ಕಾತ್ರಾ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 ರಿಂದ ಪುನರಾರಂಭಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಭೂಕುಸಿತ ಮತ್ತು ಮೋಡ ಸ್ಫೋಟ ಸೇರಿದಂತೆ ತೀವ್ರ ಹವಾಮಾನ ಪರಿಸ್ಥಿತಿಗಳಿಂದಾಗಿ ರಿಯಾಸಿ ಜಿಲ್ಲೆಯ ಪವಿತ್ರ ದೇಗುಲಕ್ಕೆ ಯಾತ್ರೆ 19 ದಿನಗಳಿಂದ ಸ್ಥಗಿತಗೊಂಡಿತ್ತು.
“ಜೈ ಮಾತಾ ದಿ! ಅನುಕೂಲಕರ ಹವಾಮಾನ ಪರಿಸ್ಥಿತಿಗಳಿಗೆ ಒಳಪಟ್ಟು ವೈಷ್ಣೋದೇವಿ ಯಾತ್ರೆ ಸೆಪ್ಟೆಂಬರ್ 14 (ಭಾನುವಾರ) ರಿಂದ ಪುನರಾರಂಭಗೊಳ್ಳುತ್ತದೆ. ವಿವರಗಳು ಮತ್ತು ಬುಕಿಂಗ್’ಗಳಿಗಾಗಿ, ದಯವಿಟ್ಟು www.maavaishnodevi.org ಗೆ ಭೇಟಿ ನೀಡಿ,” ಎಂದು ಶ್ರೀ ಮಾತಾ ವೈಷ್ಣೋದೇವಿ ದೇಗುಲ ಮಂಡಳಿ (SMVDB) X ನಲ್ಲಿ ಪೋಸ್ಟ್ ಮಾಡಿದೆ.
ಬೆಂಗಳೂರು ಜನತೆ ಗಮನಕ್ಕೆ: ಸೆ.13ರ ನಾಳೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut
ಈ ‘1 ಸರಳ ಅಭ್ಯಾಸ’ ನಿಮ್ಮ ಯೌವನ ಮರಳಿಸುತ್ತೆ, ಮೆದುಳು ಚುರುಕಾಗಿಸುತ್ತೆ