ಚಿತ್ರದುರ್ಗ: ಗಣೇಶ ಮೆರವಣಿಗೆ ಸಮಯದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್ ಮತ್ತು ಪಟಾಕಿಗಳನ್ನು ಸಿಡಿಸಿದ್ದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಸಂಘಟಕರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಕುರಿತಂತೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಚಿತ್ರದುರ್ಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳ ಆದೇಶ ಸಂಖ್ಯೆ ನಂ.ಎಂ.ಎ.ಜಿ(3)ಸಿಆರ್/808641/205-26 ದಿನಾಂಕ.31.08.2025 ರಲ್ಲಿ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ.27.08.2025 ರಿಂದ ದಿನಾಂಕ.15.09.2025 ರವರೆಗೆ ಗಣೇಶ ಮತ್ತು ಈದ್ ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ರೀತಿಯ ಕಲರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಿರುವ ಆದೇಶದ ಮಾಹಿತಿಯನ್ನು ದಿನಾಂಕ.08.09.2025 ರಂದು ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರು ಹಾಗೂ ಸಂಘಟಕರಿಗೆ ಮಾಹಿತಿಯನ್ನು ತಿಳಿಸಿ ನೊಟೀಸ್ ಜಾರಿ ಮಾಡಲಾಗಿತ್ತು ಎಂದಿದೆ.
ಆದಾಗ್ಯೂ ಸಹಾ ದಿನಾಂಕ.08.09.2025 ರಂದು ವಿರಾಟ್ ಹಿಂದೂ ಮಹಾ ಸಾಗರ ಗಣಪತಿಯ ಮೆರವಣಿಗೆ ವೇಳೆಯಲ್ಲಿ ಮದ್ಯಾಹ್ನ 3.30 ಪಿ.ಎಂ ಸಮಯದಲ್ಲಿ ಹೊಸದುರ್ಗ ಪಟ್ಟಣದ ಜೂನಿಯರ್ ಕಾಲೇಜ್ ಮುಂಭಾಗದಲ್ಲಿ ಕಲರ್ ಪೇಪರ್ ಬ್ಲಾಸ್ಟಿಂಗ್ ಮಾಡಿದ್ದು ಹಾಗೂ ಸಂಜೆ 8.00 ಗಂಟೆ ಸಮಯದಲ್ಲಿ ಹೊಸದುರ್ಗ ಪಟ್ಟಣದ ಹಿರಿಯೂರು ಸರ್ಕಲ್ ಸಮೀಪದಲ್ಲಿ ಪಟಾಕಿ/ಸಿಡಿಮದ್ದನ್ನು ಸಿಡಿಸಿರುತ್ತಾರೆ.
ಆದ್ದರಿಂದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿ ಕಲರ್ ಪೇಪರ್ ಬ್ಲಾಸ್ಟಿಂಗ್ ಹಾಗೂ ಪಟಾಕಿ/ಸಿಡಿಮದ್ದನ್ನು ಸಿಡಿಸಿದ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಅಧ್ಯಕ್ಷರಾದ ಪ್ರದೀಪ ಹಾಗೂ ಮೆರವಣಿಗೆ ಮುಂದಾಳತ್ವ ವಹಿಸಿದ ಶಿವರಾಜ್ ಕುಮಾರ್ @ ಶಿವು ಹಾಗೂ ಸಂಘಟನೆಯ ಸಂಘಟಕರ ವಿರುದ್ಧ ಹೊಸದುರ್ಗ ಪೊಲೀಸ್ ಠಾಣೆ ಮೊ.ನಂ.416/2025 ಕಲಂ.292 ಬಿ.ಎನ್.ಎಸ್ ಹಾಗೂ ಕಲಂ.108, 109 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿರುತ್ತದೆ ಎಂಬುದಾಗಿ ತಿಳಿಸಿದೆ.
ಸಿಯಾಚಿನ್ ನಲ್ಲಿ ಭೀಕರ ಹಿಮಪಾತ, ಮೂವರು ಭಾರತೀಯ ಯೋಧರು ಹುತಾತ್ಮ | Major Avalanche at Siachen
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: 4ನೇ ರೈಲು ಸೆಟ್ ಕಾರ್ಯಾಚರಣೆ, ಹೀಗಿದೆ ವೇಳಾಪಟ್ಟಿ