ಬೆಂಗಳೂರು: ಕೋಗಿಲು ಲೇಔಟ್ ನ ಸರ್ವೇ ನಂ-18,22,99 ಮತ್ತು 100ರ ಸರ್ಕಾರಿ ಜಾಗ ಹಾಗೂ ಸ್ಮಶಾನದ ಒತ್ತುವರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇಂದು ಯಲಹಂಕದ ತಹಸೀಲ್ದಾರ್ ಕಚೇರಿ ಬಳಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಹೆಚ್.ಸಿ. ತಮ್ಮೇಶ್ ಗೌಡ, ಬ್ಯಾಟರಾಯನಪುರ ನಗರ ಮಂಡಲ ಅಧ್ಯಕ್ಷರಾದ ಕೃಷ್ಣಮೂರ್ತಿ, ಬ್ಯಾಟರಾಯನಪುರ ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತೇಗೌಡ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು. ಕಂದಾಯ ಸಚಿವರ ಸ್ವಕ್ಷೇತ್ರದಲ್ಲೇ ಸರ್ಕಾರಿ ಭೂಮಿ ಒತ್ತುವರಿ ನಡೆದಿದೆ ಎಂದು ಪ್ರಮುಖರು ಆಕ್ಷೇಪಿಸಿದರು.
ಸರ್ಕಾರಿ ಸ್ಮಶಾನ ಸೇರಿದಂತೆ ಜಮೀನು ಒತ್ತುವರಿ ನಡೆದಿದೆ ಎಂದು ದೂರಿದರು. ಒತ್ತುವರಿ ವಿರುದ್ಧ ದೂರು ನೀಡಿದರೂ ಅಧಿಕಾರಿಗಳು ತೆರವು ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಬಿಜೆಪಿ ಪ್ರತಿಭಟನೆ ಎಂದು ವಿವರಿಸಿದರು. ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಸಚಿವರ ವಿರುದ್ದ ಆಕ್ರೋಶ ಹೊರ ಹಾಕಲು ಬಿಜೆಪಿ ಕಾರ್ಯಕರ್ತರು ಬಂದಿದ್ದರು.
ಒತ್ತುವರಿ ತೆರವುಗೊಳಿಸದಿದ್ದಲ್ಲಿ ಸಚಿವರ ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆ ವೇಳೆ ಪೋಲೀಸರು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಯಲಹಂಕ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ತಡೆ ಒಡ್ಡಲಾಯಿತು.
ಪೋಲೀಸರಿಂದ ಹೋರಾಟ ಹತ್ತಿಕ್ಕುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ಹೊರಹಾಕಿದರು. ಬಳಿಕ ಪ್ರತಿಭಟನಾನಿರತ ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದರು. ಅಲ್ಲದೇ ಬಿಎಂಟಿಸಿ ಬಸ್ ಮೂಲಕ ಪ್ರತಿಭಟನಾಕಾರರನ್ನು ಪೋಲೀಸರು ವಶಕ್ಕೆ ಪಡೆದು ಕರೆದೊಯ್ದರು.
ಮುಂಜಾಗ್ರತಾ ಕ್ರಮವಾಗಿ ಯಲಹಂಕ ತಾಲ್ಲೂಕು ಕಚೇರಿ ಗೇಟ್ ಬಂದ್ ಮಾಡಿದ್ದು ಕಂಡುಬಂತು. ಪ್ರತಿಭಟನಾಕಾರರು ಒಳ ಪ್ರವೇಶಿಸದಂತೆ ಗೇಟ್ ಬಂದ್ ಮಾಡಿದ್ದು, ಗೇಟಿನ ಮುಂಭಾಗದಲ್ಲಿ ಪೋಲೀಸರನ್ನು ನಿಯೋಜಿಸಿದ್ದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 561 ಮಂದಿ ಕೌನ್ಸೆಲಿಂಗ್ ಮೂಲಕ ಸ್ಥಳದಲ್ಲೇ ವರ್ಗಾವಣೆ ಆದೇಶ