ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ 4ನೇ ರೈಲು ಸಂಚಾರ ಆರಂಭವಾಗಿದೆ. ಹೀಗಾಗಿ ಇನ್ಮುಂದೆ 19 ನಿಮಿಷಕ್ಕೊಂದು ರೈಲು ಸಂಚಾರವು ಪ್ರಯಾಣಿಕರಿಗೆ ಲಭ್ಯವಾಗಲಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿ.ಎಂ.ಆರ್.ಸಿ.ಎಲ್) ದಿನಾಂಕ 10ನೇ ಸೆಪ್ಟೆಂಬರ್ 2025 ರಿಂದ ಜಾರಿಗೆ ಬರುವಂತೆ ಹಳದಿ ಮಾರ್ಗದಲ್ಲಿ 4ನೇ ರೈಲು ಸೆಟ್ ಅನ್ನು ಕಾರ್ಯಾಚರಣೆ ಸೇರಿಸಲಾಗಿದೆ. ಮೆಟ್ರೋ ರೈಲುಗಳ ವೇಳಾಪಟ್ಟಿಯನ್ನು ಈ ಕೆಳಗಿನಂತೆ ಪರಿಷ್ಕರಿಸ ಲಾಗಿದೆ:
ಎಲ್ಲಾ ದಿನಗಳಲ್ಲಿ ರೈಲುಗಳು ಈಗ 19 ನಿಮಿಷಗಳ ಮಧ್ಯಂತರದಲ್ಲಿ (ಈಗಿನ 25 ನಿಮಿಷಗಳ ಮಧ್ಯಂತರದ ಬದಲಿಗೆ) ಚಲಿಸುತ್ತವೆ.
ಮೊದಲ ರೈಲು ಸಮಯ:
- ಸೋಮವಾರದಿಂದ ಶನಿವಾರದಂದು, ಮೊದಲ ವಾಣಿಜ್ಯ ಸೇವೆಯು ಬೆಳಿಗ್ಗೆ ಈಗಿನ 6.30 ಗಂಟೆಯ ಬದಲಿಗೆ ಬೆಳಿಗ್ಗೆ 06:00 ಗಂಟೆಗೆ ಪ್ರಾರಂಭವಾಗುತ್ತದೆ.
- ಭಾನುವಾರದಂದು, ಮೊದಲ ರೈಲು ಬೆಳಿಗ್ಗೆ 07:00 ಗಂಟೆಗೆ ಪ್ರಾರಂಭವಾಗಲಿದೆ.
ಕೊನೆಯ ರೈಲು ಸಮಯ:
- ಆರ್.ವಿ. ರಸ್ತೆಯಿಂದ: ರಾತ್ರಿ 11:55 (ಬದಲಾವಣೆ ಇಲ್ಲ)
- ಬೊಮ್ಮಸಂದ್ರದಿಂದ: ರಾತ್ರಿ 10:42 (ಬದಲಾವಣೆ ಇಲ್ಲ)
ಪ್ರಯಾಣಿಕರು ಈ ಬದಲಾವಣೆಗಳನ್ನು ಗಮನಿಸಿ ಸುಧಾರಿತ ಸೌಲಭ್ಯವನ್ನು ಪಡೆದುಕೊಳ್ಳಲು ವಿನಂತಿಸಲಾಗಿದೆ.
ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಚರಿಸುವ ಹಳದಿ ಮಾರ್ಗದ ನಮ್ಮ ಮೆಟ್ರೋಗೆ ಹೊಸ ರೈಲು ಸೇರ್ಪಡೆಗೊಂಡಿದೆ. ಇದರಿಂದ ರೈಲುಗಳ ನಡುವಿನ ಅಂತರವು 25 ನಿಮಿಷದಿಂದ 19 ನಿಮಿಷಕ್ಕೆ ಇಳಿಕೆಯಾಗಿದೆ.#NammaMetro pic.twitter.com/kbPewiZ2Gx
— DIPR Karnataka (@KarnatakaVarthe) September 12, 2025