ಲಕ್ನೋ : ಮದುವೆಯಾಗುತ್ತೇನೆಂದು ಯುವತಿಯನ್ನು ನಂಬಿಸಿ, ಅತ್ಯಾಚಾರ ಮಾಡಿದ್ದ ವ್ಯಕ್ತಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿರುವ ವಿಡಿಯೋ ವೈರಲ್ ಆಗಿದೆ.
ವ್ಯಕ್ತಿಯೊಬ್ಬ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಬುಲಂದರ್ ಶಹರ್ ನ ಚೆಹ್ಲಾ ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ ಆಕೆ ಮೇಲೆ ಅತ್ಯಾಚಾರ ವೆಸಗಿದ್ದ ಆರೋಪಿ ಆರೋಪಿ ಅಫ್ಜಲ್ ಮೊಹಮ್ಮದ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ಪೊಲೀಸರು ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಗ್ರಾಮದ ಹಲವು ಮುಖಂಡರು ಆತನ ಬಂಧಕ್ಕೆ ವಿರೋಧಿಸಿದ್ದರು.
ವರದಿಯ ಪ್ರಕಾರ, ಸೆಪ್ಟೆಂಬರ್ 4ರಂದು ಬುಲಂದ್ಶಹರ್ನ ಚೆಹ್ಲಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಪೊಲೀಸ್ ತಂಡ ಅಫ್ಝಲ್ ಮೊಹಮ್ಮದ್ನನ್ನು ಬಂಧಿಸಲು ಹಳ್ಳಿಗೆ ಬಂದಿತ್ತು. 22 ವರ್ಷದ ಯುವತಿಗೆ ಮದುವೆಗೆ ಆಮಿಷವೊಡ್ಡಿ ನಂತರ ಅತ್ಯಾಚಾರ ಮಾಡಿದ ಆರೋಪ ಆತನ ಮೇಲಿದೆ.
ಪೊಲೀಸರು ಬಂದಾಗ ಗ್ರಾಮಸ್ಥರು ಗುಂಪು ಸೇರಿದ್ದರು, ಗುಂಪಿನ ಮಧ್ಯೆಯೇ ಆರೋಪಿಯೂ ಸಾಮಾನ್ಯ ಜನರಂತೆ ನಿಂತಿದ್ದ. ಕೆಲವರು ಆತನನ್ನು ಬಂಧಿಸದಂತೆ ಹೇಳುತ್ತಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸುತ್ತಾರೆ ಎಂಬುದು ಖಚಿತವಾಗುತ್ತಿದ್ದಂತೆ ಆರೋಪಿ ಕನ್ಸ್ ಟೇಬಲ್ ನನ್ನು ತಳ್ಳಿ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಪೊಲೀಸರು ಹರಸಾಹಸ ಪಟ್ಟರೂ ಸಾಧ್ಯವಾಗಿಲ್ಲ. ಅತ್ಯಾಚಾರ ಆರೋಪಿ ಪರಾರಿಯಾಗಲು ಸಹಕರಿಸಿದ 7 ಜನರನ್ನು ಬಂಧಿಸಲಾಗಿದೆ.
A 22-year-old woman was lured with marriage promise and raped by Mohammad Afzal in Bulandshahr, UP.
When police finally caught him, village head Mohammad Rauf and his accomplices violently attacked the officers, allowing Afzal to escape.
An FIR has been filed against 30 people,… pic.twitter.com/zN2PqJeueE
— Treeni (@TheTreeni) September 11, 2025