ಬೆಂಗಳೂರು : ಬೆಂಗಳೂರಲ್ಲಿ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣ ಸಂಬಂಧ ಇಂದು ಆರೋಪಿ ಜಗದೀಶ್ ಅಲಿಯಾಸ್ ಜಗ್ಗನ ವಿರುದ್ಧ ಮತ್ತೆ ರೌಡಿಶೀಟ್ ಓಪನ್ ಮಾಡಲಾಗಿದೆ.
ಹೌದು, ಬೆಂಗಳೂರಿನ ಭಾರತಿನಗರ ಪೊಲೀಸರಿಂದ ಜಗದೀಶ್ ವಿರುದ್ಧ ಮತ್ತೆ ರೌಡಿಶೀಟ್ ಓಪನ್ ಮಾಡಲಾಗಿದೆ. ಅಪರಾಧ ಪ್ರಕರಣಗಳ ಹಿನ್ನೆಲೆಯನ್ನು ಹೊಂದಿರುವ ಜಗದೀಶ್ ಬಿಜೆಪಿ ಶಾಸಕ ಭೈರತಿ ಬಸವರಾಜ್ ಪ್ರಭಾವ ಬಳಕೆ ಆರೋಪ, ಶಾಸಕರ ಪ್ರಭಾವ ಬಳಸಿ ರೌಡಿಪಟ್ಟಿಯಿಂದ ತೆಗೆಯಲಾಗಿತ್ತು. 2023 ರ ಸೆಪ್ಟೆಂಬರ್ ನಲ್ಲಿ ರೌಡಿಪಟ್ಟಿಯಿಂದ ಕೈಬಿಡಲಾಗಿತ್ತು. ಜಗದೀಶ್ ಅಲಿಯಾಸ್ ಜಗ್ಗನ ವಿರುದ್ಧ ಮತ್ತೆ ರೌಡಿಶೀಟ್ ಓಪನ್ ಮಾಡಲಾಗಿದೆ.
ಕಳೆದ ಜುಲೈ.15ರಂದು ಬೆಂಗಳೂರಿನ ಭಾರತಿನಗರದಲ್ಲಿ ಬಿಕ್ಲು ಶಿವ ಕೊಲೆಯಾಗಿತ್ತು. ಈ ಕೊಲೆಯಲ್ಲಿ ಜಗದೀಶ್ ಎ.1 ಆರೋಪಿಯಾಗಿದ್ದರು. ಕೊಲೆಯ ಬಳಿಕ ಚೆನ್ನೈ ಏರ್ ಪೋರ್ಟ್ ಮೂಲಕ ದುಬೈಗೆ ಎಸ್ಕೇಪ್ ಆಗಿದ್ದನು.