ಮಂಡ್ಯ: ಇಂದು ಮದ್ಧೂರಲ್ಲಿ 20ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ಸಾಮೂಹಿಕವಾಗಿ ಮೆರವಣಿಗೆ ಮೂಲಕ ಕೊಂಡೊಯ್ದು, ವಿಸರ್ಜನೆ ಮಾಡಲಾಗಿದೆ. ಅಂದು ಕಲ್ಲು ತೂರಿ ಅವಮಾನ ಮಾಡಿದ್ರು. ಇಂದು ಅತ್ಯಂತ ಅಭಿಮಾನದಿಂದ ಸಾಮೂಹಿಕ ಗಣೇಶ ಮೆರವಣಿಗೆ ಮಾಡಿ, ವಿಸರ್ಜನೆ ಮಾಡಲಾಯಿತು ಎಂಬುದಾಗಿ ಬಿಜೆಪಿ ಮುಖಂಡ ಎಸ್ ಪಿ ಸ್ವಾಮಿ ತಿಳಿಸಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಅಂದು ಕಲ್ಲು ತೂರಿ ಗಣಪತಿಗೆ ಅಪಮಾನ ಮಾಡಿದ್ರು. ಇಂದು ಅತ್ಯಂತ ಅಭಿಮಾನದಿಂದ ಸಾಮೂಹಿಕ ಗಣೇಶ ಮೆರವಣಿಗೆ, ವಿಸರ್ಜನೆ ಆಗಿದೆ. ಇಂದಿನ ಕಾರ್ಯಕ್ರಮ 50 ಸಾವಿರ ಜನರ ನಿರೀಕ್ಷೆ ಇತ್ತು. ಅಷ್ಟೆ ಪ್ರಮಾಣದ ಜನರು ಇವತ್ತು ಸೇರಿದ್ದರು ಎಂದರು.
28 ಗಣಪತಿ ಬರಬೇಕಿತ್ತು. 20ಕ್ಕೂ ಹೆಚ್ಚು ಗಣಪತಿಗಳ ಸಾಮೂಹಿಕ ಮೆರವಣಿಗೆ, ವಿಸರ್ಜನೆ ಮಾಡಲಾಗಿದೆ. ಅಂದು ಪೆಟ್ಟು ತಿಂದ ಕಾರಣಕ್ಕೆ ಇಂದು ಹಿಂದೂ ಸಮಾಜ ಒಂದಾಗಿದೆ. ಹೀಗಾಗಿ ಪೆಟ್ಟು ತಿಂದವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಇಂದಿನ ಕಾರ್ಯಕ್ರಮದ ಯಶಸ್ವಿಗೆ ಕಾರಣಕರ್ತರಾದ ಎಲ್ಲರಿಗೂ ಅಭಿನಂದನೆಗಳು, ಧನ್ಯವಾದಗಳನ್ನು ತಿಳಿಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನೂತನ ನಿರ್ದೇಶಕರಾಗಿ ಡಾ.ದಿನೇಶ್ ನೇಮಕ