ಶಿವಮೊಗ್ಗ: ಇಂದು ರಾಷ್ಟ್ರೀಯ ಹುತಾತ್ಮರ ದಿನದಂದೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಹುತಾತ್ಮ ಅರಣ್ಯ ಇಲಾಖೆ ನೌಕರರ ಕುಟುಂಬಕ್ಕೆ ಪರಿಹಾರ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದರು. 30 ಲಕ್ಷದಿಂದ ಪರಿಹಾರದ ಮೊತ್ತವನ್ನು 50 ಲಕ್ಷಕ್ಕೆ ಹೆಚ್ಚಿಸಿದ್ದಂತ ಸರ್ಕಾರಕ್ಕೆ ಸಾಗರ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಂತೋಷ್ ಕುಮಾರ್ ಅಭಿನಂದನೆ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, ಅರಣ್ಯ ಇಲಾಖೆಯ ನೌಕರರ ಬೇಡಿಕೆಗಳು, ಸೌಲಭ್ಯಗಳಿಗೆ ಸರ್ಕಾರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಅರಣ್ಯ ಇಲಾಖೆಯ ನೌಕರರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಲು ನೆರವಾಗಬೇಕು. ಮಾನವ-ಪ್ರಾಣಿ ಸಂಘರ್ಷದಲ್ಲಿ ಹುತಾತ್ಮರಾದ ಅರಣ್ಯ ಇಲಾಖೆಯ ನೌಕರರಿಗೆ 30 ರಿಂದ 50 ಲಕ್ಷಕ್ಕೆ ಪರಿಹಾರ ಹೆಚ್ಚಿಸಿದ್ದಕ್ಕೆ ಸಚಿವ ಈಶ್ವರ್ ಖಂಡ್ರೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ನೌಕರರ ಪರವಾಗಿ ಸಂತೋಷ್ ಕುಮಾರ್ ಅಭಿನಂದನೆ ತಿಳಿಸಿದರು.
ಅರಣ್ಯ ಇಲಾಖೆಯ ನೌಕರರ ಇನ್ನೂ ಹಲವು ಬೇಡಿಕೆ ಈಡೇರೇಸುವ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಲಿ. ಆ ಮೂಲಕ ನೌಕರರ ಬೇಡಿಕೆ ಈಡೇರಿಸುವಂತ ಕೆಲಸವನ್ನು ಮಾಡುವಂತೆಯೂ ಮನವಿ ಮಾಡಿದ್ದಾರೆ.
ಸಾಗರದ ಕೊಗಾರಿನಲ್ಲಿ ಅರಣ್ಯ ಹುತಾತ್ಮರ ದಿನ ಆಚರಣೆ, ಗೌರವ ನಮನ ಸಲ್ಲಿಸಿದ ACF ಮಹೇಶ್ ಖಾತೇದಾರ್