ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ನೆರವಿಗೆ ಅಕ್ಕ ಪಡೆ ಸಿದ್ಧವಾಗಿದೆ. ಈ ಅಕ್ಕ ಪಡೆಯನ್ನು ಬೆಂಗಳೂರಲ್ಲಿ ನವೆಂಬರ್.19ರಂದು ಚಾಲನೆ ನೀಡಲಾಗುತ್ತದೆ.
ಈ ಕುರಿತಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದು, ಸಂಕಷ್ಟದಲ್ಲಿ ಇರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು ʼಅಕ್ಕ ಪಡೆʼಗಳನ್ನು ಸ್ಥಾಪಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನವೆಂಬರ್ 19 ರಂದು ಚಾಲನೆ ನೀಡಲಾಗುವುದು. ಮೈಸೂರು, ಉಡುಪಿ ಮತ್ತು ಬೆಳಗಾವಿಯಲ್ಲೂ ಅಕ್ಕ ಪಡೆಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ ಎಂದಿದ್ದಾರೆ.
10 ರಿಂದ 15 ಜನರ ತಂಡ ಇರಲಿದ್ದು, ಎನ್‌ಸಿಸಿ ಹಿರಿಯ ಕೆಡೆಟ್‌ಗಳು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಗಳನ್ನು ಒಳಗೊಂಡಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.
ಸಂಕಷ್ಟದಲ್ಲಿ ಇರುವ ಮಕ್ಕಳು ಮತ್ತು ಮಹಿಳೆಯರಿಗೆ ನೆರವಾಗಲು ʼಅಕ್ಕ ಪಡೆʼಗಳನ್ನು ಸ್ಥಾಪಿಸುತ್ತಿದ್ದೇವೆ. ಬೆಂಗಳೂರಿನಲ್ಲಿ ನವೆಂಬರ್ 19 ರಂದು ಚಾಲನೆ ನೀಡಲಾಗುವುದು. ಮೈಸೂರು, ಉಡುಪಿ ಮತ್ತು ಬೆಳಗಾವಿಯಲ್ಲೂ ಅಕ್ಕ ಪಡೆಗಳು ಪ್ರಾಯೋಗಿಕವಾಗಿ ಜಾರಿಗೆ ಬರಲಿದೆ. 10 ರಿಂದ 15 ಜನರ ತಂಡ ಇರಲಿದ್ದು, ಎನ್‌ಸಿಸಿ ಹಿರಿಯ ಕೆಡೆಟ್‌ಗಳು ಮತ್ತು ಮಹಿಳಾ… pic.twitter.com/op9pVPObSk
— DIPR Karnataka (@KarnatakaVarthe) September 10, 2025
ಐಸಿಸಿ ಮಹಿಳಾ ವಿಶ್ವಕಪ್ 2025ರ ಎಲ್ಲಾ 8 ತಂಡಗಳು ಪ್ರಕಟ | ICC Womens World Cup 2025