಒದಗಿಸುವ ಸಲುವಾಗಿ ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳಿಗೆ ಪ್ರತಿ ತಿಂಗಳಿಗೆ ರೂ. 26,400-00 ಗಳಂತೆ 06 ತಿಂಗಳಿಗೆ 23. 5,54,40,000-00 (350 x 26400 x 6 =5,54,40,000-00) F 2210-03-110-0- 08 ರ ಉಪ ಲೆಕ್ಕಶೀರ್ಷಿಕೆಯಲ್ಲಿನ 059ರಲ್ಲಿ (ಸರ್ಕಾರಿ ಖಾಸಗಿ ಸಹಭಾಗಿತ್ವದಲ್ಲಿ ರೋಗಪತ್ತೆ ಪರೀಕ್ಷೆ ಮತ್ತು ಡಯಾಲಿಸಿಸ್ ಚಿಕಿತ್ಸೆಗಳು) ಉಳಿತಾಯವಾಗುವ ಅನುದಾನದಲ್ಲಿ (PMNDP ಮಾರ್ಗಸೂಚಿ ದರವನ್ನು ಪ್ರತಿರೋಗಿಗೆ ತಿಂಗಳಿಗೆ ರೂ. 26,400 ಆಧರಿಸಿ) ಪೆರಿಟೋನೀಯಲ್ ಡಯಾಲಿಸಿಸ್ (PD) ಬ್ಯಾಗ್‌ಗಳು ಮತ್ತು ಅಗತ್ಯ ಉಪಭೋಗ್ಯ ಸಾಮಾಗ್ರಿಗಳನ್ನು KSMSCL ಮೂಲಕ ಖರೀದಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.
ಕ್ಯಾಥೆಟರ್ ಅಳವಡಿಸುವುದು, ಆಸ್ಪತ್ರೆಯ ವೆಚ್ಚ ತರಬೇತಿ ಮತ್ತು ಪ್ರಥಮ ಪೆರಿಟೋನೀಯಲ್ ಡಯಾಲಿಸಿಸ್ (PD) ಸೇಷನ್ ವೆಚ್ಚವನ್ನು SAST ವತಿಯಿಂದ ABArK ಯೋಜನೆಯಡಿಯಲ್ಲಿ ನೀಡಲಾಗುವುದು. ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ:09.09.2025ರನ್ವಯ ಹೊರಡಿಸಲಾಗಿದೆ ಎಂದಿದೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು