ನವದೆಹಲಿ : ಆಭರಣ ಪ್ರಿಯರಿಗೆ ಬಿಗ್ ಶಾಕ್. ದೇಶಿಯಾ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, 1,13,100 ರೂ.ಗಡಿ ದಾಟಿದೆ.
ಗುರುವಾರ ರಾಷ್ಟ್ರ ರಾಜಧಾನಿ ದೆಹಗಲಿಯಲ್ಲಿ ಚಿನ್ನದ ಬೆಲೆ 100 ರೂ. ಏರಿಕೆಯಾಗಿದೆ. ಶೇ. 99.9ರಷ್ಟು ಶುದ್ಧತೆಯ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,13,100 ರೂ.ಗಳ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
2024ರ ಡಿಸೆಂಬರ್ 31ರವರೆಗೆ 78,950 ರೂ. ಇದ್ದ ಚಿನ್ನದ ಬೆಲೆಯಲ್ಲಿ ಈವರೆಗೆ 34,150 ರೂ. ಅಥವಾ ಶೇ. 43.25ರಷ್ಟು ಏರಿಕೆಯಾಗಿದೆ. ಶೇ. 99.5ರಷ್ಟು ಶುದ್ಧತೆಯ ಚಿನ್ನವೂ 100 ರೂ. ಏರಿಕೆಯಾಗಿ 1,12,600 ರೂ.ಗಳ ಹೊಸ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ. ಬೆಳ್ಳಿಯ ಬೆಲೆ ಗುರುವಾರ ಪ್ರತಿ ಕೆಜಿಗೆ 500 ರೂ. ಕಡಿಮೆಯಾಗಿ 1,28,000 ರೂ.ಗೆ ಇಳಿಕೆಯಾಗಿದೆ.