ಮಂಡ್ಯ: ಮದ್ದೂರಲ್ಲಿ ಗಣೇಶ ಮೂರ್ತಿ ಮೆರವಣಿಗೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದಂತ ಹಿಂದೂ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗೆ ಅರೆಸ್ಟ್ ಆಗಿರುವ ನಮ್ಮ ಹಿಂದು ಯುವಕರನ್ನ ಬಿಡುಗಡೆ ಮಾಡಬೇಕು. ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಲು ಅವಕಾಶ ಕೊಡಬೇಕು. ಲಾಠಿ ಪ್ರಹಾರ ಮಾಡಿದ ಅಧಿಕಾರಿ ವಿರುದ್ದ ಕ್ರಮ ಆಗಬೇಕು ಎಂಬುದಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಆಗ್ರಹಿಸಿದ್ದಾರೆ.
ಇಂದು ಮಂಡ್ಯದ ಮದ್ದೂರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸಿರುವಂತ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಸಮಾಧಾನದಿಂದ ಹೋರಾಟ ಮಾಡುವಂತೆ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ. ಹೋರಾಟದಲ್ಲಿ ಬೆಂಬಲವಾಗಿ ನಿಂತಿರುವ ಜೆಡಿಎಸ್ ಮುಖಂಡರು. ನಿಖಿಲ್ ಕುಮಾರಸ್ವಾಮಿ ಹಾಗೂ ಕುಮಾರಸ್ವಾಮಿ ಯವರಿಗೆ ಹಾಗೂ ಪಕ್ಷಾತೀತವಾಗಿ ಬಂದಿರುವ ಕಾಂಗ್ರೆಸ್ ಕಾರ್ಯಕರ್ತರೆ ಎಂದ ಪ್ರತಾಪ್ ಸಿಂಹ ಹೇಳಿದರು.
ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಸಿದ್ದರಾಮಯ್ಯ ಚಾಮುಂಡಿಗೆ ಅವಮಾನ ಮಾಡಿದ್ರು. ಮಹಿಷ ದಸರ ಮಾಡಲು ಮುಂದಾಗಿದ್ರು ಅದನ್ನ ಮೆಟ್ಟಿ ನಿಂತಿದ್ದೇವೆ. ಇದೆ ರೀತಿ ಇಲ್ಲು ಹೋರಾಟಗಳು ಆಗಬೇಕು. ಭಾಷಣದ ವೇಳೆ ಹೋರಾಟಗಾರರ ಆಗ್ರಹಿಸಿದರು. ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಕರೆಸುವಂತೆ ಒತ್ತಾಯಿಸಿದರು. ಚುನಾವಣೆ ಸಂದರ್ಭ ಉದಯ್ ಕಾಸಿಗೆ ಓಟ್ ಹಾಕಿಬಿಡ್ತಿರಿ. ಜೂಜಾಡಿಸೋರಿಗೆ ಓಟ್ ಹಾಕಿದ್ರಿ. ಈ ಹಿಂದೆ ನಾನು ಹೇಳಿದ್ದೆ ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ಕನ್ನಡದ ಸರ್ಕಾರ ಅಲ್ಲಾ ತಾಲಿಬಾನ್ ಸರ್ಕಾರ ನಿರ್ಮಾಣ ಆಗತ್ತೆ ಅಂತ. ಮುಸ್ಲಿಮರು ಎಂದು ಶಾಂತಿಯಿಂದ ಇಲ್ಲ. ಇಲ್ಲಿ ಅನ್ನ ತಿಂದು ಗಡಿ ಆಚೆಗಿನ ನಿಷ್ಠೆ ತೋರಿಸ್ತಾರೆ ಎಂಬುದಾಗಿ ತಿಳಿಸಿದರು.
ಮಸೀದಿಯ ಒಳಗೆ ಕಲ್ಲು ಹೇಗೆ ಬಂತು? ಕಲ್ಲು ತಂದ ಮುಲ್ಲಾ ಯಾರು? ಅದರ ಬಗ್ಗೆ ತನಿಖೆ ಆಗಬೇಕು. ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಹಾರ ಮಾಡಿದವರ ವಿರುದ್ದ ಕ್ರಮ ಆಗಬೇಕು. ನಮ್ಮ ಹುಡುಗ್ರು ಯಾರು ಕಲ್ಲು ಹೊಡೆಯುವ ಸಂಸ್ಕೃತಿ ಇಲ್ಲ. ಆ ಮಸೀದಿಯ ಮುಲ್ಲನನ್ನ ಅರೆಸ್ಟ್ ಮಾಡಬೇಕು. ಮಸೀದಿ ಸೀಜ್ ಮಾಡಬೇಕು. ಮಸೀದಿ ಮುಚ್ಚಿಸುವ ಭಸವರೆ ಕೊಟ್ರೆ ಪ್ರತಿಭಟನೆ ಕೈಬಿಡ್ತಿವಿ ಎಂದರು.
ವರದಿ: ಗಿರೀಶ್ ರಾಜ್, ಮಂಡ್ಯ