ಪೋಲಿಷ್ ವಾಯುಪ್ರದೇಶದ ಮೇಲೆ ರಷ್ಯಾದ ಡ್ರೋನ್ ನುಸುಳುವಿಕೆ ಆರೋಪದ ಒಂದು ದಿನದ ನಂತರ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ (ಸೆಪ್ಟೆಂಬರ್ 12) ಪೋಲೆಂಡ್ನ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ರಾಡೋಸ್ಲಾವ್ ಸಿಕೋರ್ಸ್ಕಿ ಅವರೊಂದಿಗೆ ರಾಜತಾಂತ್ರಿಕ ಮಾತುಕತೆ ನಡೆಸಿದರು.
ಪೋಲೆಂಡ್ ನ ಭದ್ರತೆಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಜೈಶಂಕರ್ ತಮ್ಮ ಕಳವಳವನ್ನು ಹಂಚಿಕೊಂಡರು. ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು ಮತ್ತು ಭಾರತವು ಯುದ್ಧವನ್ನು ಶೀಘ್ರವಾಗಿ ಕೊನೆಗೊಳಿಸಲು ಮತ್ತು ಉಕ್ರೇನ್ ಸಂಘರ್ಷಕ್ಕೆ ಶಾಶ್ವತ ಪರಿಹಾರವನ್ನು ಬಯಸುತ್ತದೆ ಎಂದು ಜೈಶಂಕರ್ ಪುನರುಚ್ಚರಿಸಿದರು