ಶಿವಮೊಗ್ಗ: ಸೊರಬ ಮತ್ತು ಸಾಗರ ಮುಖ್ಯರಸ್ತೆಯ ಅವಲಗೋಡು ಬಳಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವಂತ ಘಟನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಸೊರಬ-ಸಾಗರ ಮುಖ್ಯ ರಸ್ತೆಯ ಅವಲಗೋಡು ಬಳಿಯಲ್ಲಿ ಸೆ.10ರ ಬುಧವಾರ ರಾತ್ರಿ ಸುಮಾರು 7.30ರ ಹಾಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ 7 ತಿಂಗಳ ಹೆಣ್ಣು ಚಿರತೆ ಮರಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಅವಲಗೋಡು ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್ ಅವರು ಭೇಟಿ ನೀಡಿ, ಪರಿಶೀಲಿಸಿದರು. ಎಸಿಎಫ್ ಸುರೇಶ್ ಕುಳ್ಳಳ್ಳಿ ಹಾಗೂ ಆರ್ ಎಫ್ ಓ ಶ್ರೀಪಾದ್ ಈರಾನಾಯ್ಕ್ ಅವರ ಗಮನಕ್ಕೆ ತಂದಿದ್ದಾರೆ.
ಹುಲಿ ಮರಿಯ ಮರಣೋತ್ತರ ಪರೀಕ್ಷೆಯನ್ನು ಉಳವಿ ಪಶುವೈದ್ಯಾಧಿಕಾರಿ ಡಾ.ಶೈಲೇಶ್ ನಡೆಸಿದರು. ಈ ವೇಳೆ ಉಪ ವಲಯ ಅರಣ್ಯಾಧಿಕಾರಿ ಪರಶುರಾಮ್, ಶ್ರೀಶೈಲ್ ಕೇಂದಿ, ಯೋಗರಾಜ್, ಮುತ್ತಣ್ಣ, ಗಾರ್ಡ್ ಆನಂದ್, ಶಿಲ್ಪ, ಮೌನೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಇನ್ನೂ ಹಿರಿಯ ಅಧಿಕಾರಿಗಳ ಮುನ್ಸೂಚನೆಯಂತೆ ಕೋರ್ಟ್ ನಿಂದ ಅನುಮತಿ ಪಡೆದು, ಸುಮಾರು 7 ತಿಂಗಳ ಹೆಣ್ಣು ಚಿರತೆ ಮರಿಯನ್ನು ಅಂತ್ಯಕ್ರಿಯೆಯನ್ನು ಅರಣ್ಯಾಧಿಕಾರಿಗಳು ನೆರವೇರಿಸಿದ್ದಾರೆ.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
ಸಿ.ಟಿ ರವಿ ದ್ವೇಷ ಭಾಷಣ ಮಾಡಿದ್ದಕ್ಕೆ FIR ದಾಖಲು: ಸಚಿವ ರಾಮಲಿಂಗಾರೆಡ್ಡಿ ಸಮರ್ಥನೆ
BREAKING: ಮಹಿಳೆ ಮೇಲೆ ಕೈ ಮಾಡಿದ್ದ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡ್ರೈವರ್ ಕೆಲಸದಿಂದ ವಜಾ







