ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ಗಣೇಶ ಮೂರ್ತಿ ಮೆರವಣಿಗೆ ವೇಳೆಯಲ್ಲಿ ಕಲ್ಲು ತೂರಾಟ ಘಟನೆ ಖಂಡಿಸಿ ಮದ್ದೂರು ಬಂದ್ ಮಾಡಲಾಗಿತ್ತು. ಈ ವೇಳೆಯಲ್ಲಿ ಪ್ರತಿಭಟನೆ ನಡೆಸಿದಂತ ಮಹಿಳೆ ಜ್ಯೋತಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಇದೀಗ ಇಂತಹ ಮಹಿಳೆ ಜ್ಯೋತಿ ಮೇಲೂ ಎಫ್ಐಆರ್ ದಾಖಲಿಸಲಾಗಿದೆ.
ಹೌದು. ಗಣೇಶನ ಗಲಾಟೆಯಲ್ಲಿ ಲಾಠಿ ಏಟು ತಿಂದ ಮಹಿಳೆ ಜ್ಯೋತಿ ಮೇಲೂ ಕೇಸ್ ಬಿದ್ದಿದೆ. ಪ್ರತಿಭಟನೆ ವೇಳೆ ಅವಹೇಳನಕಾರಿ ಹಾಗು ಪ್ರಚೋನಾದನಾಕಾರಿಯಾಗಿ ಘೋಷೆಣೆ ಕೂಗಿದ್ದಕ್ಕೆ FIR ದಾಖಲಿಸಲಾಗಿದೆ. ಮದ್ದೂರು ಪೊಲೀಸರು ಮಹಿಳೆ ಜ್ಯೋತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ. BNS 196(1) ಎ ಹಾಗು,299 ರ ಕಾಯ್ದೆ ಅಡಿ ಮಹಿಳೆ ವಿರುದ್ದ ಪ್ರಕರಣ ದಾಖಲಾಗಿದೆ.
ಸೆ.8 ರಂದು ಮದ್ದೂರಿನಲ್ಲಿ ಗಣೇಶನ ಮೆರವಣಿಗೆ ವೇಳೆ ಈ ಘಟನೆ ನಡೆದಿತ್ತು. ಮೆರವಣಿಗೆ ವೇಳೆ ಪೊಲೀಸರು ಈಕೆಯ ಮೇಲೆ ಲಾಠಿ ಚಾರ್ಜ್ ಮಾಡಿದ್ರು. ಮೆರವಣಿಗೆ ವೇಳ ಪ್ರಚೋದಾನಾಕಾರಿಯಾಗಿ ಮುಸ್ಲಿಂ ಸಮುದಾಯದ ವಿರುದ್ದ ಘೋಷಣೆ ಕೂಗಿದ್ದರು. ಅದಾದ ಬಳಿಕ ಮಾಧ್ಯಮಗಳಿಗೆ ಹೇಳಿಕೆ ಕೊಡುವಾಗ ಸಿ.ಎಂ.ವಿರುದ್ದ ಅಪೇಕ್ಷಾರ್ಹ ಪದ ಬಳಕೆ ಮಾಡಿದ್ದರು. ಈ ಸಂಬಂಧ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮದ್ದೂರು ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ದೂರಿನ ಅನ್ವಯ ಮದ್ದೂರಿನ ಶಿವಪುರ ನಿವಾಸಿ ಜ್ಯೋತಿ ವಿರುದ್ಧ ಪ್ರಕರಣ ದಾಖಲಾಗಿದೆ. ಅನ್ಯಧರ್ಮದ ಬಗ್ಗೆ ದಕ್ಕೆಯಾಗುವ ಪದ ಬಳಕೆಯ ಆರೋಪದಡಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಪರಸ್ಪರ ಕೋಮುಗಳ ನಡುವೆ ಪರಸ್ಪರ ವೈಮಸ್ಸು ,ವೈರತ್ವ ಉತ್ತೇಜನ ನೀಡುವ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈಗಾಗಲೇ ಮದ್ದೂರಲ್ಲಿ ಗಣೇಶ ಮೆರವಣಿಗೆ ವೇಳೆ ಗಲಾಟೆ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟು ತಿಂದು ಕಿರುಚಾಡಿದ್ದಂತ ಜ್ಯೋತಿ ವೀಡಿಯೋ, ಹೈಳಿಕೆ ಸಖತ್ ವೈರಲ್ ಆಗಿತ್ತು. ಈ ಬೆನ್ನಲ್ಲೇ ಜ್ಯೋತಿ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಈ ರೀತಿ 11 ದಿನಗಳ ಕಾಲ ಮನೆಯಲ್ಲಿ ಆಂಜನೇಯನನ್ನು ಪೂಜಿಸಿ, ನಿಮ್ಮ ಆಸೆಗಳು ಈಡೇರುತ್ತೆ
ಬೆಂಗಳೂರಲ್ಲಿ ಯುವತಿ ಪ್ರೀತಿಸುವ ವಿಚಾರಕ್ಕೆ ಯುವಕನನ್ನು ಚಾಕುವಿನಿಂದ ಇರಿದು ಕೊಲೆ