ಮಂಡ್ಯ: ಜಿಲ್ಲೆಯ ಮದ್ದೂರಲ್ಲಿ ಅದ್ಧೂರಿಯಾಗಿ ಸಾಮೂಹಿಕವಾಗಿ ಗಣಪತಿ ವಿಸರ್ಜನೆ ಮಾಡಲಾಯಿತು. ಈ ಮೂಲಕ ಬೃಹತ್ ಮೆರವಣಿಗೆ ಮೂಲಕ ಹಿಂದೂಗಳ ಶಕ್ತಿ ಪ್ರದರ್ಶನದ ಮೂಲಕ ಗಣಪತಿ ವಿಸರ್ಜನೆ ಮೆರವಣಿಗೆಗೆ ತೆರೆ ಬಿದ್ದಿದೆ.
ಮಂಡ್ಯದ ಮದ್ದೂರಲ್ಲಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಗಲಾಟೆ ಕಲ್ಲು ತೂರಾಟ ನಡೆದಿತ್ತು. ಈ ಬಳಿಕ ಇಂದು ಮದ್ದೂರಲ್ಲಿ 14 ಗಣಪತಿಗಳನ್ನು ಸಾಮೂಹಿಕವಾಗಿ ವಿಸರ್ಜನೆ ಮಾಡಲು ನಿರ್ಧರಿಸಲಾಗಿತ್ತು. ಅದರಂತೆ ಬೃಹತ್ ಮೆರವಣಿಗೆ ಮೂಲಕ ಇಂದು ಮದ್ದೂರಲ್ಲಿ ಸಾಮೂಹಿಕವಾಗಿ ಗಣಪತಿಯನ್ನು ವಿಸರ್ಜನೆ ಮಾಡಲಾಯಿತು.
ಐತಿಹಾಸಿಕ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು. ಗಣಪತಿ ಮೆರವಣಿಗೆಗೆ ಕಲ್ಲು ಹೊಡೆದದ್ದು ಖಂಡಿಸಿ ನಡೆದ ಮೆರವಣಿಗೆ ಇದಾಗಿತ್ತು. ಸುಮಾರು 3.5 ಕಿಲೋ ಮೀಟರ್ ಬೃಹತ್ ಮೆರವಣಿಗೆ ನಡೆಯಿತು. ಸತತ ಐದು ಗಂಟೆಗಳ ಕಾಲ ಮೆರವಣಿಗೆ ಸಾಗಿತು.
ಡಿಜೆ ಸದ್ದಿಗೆ ಸಾವಿರಾರು ಜನರು ಕುಣಿದು ಕುಪ್ಪಳಿಸಿದರು. ಶಿಂಷಾ ನದಿಯ ತಟದವರೆಗೆ ಸಾಗಿದಂತ ಮೆರವಣಿಗೆಯು, 14 ಗಣಪತಿಗಳನ್ನು ಸಾಮೂಹಿಕವಾಗಿ ಶಿಂಷಾ ನದಿಯಲ್ಲಿ ವಿಸರ್ಜನೆ ಮಾಡಲಾಯಿತು.
ವರದಿ: ಗಿರೀಶ್ ರಾಜ್, ಮಂಡ್ಯ
BREAKING: ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಒಳಮೀಸಲಾತಿ ಪ್ರತಿಭಟನಾಕಾರರು ಪೊಲೀಸರು ವಶಕ್ಕೆ