ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ-ತಾಳಗುಪ್ಪ ನಡುವೆ ಬರುವ ಎಲ್‌ಸಿ.ನಂ: 133,134,147,152 ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಸೆ.07 ರಿಂದ ಸೆ.14ರವರೆಗೆ ವಿವಿಧ ದಿನಗಳಂದು ತಾತ್ಕಾಲಿಕವಾಗಿ ವಾಹನಗಳು ಮತ್ತು ಸಾರ್ವಜನಿಕರು ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿರುತ್ತಾರೆ.
ಎಲ್‌ಸಿ 133- ಶ್ರೀನಗರ ರಸ್ತೆ ರೈಲು ನಿಲ್ದಾಣ ಸೆ. 07 ಮತ್ತು 08 ರಂದು ಸಾಗರ ಟೌನ್-ಭಗವತಿ ದೇವಸ್ಥಾನ ರಸ್ತೆ-ಅಬಕಾರಿ ಇಲಾಖೆ ಕಚೇರಿ-ಶ್ರೀನಗರ. ಎಲ್‌ಸಿ 134-ಶಿರವಾಳ ರಸ್ತೆ ರೈ.ನಿ.-ಸೆ.09 ಮತ್ತು 10 ರಂದು ಸಾಗರ ಟೌನ್-ಶಿರವಾಳದಿಂದ ಅಣಲೇಕೊಪ್ಪ.
ಎಲ್‌ಸಿ 152-ಗದ್ದೆಮನೆ ರಸ್ತೆ ರೈ.ನಿ.-ಸೆ.13 ಮತ್ತು 14 ರಂದು ಸಾಗರದ ಕಡೆಯಿಂದ ಹೋಗುವ ವಾಹನಗಳು ಕಾನ್ಲೆ ಕ್ರಾಸ್‌ನಿಂದ ರೈಲ್ವೇ ಗೇಟ್ 148 ಪಡವಗೋಡು-ಹೊಂಕೇರಿ-ತಾಳಗುಪ್ಪ ವಾರ್ಗವಾಗಿ ಸಿದ್ದಾಪುರ/ಹೊನ್ನಾವರ. ಸಾಗರದಿಂದ ಸಿದ್ದಾಪುರ ಎಲ್.ಸಿ.130 ಮುಖಾಂತರ ಕಾಗೋಡುನಿಂದ ಸೈದೂರು ಕ್ರಾಸ್ (ಸಾಗರದಿಂದ ಕೆಳದಿ ರಸ್ತೆ-ಕಾಗೋಡು-ತಾಳಗುಪ್ಪ/ಸಿದ್ದಾಪುರ).
ಎಲ್‌ಸಿ 14-ಗದ್ದೆಮನೆ ರಸ್ತೆ ರೈ.ನಿ.-ಸೆ.13 ಮತ್ತು 14 ರಂದು ಎಲ್‌ಸಿ 148 ಪಡವಗೋಡು-ಹೊಂಕೇರಿ ಮೂಲಕ ತಾಳಗುಪ್ಪ/ಸಿದ್ದಾಪುರ. ಈ ಬದಲಿ ಮಾರ್ಗಗಳಲ್ಲಿ ಸಂಚರಿಸಿ ಇಲಾಖೆಯಿಂದ ಸಹಕರಿಸುವಂತೆ ಕೋರಿದೆ.
ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಕೇಸ್: ಜಗದೀಶ್ ಆಲಿಯಾಸ್ ಜಗ್ಗನ ವಿರುದ್ಧ ಮತ್ತೆ ರೌಡಿಶೀಟ್ ಓಪನ್