ಮೈಸೂರು: ಅರಣ್ಯ ಇಲಾಖೆಯ ಪರಿಹಾರದ ಆಸೆಗೆ ಪತಿಯನ್ನು ಕೊಲೆಗೈದ ಪತ್ನಿಯೊಬ್ಬರು, ಹುಲಿ ಕೊಂದಿದೆ ಎಂಬುದಾಗಿ ನಾಟಕವಾಡಿದ್ದಾರೆ. ಈ ಕಿಲೇಡಿಯ ನಾಟಕದ ಮಾತು ಕೇಳಿ ಪೊಲೀಸರೇ ಶಾಕ್ ಆಗಿದ್ದರು. ಆದರೇ ತನಿಖೆ ನಡೆಸಿದಾಗ ಪತಿಯನ್ನು ಕೊಲೆಗೈದಿ ವಿಷಯವನ್ನು ಪತ್ನಿ ಬಾಯಿ ಬಿಟ್ಟಿದ್ದಾರೆ.
ಮೈಸೂರು ಜಿಲ್ಲೆಯ ಚಿಕ್ಕ ಹೆಜ್ಜೂರು ಗ್ರಾಮದಲ್ಲಿ ಪತಿ ವೆಂಕಟಸ್ವಾಮಿ ಎಂಬಾತನನ್ನು ಕೊಲೆಗೈದಂತ ಪತ್ನಿ ಸಲ್ಲಾಪುರಿ, ಹುಲಿ ಕೊಂದಿದೆ ಎಂಬುದಾಗಿ ನಾಟಕವಾಡಿದ್ದಾರೆ. ಕೊಲೆಗಾತಿ ಪತ್ನಿಯ ಈ ಸ್ಟೋರಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಪತಿ ನಾಪತ್ತೆಯಾಗಿರುವ ಬಗ್ಗೆ ದೂರು ಪಡೆದಂತ ಪೊಲೀಸರು, ತನಿಖೆ ನಡೆಸಿದಾಗ ಅರಣ್ಯ ಇಲಾಖೆ ಪರಿಹಾರದಾಸೆಗೆ ಕಿಲೇಡಿ ಪತ್ನಿ ಸಲ್ಲಾಪುರಿ ನಾಟಕ ಬಯಲಾಗಿದೆ.
ಅಂದಹಾಗೇ ಕೆಲ ದಿನಗಳ ಹಿಂದೆ ಸೋಮವಾರದಂದು ಹೆಜ್ಜೂರು ಗ್ರಾಮದ ಬಳಿಯಲ್ಲಿ ಹುಲಿ ಓಡಾಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಹುಲಿ ಕತೆಯನ್ನು ಪತ್ನಿ ಸಲ್ಲಾಪುರಿ ಕಟ್ಟಿದ್ದಾಳೆ. ಹುಲಿ ಹೊತ್ತೊಯ್ದಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಗ್ರಾಮದ ಬಳಿಯಲ್ಲಿ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ವೆಂಕಟಸ್ವಾಮಿಗೆ ಹುಡುಕಾಡಿದ್ದಾರೆ. ಪರಿಶೀಲನೆ ವೇಳೆ ಪ್ರಾಣಿ ಹೆಜ್ಜೆ ಗುರುತು ಪ್ತತೆಯಾಗಿತ್ತು. ಆದರೇ ಹುಲಿ ಎಲ್ಲೂ ಕಂಡಿರಲಿಲ್ಲ. ಮನೆ ಹಿಂದಿನ ತಿಪ್ಪೆಗುಂಡಿಯಲ್ಲೇ ವೆಂಕಟಸ್ವಾಮಿ ಶವ ಪತ್ತೆಯಾಗಿತ್ತು. ಈ ಬಗ್ಗೆ ಪೊಲೀಸ್ ವರಸೆಯಲ್ಲಿ ಸಲ್ಲಾಪುರಿ ವಿಚಾರಿಸಿದಾಗ, ಅರಣ್ಯ ಇಲಾಖೆಯ ಪರಿಹಾರದ ಆಸೆಗೆ ಪತಿಯನ್ನು ಕೊಂದು, ಈ ನಾಟಕ ಆಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.