ಕೋಲಾರ: ಶಾಲೆಗೆ ಬಾರದ ವಿದ್ಯಾರ್ಥಿಯನ್ನ ಪ್ರಶ್ನಿಸಿದ್ದಕ್ಕೆ ಕೋಪಗೊಂಡು ಆತನ ತಂದೆ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿರುವಂತ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಕ್ಷೇತ್ರನಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕಿ ಮಂಜುಳಾ ಮೇಲೆ ಹಲ್ಲೆ ಮಾಡಲಾಗಿದೆ. ಶಾಲೆಗೆ ಬಾರದ ವಿದ್ಯಾರ್ಥಿಯನ್ನು ಪ್ರಶ್ನಿಸಿದದಕ್ಕೆ ವಿದ್ಯಾರ್ಥಿ ತಂದೆ ಚೌಡಪ್ಪ ಎಂಬುವರು ಶಿಕ್ಷಕಿ ಮೇಲೆ ಹಲ್ಲೆ ಮಾಡಿದಂತ ಆರೋಪ ಕೇಳಿ ಬಂದಿದೆ.
ಕಳೆದ ಎರಡು ದಿನದಿಂದ ಶಾಲೆಗೆ ಚೌಡಪ್ಪ ಪುತ್ರ ಚರಣ್ ಗೈರಾಗಿದ್ದರು. ಇದನ್ನು ವಿಚಾರಿಸಿದ್ದರ ವೇಳೆಯಲ್ಲಿ ಗಲಾಟೆಯಾಗಿ ಶಿಕ್ಷಕಿ ಮಂಜುಳಾ ಮೇಲೆ ಚೌಡಪ್ಪ ಹಲ್ಲೆ ಮಾಡಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.
ವಿದ್ಯಾರ್ಥಿ ಚರಣ್ ತಂದೆ ಚೌಡಪ್ಪ ಹಲ್ಲೆ ಮಾಡಿದ್ದರಿಂದ ಸರ್ಕಾರಿ ಶಾಲೆಯ ಶಿಕ್ಷಕಿ ಮಂಜುಳಾ ತಲೆಗೆ ಬಾಗಿಲು ಬಡಿದು ಗಾಯವಾಗಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿ್ದದಾರೆ.
ಯಾರೇ ದ್ವೇಷ ಭಾಷಣ ಮಾಡಿದರೂ ಕಾನೂನಿನಡಿ ಕ್ರಮ: ಸಚಿವ ಲಕ್ಷ್ಮೀ ಹೆಬ್ಬಾಳ್ಕರ್
ಅಮೆರಿಕಾ ಅಧ್ಯಕ್ಷ ಟ್ರಂಪ್ ಆಪ್ತನನ್ನು ಗುಂಡಿಕ್ಕಿ ಹತ್ಯೆ ಕೇಸ್: ಹಂತಕನ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ