ಬೆಂಗಳೂರು : ರಾಷ್ಟ್ರೀಯ ಅರೋಗ್ಯ ಅಭಿಯಾನದಡಿ ಗುತ್ತಿಗೆ / ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುವ ಸಿಬ್ಬಂದಿಗಳು KAMS APP ನಲ್ಲಿ ಕಡ್ಡಾಯವಾಗಿ ಹಾಜರಾತಿ ದಾಖಲಿಸುವ ಕುರಿತು ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ /ಹೊರಗುತ್ತಿಗೆ ಮೂಲಕ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಕಛೇರಿಗೆ ಸರಿಯಾದ ಸಮಯಕ್ಕೆ ಬಾರದ ಬೆಳಿಗ್ಗೆ 10.00 ಗಂಟೆ ನಂತರವೇ ಕಛೇರಿಗೆ ಹಾಜರಾಗುತ್ತಿರುವುದು ಹಾಗೂ ಹಲವು ಸಿಬ್ಬಂದಿಗಳು ಸಂಜೆ 4.00/5.00 ಗಂಟೆಗೆ ಕಛೇರಿಯಿಂದ ಹೊರಡುತ್ತಿರುವುದನ್ನು ಗಮನಿಸಲಾಗಿರುತ್ತದೆ. ನಿಗದಿತ ಸಮಯಕ್ಕೆ ಹಾಜರಾಗದೇ ಇರುವುದು ಹಾಗೂ ಬೇಗನೇ ಕಛೇರಿಯಿಂದ ಹೊರಡುವುದರಿಂದ ದಿನ ನಿತ್ಯದ ಕಛೇರಿ ಕರ್ತವ್ಯಗಳಲ್ಲಿ ವಿಳಂಬತೆ ಉಂಟಾಗಿ ಸರಿಯಾದ ಸಮಯಕ್ಕೆ ಕಛೇರಿ ಕರ್ತವ್ಯಗಳು ಪೂರ್ಣಗೊಳ್ಳುತ್ತಿಲ್ಲ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಪ್ಪದೇ ಬೆಳಿಗೆ 10 ಗಂಟೆಗೆ ಕಛೇರಿಯ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಹಾಗೂ ಕಛೇರಿ ಅವಧಿಯಲ್ಲಿ ಸ್ಥಸ್ಥಾನದಲ್ಲಿರಬೇಕು. KAMS APP ನಲ್ಲಿ ಹಾಜರಾತಿ ದಾಖಲಿಸದ ಹಾಗೂ ಕಛೇರಿಯ ಸಮಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಸಂಬಂಧಪಟ್ಟ ನಿಯಂತ್ರಣಾಧಿಕಾರಿಗಳು ತಕ್ಷಣ ಕ್ರಮಕೈಗೊಂಡು ಮುಖ್ಯ ಆಡಳಿತಾಧಿಕಾರಿಗಳು, ರಾಷ್ಟ್ರೀಯ ಆರೋಗ್ಯ ಅಭಿಯಾನ ರವರಿಗೆ ವರದಿ ಸಲ್ಲಿಸುವುದು. ಕಛೇರಿಗೆ ಹಾಜರಾಗುವ ವೇಳೆ ಹಾಗೂ ಬಿಡುವ ವೇಳೆಯನ್ನು ಮೊಬೈಲ್ ಆಧಾರಿತ KAMS ಅಪ್ಲಿಕೇಷನ್ ಮೂಲಕ ಹಾಜರಾತಿ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಹಾಗೂ ಕಛೇರಿ ಸಮಯದ ಪಾಲನೆ ಮಾಡದೇ ಇರುವ ಸಿಬ್ಬಂದಿಗಳ ವೇತನವನ್ನು Pro-rata ಆಧಾರದ ಮೇರೆಗೆ ಕಡಿತಗೊಳಿಸಲಾಗುವುದು.
ಮುಂದುವರೆದು ಮೇಲಾಧಿಕಾರಿಗಳ ಅನುಮತಿ ಇಲ್ಲದೆ ಗೈರು ಹಾಜರಾಗುವ ಹಾಗೂ ತಡವಾಗಿ ಹಾಜರಾಗುವ ಮತ್ತು ಕಛೇರಿ ಅವಧಿ ಪೂರ್ಣಗೊಳ್ಳುವ ಮುನ್ನ ಹೊರಡುವ ಸಿಬ್ಬಂದಿಗಳ ವಿರುದ್ಧ ಯಾವುದೇ ಕಾರಣಕ್ಕೂ ಅವಕಾಶ ನೀಡದೇ ಶಿಸ್ತುಕ್ರಮ ಜರುಗಿಸಲಾಗುವುದು.